ಮುನವಳ್ಳಿ : ಸಮೀಪದ ಉಗರಗೋಳ ಗ್ರಾಮದಲ್ಲಿ ಇಷ್ಟಲಿಂಗಾರ್ಚನೆಯ ಅನುಷ್ಠಾನ ಮತ್ತು ಶಿವಯೋಗದಲ್ಲಿ ಉತ್ತುಂಗ ಸಾಧನೆಗೈದ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ತೀಕ ಮಾಸದ ಕೊನೆಯ ಸೋಮವಾರ ನವೆಂಬರ್
29 ರಂದು ಜರುಗಲಿದೆ.
ವೀರಶೈವ ಧರ್ಮದ ಪ್ರಸ್ಥಾನತ್ರಯಗಳಾದ ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಸೈದ್ಧಾಂತಿಕ ವಿಚಾರಗಳನ್ನು ಸಮಸ್ತ ಭಕ್ತ ಸಮೂಹಕ್ಕೆ ಪ್ರಚುರಪಡಿಸಿ ನಿರಂತರ ಧರ್ಮ ಜಾಗೃತಿಯೊಂದಿಗೆ ಜೀವನ ಮೌಲ್ಯಗಳ ಅನುಪಾಲನೆಗೆ ಮಾರ್ಗದರ್ಶನ ಮಾಡಿರುವ ಕರ್ತೃ ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳು ಇಂದಿಗೂ ಚಿಜ್ಯೋತಿಯಾಗಿ ಬೆಳಗುತ್ತಿದ್ದಾರೆ. ಪರಮಪೂಜ್ಯರ ನಾಮಸ್ಮರಣೆಗೆ ತೆರೆದುಕೊಳ್ಳಲು ಪ್ರತೀ ವರುಷ ಶ್ರೀಮಠದ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಪ್ರಾತಃಕಾಲದಲ್ಲಿ ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಳವರ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗುವವು. ನಂತರ ಮುಂಜಾನೆ 9 ಗಂಟೆಗೆ ಶ್ರೀಮಠದಿಂದ ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವವು 108 ಕುಂಭಗಳ ಮೆರವಣಿಗೆಯು ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಉಗರಗೋಳ ಗ್ರಾಮದಲ್ಲಿ ನಡೆಯಲಿದ್ದು, ನಂತರ ಮಹಾಪ್ರಸಾದದ ದಾಸೋಹ ಜರುಗಲಿದೆ.
ಲಕ್ಷ ದೀಪೋತ್ಸವ :
ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ 5.30 ಗಂಟೆಗೆ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ಬೃಹತ್ ಪ್ರಾಂಗಣದಲ್ಲಿ ಲಕ್ಷ ದೀಪೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಹೂಲಿ ಸಾಂಬಯ್ಯನವರಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಗರಗೋಳ ಗ್ರಾಮದ ನಿರ್ವಾಣೇಶ್ವರಮಠದ ಶ್ರೀ ಮಹಾಂತ ಸ್ವಾಮೀಜಿ ಮತ್ತು ರಾಮಾರೂಢಮಠದ ಶ್ರೀ ಬ್ರಹ್ಮಾರೂಢ ಸ್ವಾಮೀಜಿ, ತಾರಿಹಾಳ ಅಡವಿಸಿದ್ಧೇಶ್ವರ ವಿರಕ್ತಮಠದ ಶ್ರೀ ಅಡವಯ್ಯ ದೇವರು, ಸವದತ್ತಿ ಯಲ್ಲಮ್ಮನಗುಡ್ಡದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಸಯ್ಯ ಈರಯ್ಯಸ್ವಾಮಿ ಹಿರೇಮಠ ಸಮಾರಂಭದ ಸಾನ್ನಿಧ್ಯವಹಿಸುವರು.
