2022 ನೇ ಜನವರಿ ಎರಡನೇ ವಾರದಂದು ಸೋಂದಾ ಇತಿಹಾಸೋತ್ಸವ ಮತ್ತು ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಹಾಗು ಸೋದೆ ಸದಾಶಿವರಾಯ ಪ್ರಶಸ್ತಿ ಸಮಾರಂಭ ನಡೆಯಲಿದೆ.
ಈ ಪ್ರಯುಕ್ತ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತಿಹಾಸವನ್ನು ವಿಜ್ಞಾನಿಗಳಿಂದ ಹೇಳಿಸುವ, ಕಲಿಸುವ ಪ್ರಯತ್ನ. ಇಸ್ರೋದಂತಹ ಪ್ರಸಿದ್ಧ ಸಂಸ್ಥೆಯ ಪ್ರಸಿದ್ಧ ವಿಜ್ಞಾನಿಗಳು ಈ ಬಾರಿ ನಮ್ಮ ದೇಶದ ಪ್ರಾಚೀನ ವಿಜ್ಞಾನದ ಕೌತುಕವನ್ನು ತೆರೆದಿಡಲಿದ್ದಾರೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಇತಿಹಾಸಕಾರರು ಆಗಮಿಸಿ ನಮ್ಮ ದೇಶದ ಸತ್ಯ ಚರಿತ್ರೆಯ ಅನಾವರಣ ಮಾಡಲಿದ್ದಾರೆ. ಮಲೆನಾಡಿನ ಸುಂದರ ಹಸಿರಿನ ಮಧ್ಯೆ, ಜುಳು ಜುಳು ಹರಿಯುವ ಶಾಲಲೆಯ ತಟದಲ್ಲಿ, ಯಕ್ಷಗಾನ, ಸಂಗೀತ, ನೃತ್ಯದ ಸೊಬಗನ್ನ ಸವಿಯುತ್ತಾ ಭವ್ಯ ಭಾರತದ ಸತ್ಯ ಮತ್ತು ಶ್ರೇಷ್ಠ ಚರಿತ್ರೆಯನ್ನು ಆಸ್ವಾದಿಸುವ ಅಪರೂಪದ ಅವಕಾಶ.
ಜಂಬೂದ್ವೀಪ, ಭರತವರ್ಷ, ಭರತಖಂಡ, ಭಾರತ, ಹಿಂದೂಸ್ಥಾನ. ಒಂದು ದೇಶದ ಹಲವು ಭಾವನಾಮಗಳಿವು. ಜಗತ್ತಿನ ಯಾವ ದೇಶಕ್ಕೂ ಇರದಷ್ಟು ಅದ್ಭುತವಾದ ಇತಿಹಾಸ ನಮ್ಮ ದೇಶದ್ದು. ಅವರು ಧಾಳಿ ಮಾಡಿದರು, ಅವರು ಸಂಪತ್ತು ಕೊಳ್ಳೆ ಹೊಡೆದರೆಂಬುದಾಗಿ ನಮ್ಮನ್ನು ಹೇಡಿಗಳಾಗಿ ಚಿತ್ರಿಸಿದ ಸುಳ್ಳು ಇತಿಹಾಸದ ಚಿತ್ರಗಳನ್ನು ಅಳಿಸಿಹಾಕುವ ಸಮಯ ಬಂದಾಯ್ತು. ಭಾರತದ ಸತ್ಯ ಚರಿತ್ರೆಯ ಅನಾವರಣವಾಗುವ ಸಮಯ ಬಂದಾಯ್ತು. ನಮ್ಮದು ಹೇಡಿಗಳ ಇತಿಹಾಸವಲ್ಲ. ಹೆಮ್ಮಿಗರ ಇತಿಹಾಸ. ಪ್ರಾಚೀನ ಭಾರತವೆಂದರೆ ಹಲವು ಅಚ್ಚರಿಗಳು ಮತ್ತು ಅದ್ಭುತಗಳ ಆಗರ. ಈ ದೇಶದಲ್ಲಿನ ಅದೆಷ್ಟೋ ಅಲೌಕಿಕ ಪ್ರಶ್ನೆಗಳಿಗೆ ಇಂದಿಗೂ ಉತ್ತರ ದೊರಕಿಲ್ಲ. ಎಷ್ಟೋ ಅಚ್ಚರಿಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.!
ಉದಾಹರಣೆಗೆ: ಯಂತ್ರ ಸಾಧನಗಳಿಲ್ಲದ ಆ ಕಾಲದಲ್ಲಿ ಸಾವಿರಾರು ಕ್ವಿಂಟಲ್ ಭಾರದ ಏಕಶಿಲಾ ಸ್ಥಂಭಗಳ ಸಾಗಾಟ ಮತ್ತು ಸ್ಥಾಪನೆ ಹೇಗೆ?
ಶಿಲಾಮೂಲವೇ ಇಲ್ಲದ ಪ್ರದೇಶಗಳಲ್ಲಿ ಅದ್ಭುತ ಶಿಲಾ ದೇಗುಲಗಳ ನಿರ್ಮಾಣ ಹೇಗೆ?
ವಾಸ್ತು ವಿಜ್ಞಾನದ ರಹಸ್ಯ
* ದೇವಾಲಯಗಳ ಹಿಂದಿನ ಸೂತ್ರ ಮತ್ತು ಶಾಸ್ತ್ರ
* ಸಾವಿರಾರು ವರ್ಷಗಳಿಂದ ಬಿಸಿಲು ಮಳೆ ಗಾಳಿಗೆ ಕುಗ್ಗದ ಕಬ್ಬಿಣ ಸ್ಥಂಭದ ತಂತ್ರಜ್ಞಾನದ ಹಿಂದಿನ ಗುಟ್ಟು
* ಶತಶತಮಾನಗಳ ಹಿಂದಿನ ಕೃಷಿ ವಿಜ್ಞಾನ ಹೇಗಿತ್ತು
* ಯೋಗ ವಿಜ್ಞಾನದ ಪ್ರಾಚೀನತೆ
* ನಮ್ಮ ದಿನನಿತ್ಯದ ಆಚರಣೆ ಸಂಪ್ರದಾಯಗಳ ಹಿಂದಿನ ವಿಜ್ಞಾನ ಏನು? ನಮಗೆ ಗೊತ್ತಿಲ್ಲ ಎಂಬ ಕಾರಣಕ್ಕೆ ಅವುಗಳೆಲ್ಲ ಮೌಢ್ಯವೇ?
* ಭಾರತದ ಮೇಲೆ ಧಾಳಿ ನಡೆದಾಗ ನಿಜವಾಗಿ ನಡೆದದ್ದೇನು?
ಈ ಎಲ್ಲ ಕೌತುಕಗಳಿಗೆ,ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ಆರನೇ ವರ್ಷದ ಈ ಬಾರಿಯ ಸೋಂದಾ ಇತಿಹಾಸೋತ್ಸವ.
ಹೆಚ್ಚಿನ ಮಾಹಿತಿಗಳನ್ನು ಸದ್ಯದಲ್ಲೇ ನಿರೀಕ್ಷಿಸಿ.
ಇತಿಹಾಸೋತ್ಸವದಲ್ಲಿ ಭಾಗವಹಿಸುವವರಿಗೆ ಉಚಿತ ಊಟ ವಸತಿ ಸೌಲಭ್ಯಗಳಿರಲಿವೆ.
ಮೊದಲೇ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ.
ಸಂಪರ್ಕ: ಲಕ್ಷ್ಮೀಶ್ ಹೆಗಡೆ ಸೋಂದಾ ( ಸಂಚಾಲಕರು -8073810005)