ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರಾಜ್ಯಮಟ್ಟದ ದೇಶೀ ಗೋಪಾಲಕ, ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನ

ಉಡುಪಿ: ಉಡುಪಿ ಅದಮಾರು ಮಠದ ಪರ್ಯಾಯೋತ್ಸವ ಸಮಾರೋಪ ಸಮಾರಂಭದ ಅಂಗವಾಗಿ ರಾಜ್ಯ ಮಟ್ಟದ ದೇಶೀ ಗೋ ಪಾಲಕ, ಕೃಷಿಕ ಹಾಗೂ ಗೋ ಉತ್ಪನ್ನ ತಯಾರಕರ ಸಮ್ಮೇಳನವನ್ನು ಡಿಸೆಂಬರ್ 12 ರಿಂದ 14 ರವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೂರು ದಿನಗಳ ಕಾರ್ಯಕ್ರಮಗಳು ಇಂತಿವೆ.

ಡಿಸೆಂಬರ್ 12 ಭಾನುವಾರ 2021, ಬೆಳಗ್ಗೆ 9ಗಂಟೆ: ನೋಂದಣಿ/ ರಿಜಿಸ್ಟ್ರೇಷನ್

ಬೆಳಗ್ಗೆ 10ರಿಂದ 11.00 ಗಂಟೆ: ಗೋ ಚಿಕಿತ್ಸೆ, ರಾಮು ಗೋಟ್ಕೋಡಿ ,ಈಶ್ವರ ನಂಜನಗೂಡು.

 12:00 ಗಂಟೆಗೆ ಗೋಶಾಲೆಗಳ ಸಮಾವೇಶ ಉದ್ಘಾಟನೆ: ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ  ಪಶುಸಂಗೋಪನಾ ಸಚಿವರು,  ಪ್ರಭು ಚವ್ಹಾಣ್ ಅವರಿಂದ. 

ಮಧ್ಯಾಹ್ನ 2:30 ಗಂಟೆಯಿಂದ 3:30- ವಿಚಾರಗೋಷ್ಠಿ
*ಗೋಪಾಲನೆ , ಸಂವರ್ಧನೆ - ಡಾ. ಕೆ.ಪಿ ರಮೇಶ್
*ದೇಶೀ ಗೋ ತಳಿ*- ಡಾ. ವೈ ವಿ ಕೃಷ್ಣಮೂರ್ತಿ
*ಆಯುರ್ವೇದದಲ್ಲಿ ಪಂಚಗವ್ಯ ಚಿಕಿತ್ಸೆ - ಡಾ. ರವಿ

ಸಂಯೋಜನೆ:  ಪ್ರವೀಣ ಸರಳಾಯ


*ಡಿಸೆಂಬರ್ 13 ಸೋಮವಾರ

ಬೆಳಗ್ಗೆ 10ರಿಂದ 11: ಗೋ ಉತ್ಪನ್ನಗಳ ತಯಾರಿ, ಭಕ್ತಿ ಭೂಷಣ್ ಜಿ, ಉಮೇಶ್ ಕುಲಕರ್ಣಿ.
ಮಧ್ಯಾಹ್ನ 11:30ರಿಂದ 12:30: ಗೋ ಶಕ್ತಿ, (ಬಯೋಗ್ಯಾಸ್ ಅನ್ನು ಸಿಲಿಂಡರಿಗೆ ತುಂಬಿಸುವುದು): ಕೃಷ್ಣಮೂರ್ತಿ ಬೆಂಗಳೂರು.

ಮಧ್ಯಾಹ್ನ 2:30 ರಿಂದ 3.30: 
* ಆಯುರ್ವೇದದಲ್ಲಿ ಪಂಚಗವ್ಯ ಮಹತ್ವ ಮತ್ತು ದೀರ್ಘಕಾಲಿನ ಕಾಯಿಲೆಗಳಿಗೆ ಪಂಚಗವ್ಯ ಚಿಕಿತ್ಸೆಯಿಂದ ಯಶಸ್ವಿ ಪರಿಹಾರದ ಬಗ್ಗೆ ಮಾಹಿತಿ: ಡಾ. ಡಿ.ಪಿ. ರಮೇಶ್
* ಪಂಚಗವ್ಯದಲ್ಲಿ ಔಷಧೀಯ ಸಂಶೋಧನೆಗಳು: ಡಾ. ಎಸ್ ರಾಮಚಂದ್ರ ಶೆಟ್ಟಿ.

