ಬೆಂಗಳೂರು: ಶ್ರೀ ವಿಜಯದಾಸರ ಆರಾಧನೆ ಪ್ರಯುಕ್ತ ದಾಸವಾಣಿ ಸಂಸ್ಥೆ ಆಯೋಜಿಸಿದ್ದ ಶ್ರೀ ವಿಜಯದಾಸರ ಪದಗಳ ಗಾಯನ ಸ್ಪರ್ಧೆ ಮತ್ತು ದಾಸವಾಣಿ ಕಾರ್ಯಕ್ರಮ ನ. 13 ರಂದು ಶೇಷಾದ್ರಿಪುರಂನ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆಯಿತು.
ಡಾ ಎನ್ ಜಿ ವಿಜಯಲಕ್ಷ್ಮಿ, ಶ್ರೀ ನಾರಾಯಣ ಮೂರ್ತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಗಾಯನ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಖ್ಯಾತ ಗಾಯಕರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
ಮೊದಲಿಗೆ ಕುಮಾರಿ ದಿಶಾ ಪುರಾಣಿಕ್ ಅವರಿಂದ ಸ್ವಾಗತ ಗೀತೆ ಪ್ರಾರಂಭವಾಯಿತು. ನಂತರ ವಿದುಷಿ ವಿಜಯ ಭಟ್, ಮಾನಸ ಕುಲಕರ್ಣಿ, ಸ್ರೋತಸ್ವಿನಿ, ಭಾವನಾ ಉಮೇಶ್, ವಾಣಿಶ್ರೀ ಹಾಗು ಪೂರ್ಣಿಮಾ ಕುಲ್ಕರ್ಣಿ ಅವರು ಶ್ರೀ ವಿಜಯದಾಸರ ಹಾಡುಗಳನ್ನು ಹಾಡಿದರು.
ಶ್ರುತಿ ಯೋಗೇಶ್ ಮತ್ತು ಶ್ರೀಮತಿ ಉಮಾ ದೇಸಾಯಿ ಅವರ ಸಹಯೋಗದೊಂದಿಗೆ ವಿಜೇತರಿಗೆ ಚಂದ್ರಿಕಾ ಗಿರೀಶ್, ಜಿ.ಹನುಮಂತರಾವ್, ವರದೇಂದ್ರ ಕೋಟಿ ಹಾಗು ವನಜಾ ಕೋಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದ ಆಯೋಜಕರು, ದಾಸವಾಣಿ ಸಂಸ್ಥಾಪಕರಾದ ಸುಧೀಂದ್ರ ದೇಸಾಯಿ ಮತ್ತುಜಯರಾಜ್ ಕುಲ್ಕರ್ಣಿ ಅವರು ಉಪಸ್ಥಿತರಿದ್ದರು.
ಪದ್ಮಜಾ ಪುರಾಣಿಕ್ ಮತ್ತುರಾಧಿಕಾ ಜೋಶಿ ಡಾ ಎನ್ ಜಿ ವಿಜಯಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.