ಬೆಂಗಳೂರಿನ ಚಾಮರಾಜಪೇಟೆಯ 2ನೇ ಮುಖ್ಯರಸ್ತೆಯಲ್ಲಿರುವ ಪುರಾತನದ ಶ್ರೀ ರಾಮೇಶ್ವರ ದೇವಸ್ಥಾದಲ್ಲಿ ಕಾರ್ತೀಕ ಮಾಸದ ಸೋಮವಾರ (ನವೆಂಬರ್ 29)ದಂದು ಏರ್ಪಡಿಸಿದ್ದ “ಕಾರ್ತಿಕ ಸಂಗೀತೋತ್ಸವ” ಕಾರ್ಯಕ್ರಮದಲ್ಲಿ ಅನುಷಾ ರಾಘವೇಂದ್ರ ಅವರು “ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ” (ಕನಕದಾಸರು), “ಗಣಪತಿಯೇಕರುಣಾನಿಧಿಯೆ” (ಪಾಪನಶಮ್ ಶಿವನ್), “ಸಾರಸಮುಖಿ ಸಕಲ ಭಾಗ್ಯ” (ಮುತ್ತಯ್ಯ ಭಾಗವತರು), “ಪರ್ವತ ರಾಜಕುಮಾರಿ” (ಮುತ್ತು ಸ್ವಾಮಿ ದೀಕ್ಷಿತರು), “ಸಾಮಗಾನ ಲೋಲನೆ ಸದಾಶಿವ” (ಪಾಪನಾಶನ್ ಶಿವನ್), “ಕಾಶಿ ವಿಶಾಲಾಕ್ಷಿ” (ಮುತ್ತು ಸ್ವಾಮಿ ದೀಕ್ಷಿತರು), “ನೀಲ ಲೋಹಿತ ಡಮರುಗ ತ್ರಿಶೂಲ” (ಜಗನ್ನಾಥದಾಸರು), ಕಂಡೆ ಕರುಣಾನಿಧಿಯ (ಪುರಂದರದಾಸರು) ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ಇವರ ಸಂಗೀತಕ್ಕೆ ಪಿಟೀಲುನಲ್ಲಿ ಶ್ರವಂತ್, ಮೃದಂಗದಲ್ಲಿ ಅಭಿಜಿತ್ ಸಾಥ್ ನೀಡಿದರು.