 ಡಿಸೆಂಬರ್ 14 ಮಂಗಳವಾರ: ಬೆಳಗ್ಗೆ 10ರಿಂದ 11.00
 * ಗೋ ಆಧಾರಿತ ಕೃಷಿ: ಸಚಿನ್ ಕಬ್ಬೂರ
ಮಧ್ಯಾಹ್ನ 11.30ರಿಂದ 12.30
* ತಾರಸಿ ತೋಟ (ಗೋ ಆಧಾರಿತ): ನಾಗೇಶ್ ಕಾಮತ್ ಕಟ್ಪಾಡಿ,ರಾದೇಶ್ ಸತೀಶ್ ಕೆರೆಕಾಡು, ಮನೋಜಿತ್ ಮಂಗಳೂರು.
ಸಂಜೆ 4 ಗಂಟೆಗೆ: ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ 
ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಶ್ರೀ ಶ್ರೀ ನಿರ್ಮಲ ನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ.

ವಿ.ಸೂ.

*ಹಾಸಲು, ಹೊದೆಯಲು ಹಾಗೂ ನಿತ್ಯ ಬಳಕೆಗೆ ಅವಶ್ಯಕತೆ ಇರುವ ಸಾಬೂನು, ದಂತಮಂಜನ,ಬ್ರಷ್, ಇತ್ಯಾದಿಗಳನ್ನು ತರುವುದು*

*ಬೆಲೆಬಾಳುವ ವಸ್ತುಗಳನ್ನು ತರಬೇಡಿ*

*ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ಆಸಕ್ತಿಯಿಂದ ಬಾಗವಹಿಸಿ*

*ವಸತಿ ವ್ಯವಸ್ಥೆ ಬೇಕಾಗಿರುವವರು ಈ ಕೆಳಗೆ ನೀಡಿರುವ ಗೂಗಲ್ ಫಾರ್ಮಿನಲ್ಲಿ ನೋಂದಣಿ ಮಾಡಿಕೊಂಡು ಭಾಗವಹಿಸಿ*

https://forms.gle/rqb2L7UJ2s9noxvz9


*ಗೂಗಲ್ ಫಾರ್ಮಿನಲ್ಲಿ ಸ್ಪಷ್ಟವಾಗಿ  ಪುರುಷರು ಹಾಗೂ ಮಾತೆಯರ ಸಂಖ್ಯೆ ನಮೂದಿಸಬೇಕು*

*ಊಟ ಉಪಾಹಾರದ ವ್ಯವಸ್ಥೆ ಇರುತ್ತದೆ*

*ಯಾವುದೇ ರೀತಿಯ ಶುಲ್ಕ ಇರುವುದಿಲ್ಲ*

*ಮೂರು ದಿನಗಳ ಕಾಲ, ನಾಡಿ ತಪಾಸಣೆ ಹಾಗೂ ಪಂಚಗವ್ಯ ಚಿಕಿತ್ಸೆ ವ್ಯವಸ್ಥೆ ಇರುತ್ತದೆ.*

 *ಗವ್ಯ ಉತ್ಪನ್ನಗಳ ಮಳಿಗೆಗಳು ಹಾಗೂ ಅವುಗಳಲ್ಲಿ ಗವ್ಯ ಉತ್ಪನ್ನಗಳ ಪ್ರಾತ್ಯಕ್ಷಿಕೆ ನಿರಂತರ ಮೂರು ದಿನ ನಡೆಯುತ್ತಿರುತ್ತದೆ*

ಸಂಪರ್ಕ ಸಂಖ್ಯೆ:
9591176337.
9448529639.
7760007377.

Related Articles

ಪ್ರತಿಕ್ರಿಯೆ ನೀಡಿ

Latest Articles