‘ನೀ ಕಾಯೋ ಶಿವನೆ’ ಶಿವಭಕ್ತಿ ಹಾಡು ಬಿಡುಗಡೆ ನ.22 ರಂದು

ಪುತ್ತೂರು (ದಕ): ‘ನೀ ಕಾಯೋ ಶಿವನೆ…’ ಶಿವಭಕ್ತಿ ಹಾಡು ಬಿಡುಗಡೆ ಕಾರ್ಯಕ್ರಮ ನವೆಂಬರ್ 22ರಂದು ಸಂಜೆ 6 ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಮುಳಿಯ ಕೇಶವ ಪ್ರಸಾದ್ ಹಾಡು ಬಿಡುಗಡೆಗೊಳಿಸುವರು.
ಕಾರ್ಯಕ್ರಮ ಪೀಠ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ.

‘ನೀ ಕಾಯೋ ಶಿವನೆ …’ ಗೀತೆ ಎಲ್ಲೆಲ್ಲಿಯೂ ಶಿವ ಇದ್ದಾನೆ ಎನ್ನುವ ಕಲ್ಪನೆಯಲ್ಲಿ ಮಾಡಲಾಗಿದೆ. ಈ ಗೀತೆಯನ್ನು ಮಹಿಳಾ ಭಾಗವತರಾದ ಭವ್ಯಶ್ರೀ ಕುಲ್ಕುಂದ ಅವರು ಹಾಡಿದ್ದಾರೆ. ಸಾಹಿತ್ಯ ಯತೀಶ್ ಕುಡುಪು ಅವರ ಸಾಹಿತ್ಯವಿದ್ದು, ದಿಲೀಪ್ ರೈ ಸಂಕಲನ ಮತ್ತು ನಿರ್ದೇಶನ ಮಾಡಿದ್ದಾರೆ. ಮಹೇಶ್ ಮೂಲ್ಯ ಛಾಯಾಗ್ರಹಣ ಮತ್ತು ಸಂದೀಪ್ ಸಂಗೀತ ನೀಡಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles