ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಸಮಯದಲ್ಲಿ ಬದಲಾವಣೆಯಾಗಿದೆ.
ದೀಪಾವಳಿ ಬಳಿಕ ನವೆಂಬರ್ 4 ರಿಂದ ರಂಗಪೂಜೆ, ಬೆಳ್ಳಿರಥೋತ್ಸವ, ಪಲ್ಲಕ್ಕಿ ಉತ್ಸವ ಮೊದಲಾದ ವಿಶೇಷ ಪೂಜೆ, ಉತ್ಸವಾದಿ ಸೇವೆಗಳು ನಡೆಯುವ ಕಾರಣ ದೇವರ ದರ್ಶನಕ್ಕೆ ಸಮಯಾವಕಾಶ ಹೊಂದಿಸಲಾಗಿದೆ.
ದರ್ಶನ ಸಮಯ: ಬೆಳಗ್ಗೆ 6ರಿಂದ ಮಧ್ಯಾಹ್ನ 2.30, ಸಂಜೆ 5ರಿಂದ ರಾತ್ರಿ 8.30. (ವಿಶೇಷ ದಿನಗಳಲ್ಲಿ ಸಮಯ ವ್ಯತ್ಯಾಸ ಆಗುವ ಸಾಧ್ಯತೆ ಇದೆ)
ಛತ್ರದಲ್ಲಿ ಬೆಳಗ್ಗೆ 10.30ರಿಂದ 3 ಹಾಗೂ ರಾತ್ರಿ 7ರಿಂದ 9 ರವರೆಗೆ ಅನ್ನಪ್ರಸಾದದ ವ್ಯವಸ್ಥೆ ಇರಲಿದೆ.
ಬೀಡಿನಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಬೆಳಗ್ಗೆ 9ರಿಂದ ಮಧ್ಯಾಹ್ನ 12, ಸಂಜೆ 4ರಿಂದ 5 ಹಾಗೂ ರಾತ್ರಿ 7ರಿಂದ 9 ರವರೆಗೆ ಭೇಟಿ ಮಾಡಬಹುದು.
ಹರಕೆ ಮುಡು ತೆಗೆಯುವುದು ಬೆಳಗ್ಗೆ6ರಿಂದ ಮಧ್ಯಾಹ್ನ 2, ಸಂಜೆ 5ರಿಂದ ರಾತ್ರಿ 7 ರವರೆಗೆ ತೆರೆದಿರಲಿದೆ ಎಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದೆ.