ವಿಸ್ತೃತಿ ನೃತ್ಯೋತ್ಸವ

ಬೆಂಗಳೂರು: ತಮೋಹ ಆರ್ಟ್ಸ್ ಫೌಂಡೇಶನ್ ಡಿಸೆಂಬರ್ 4 ರಂದು ಆಯೋಜಿಸಿದ್ದ “ವಿಸ್ತೃತಿ ನೃತ್ಯ ಉತ್ಸವ” ಮಲ್ಲೇಶ್ವರಂ 14ನೇ ಅಡ್ಡರಸ್ತೆಯಲ್ಲಿರುವ ಸೇವಾ ಸದನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಭರತನಾಟ್ಯ, ಕೂಚಿಪುಡಿ, ಕಥಕ್, ಒಡಿಸ್ಸಿ, ಯಕ್ಷಗಾನ ಹೀಗೆ ಹಲವು ಬಗೆಯ ನೃತ್ಯ ಶೈಲಿಯ ಪ್ರದರ್ಶನ ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾದ ‘ಕಲಾಯೋಗಿ’ ಶ್ರೀ ಪುಲಿಕೇಶಿ ಕಸ್ತೂರಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ, “ಕಲಾವಿದರು ಕಲಾವಿದರನ್ನು ಬೆಳೆಸಬೇಕು” ಎಂಬ ಸ್ಫೂರ್ತಿಯ ನುಡಿಗಳನ್ನಾಡಿದರು. ತಮೋಹ ಆರ್ಟ್ಸ್ ಫೌಂಡೇಶನ್ ಸಂಸ್ಥೆಯ ನಿರ್ದೇಶಕರಾದ ವಿದುಷಿ ಗಾಯತ್ರಿ ಮಯ್ಯ ಅವರು ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದ ನಿರ್ವಹಣೆಯನ್ನು ಪಿ. ಮಂಥನ ಮಯ್ಯ ಅವರು ನಡೆಸಿಕೊಟ್ಟರು. 6 ವರ್ಷದ ಪುಟ್ಟ ಪೋರಿ ಕು|| ಆದ್ಯ ಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಕಲಾವಿದೆ ಎಂಬ ಕೀರ್ತಿಗೆ ಭಾಜನರಾದರು.

Related Articles

ಪ್ರತಿಕ್ರಿಯೆ ನೀಡಿ

Latest Articles