ಬೆಳಕಿನ ಹಬ್ಬ ದೀಪಾವಳಿಯಂದು ನೀರು ತುಂಬಿಸುವುದು, ನರಕ ಚತುರ್ದಶಿ ಸ್ನಾನ, ಹೀಗೆ ಬೇರೆ ಬೇರೆ ಸಂಪ್ರದಾಯಗಳನ್ನು ಯಾವ ದಿನದಂದು, ಯಾವ ಸಮಯಕ್ಕೆ ಮಾಡಿದರೆ ಒಳ್ಳೆಯದು ಎನ್ನುವುದರ ಬಗ್ಗೆ ಕೆಲವರಿಗೆ ಗೊಂದಲ ಇರುತ್ತದೆ. ಅದಕ್ಕಾಗಿ ಇಲ್ಲಿ ಮಾಹಿತಿ ನೀಡಲಾಗಿದೆ.
ಈ ಬಾರಿಯ ದೀಪಾವಳಿ ಆಚರಣೆ ಹೀಗಿರಲಿದೆ ಎಂದು ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ಹಾಗೂ ಜ್ಯೋತಿಷಿ ಎಂ. ಶ್ರೀಪತಿ ಅಡಿಗ ಮಾಹಿತಿ ಹಂಚಿಕೊಂಡಿದ್ದಾರೆ.
ನವಂಬರ್ 3, 2021, ಬುಧವಾರದಂದು ರಾತ್ರಿ ನೀರು ತುಂಬಿಸುವುದು, 4 ರಂದು ಬೆಳಗ್ಗೆ 5.38 ಕ್ಕೆ ನರಕ ಚತುರ್ದಶಿ ಸ್ನಾನ, ಅಂದು ಸಂಜೆ ಲಕ್ಷ್ಮೀ ಪೂಜೆ, ಗದ್ದೆಗಳಿಗೆ ದೀಪ ಇಡುವುದು, ದೀಪಾವಳಿ ಹಬ್ಬ. 5 ರಂದು ಬೆಳಗ್ಗೆ ಗೋಪೂಜೆ.