ದೀಪಾವಳಿ ಹಬ್ಬ ಮತ್ತೆ ಬಂದಿದೆ. ಈ ಐದು ದಿನ ಈ ಹಬ್ಬದ ಆಚರಣೆಯಲ್ಲಿ ಅನೇಕ ಸಂಪ್ರದಾಯ, ಪದ್ಧತಿಗಳು ನಡೆಯುತ್ತವೆ.
ಇಂತಹ ಪದ್ಧತಿಗಳಲ್ಲಿ ಯಮದೀಪ ಇಡುವುದು ಕೂಡಾ ಒಂದು. ಈ ಪದ್ಧತಿಯನ್ನು ನವೆಂಬರ್ 2 ರಂದು ಸಂಜೆ ಆಚರಿಸಲಾಗುತ್ತದೆ. ಸಂಧ್ಯಾಕಾಲದಲ್ಲಿ ಅಂದರೆ ಸೂರ್ಯಾಸ್ತದ ಸಂದರ್ಭದಲ್ಲಿ ಅಂಗಳದಲ್ಲಿ ತುಳಸಿಕಟ್ಟೆಯ ಹತ್ತಿರ ದಕ್ಷಿಣಕ್ಕೆ ಮುಖ ಮಾಡಿ ಕಬ್ಬಿಣದ ತಟ್ಟೆಯಲ್ಲಿ ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಪ್ರಾರ್ಥನೆಯೊಂದಿಗೆ ನಮಸ್ಕರಿಸಬೇಕು.
ಮೃತ್ಯನಾ ಪಾಶದಂಡಾಭ್ಯಾA ಕೇಲೇನ ಶ್ಯಾಮಯಾ ಸಹ
ತ್ರಯಫದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ
(ಕಾಲ ಮತ್ತು ಮೃತ್ಯ ದೇವತೆಗಳೊಡನಿರುವ ಸೂರ್ಯನ ಮಗನಾದ ಪಾಶದಂಢ ಹಿಡಿದ ಶ್ಯಾಮಲಾಪತಿ ಯಮನು ಯಮಾಂತರ್ಯಾಮಿ ಸೂರ್ಯವಂಶಜ ರಾಮ ಪ್ರೀತನಾಗಲಿ)
ಮನೆಯವರೆಲ್ಲರೂ ಪ್ರತಿಯೊಬ್ಬರೂ (ಸ್ತ್ರೀ – ಬಾಲ- ವೃದ್ಧರಾದಿಯಾಗಿ) ಮೊದಲ ಶ್ಲೋಕ ಹೇಳಿ ದೀಪ ಹಚ್ಚಿಟ್ಟು ಯಮನಿಗೆ ನಾಮ ಮಂತ್ರಗಳಿ0ದ ನಮಿಸಬೇಕು.
ಯಮಾಯ ಧರ್ಮರಾಜಾಯ ಮೃತ್ಯವೇ ಚಾಂತಕಾಯ ಚ
ವೈವಸ್ಥಾಯ ಕಾಲಾಯ ಸರ್ವಭೂತ ಕ್ಷಯಾಯ ಚ
ಔದುಂಬರಾಯ ದಧ್ನಾಯ ನೀಲಾಯ ಪರಮೇಷ್ಠಿನೇ
ವೃಕೋದರಾಯ ಚಿತ್ರಾಯ ಚಿತ್ರಗುಪ್ತಾಯ ವೈ ನಮಃ
(ಒಂದೇ ದೀಪವಾದರೆ ಅದೇ ದೀಪವನ್ನು ಪ್ರತಿಯೊಬ್ಬರೂ ಎತ್ತಿಟ್ಟರಾಯಿತು.)
(ಆಶ್ವಿನಸ್ಯಾಸಿತೇ ಪಕ್ಷೇ ತ್ರಯೋದಶ್ಯಾಂ ನಿಶಾಮುಖೇ
ಯಮ ದೀಪಂ ಬಹಿರ್ದದ್ಯಾತ್ ಅಪಮೃತ್ಯುರ್ವಿನಶ್ಯತಿ)
ಸಂಗ್ರಹ: ಡಾ.ಶತಾವಧಾನಿ ಉಡುಪಿ ರಾಮನಾಥ ಆಚಾರ್ಯ