ಕರ್ನಾಟಕ ವಿಧಾನಸಭೆಯ ಉಪ ಸಭಾಧ್ಯಕ್ಷ ಆನಂದ ಚಂದ್ರಶೇಖರ ಮಾಮನಿ ಲಕ್ಷ ದೀಪೋತ್ಸವ ಉದ್ಘಾಟಿಸಲಿದ್ದು, ಹುಬ್ಬಳ್ಳಿ-ಧಾರವಾಡ ಪೋಲೀಸ್ ಕಮೀಷನರೇಟ್ ನಿವೃತ್ತ ಎ.ಸಿ.ಪಿ. ಜಿ.ಆರ್. ಹಿರೇಮಠ ಅಧ್ಯಕ್ಷತೆವಹಿಸುವರು. ಉಗರಗೋಳ ಗ್ರಾ.ಪಂ. ಅಧ್ಯಕ್ಷೆ ಜುಬೇದಾ ಬಾರಿಗಿಡದÀ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಯಲ್ಲಮ್ಮನಗುಡ್ಡದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೆ.ಎಸ್. ಗಂದಿಗವಾಡ, ವೈ.ವೈ. ಕಾಳಪ್ಪನವರ, ಸವದತ್ತಿ ತಹಶೀಲದಾರ ಪ್ರಶಾಂತ ಪಾಟೀಲ, ಪಿ.ಎಸ್.ಐ. ಶಿವಾನಂದ ಗುಡಗನಟ್ಟಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಪಿ.ವೈ ತುಬಾಕದ, ವಿವಿಧ ಕ್ಷೇತ್ರಗಳ ಗಣ್ಯರಾದ ಬಿ.ಪಿ. ಪಾಟೀಲ, ಆರ್.ಬಿ. ಶಂಕರಗೌಡರ, ಶವೈ.ಆರ್. ಚನ್ನಪ್ಪಗೌಡರ, ಕುಮಾರಿ ಆರ್.ಪಿ.ಪವಾರ ಮುಖ್ಯ ಅತಿಥಿಗಲಾಗಿ ಭಾಗವಹಿಸಲಿದ್ದು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಸವದತ್ತಿ, ಹುಕ್ಕೇರಿ, ಉಗರಗೋಳ, ಹರ್ಲಾಪೂರ, ಹಂಚಿನಾಳ, ಮುನವಳ್ಳಿ ಗ್ರಾವiಗಳ ಹಲವಾರು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಗುರುರಕ್ಷೆ ಗೌರವ : ಕುಸ್ತಿ ಪಂದ್ಯಗಳಲ್ಲಿ ಅಂತಾರಾಷ್ಟಿçÃಯ ಮಟ್ಟದಲ್ಲಿ ಸಾಧನೆಗೈದ ಮೇದಾಸಾಬ ಬೇವಿನಗಿಡದ, ಗಣಪತಿಗೌಡ ಚನ್ನಪ್ಪಗೌಡರ, ಮುಸ್ತಿಕಆಲಂ ಬೇವಿನಗಿಡದ, ನಿಂಗಪ್ಪ ಅಳಗೋಡಿ, ಮಕ್ತುಂಹುಸೇನ ಬಾರಿಗಿಡದ, ಮಾರುತಿ ಕುಂಟೋಜಿ, ಮಂಜು ಗೊರವನಕೊಳ್ಳ, ರವಿ ಅತ್ತಿಗೇರಿ, ರಾಜು ಹೆಬ್ಬಳ್ಳಿ, ಬುಡನ್ ಸಾಬ ಹೊಸಮನಿ ಅವರಿಗೆ ಗುರುರಕ್ಷೆಯ ಗೌರವ ನೀಡಿ ಸನ್ಮಾನಿಸಲಾಗುವುದು. ಈ ಪವಿತ್ರ ಸಮಾರಂಭದಲ್ಲಿ ಶ್ರೀಮಠದ ಸಮಸ್ತ ಸದ್ಭsÀಕ್ತ ಸಮೂಹ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಕೃಪಾಕಾರುಣ್ಯಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ಆಡಳಿತ ಮಂಡಳಿಯ ಸಿ.ಇ.ಓ. ನಿವೃತ್ತ ಕೆ.ಎ.ಎಸ್. ಅಧಿಕಾರಿ ಮಹೇಶ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.
ವರದಿ: ವೈ ಬಿ ಕಡಕೋಳ