ರಾಯರ ಮಠದಲ್ಲಿ ಧನುರ್ಮಾಸ ಪೂಜೆ ಇಂದಿನಿಂದ

ಬೆಂಗಳೂ ರು: ಜಯನಗರದ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಧನುರ್ಮಾಸದ ಪೂಜೆಯನ್ನು ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಡಿ. 17 ರಿಂದ ಜನವರಿ 14ರವರೆಗೆ ಧನುರ್ಮಾಸದ ಪೂಜಾದಿಗಳು ನೆರವೇರಲಿವೆ.

ಪ್ರತಿದಿನ ಪ್ರಾತಃಕಾಲ ಬೆಳಗ್ಗೆ 5 ಗಂಟೆಗೆ ಶ್ರೀ ಗುರುರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಅಲಂಕಾರ, ವಿಶೇಷವಾಗಿ ಹುಗ್ಗಿ ಮತ್ತು ಪೊಂಗಲ್ ನಿವೇದನೆ, ನಂತರ, ಮಹಾ ಮಂಗಳಾರತಿ, ಬೆಳಗ್ಗೆ 6 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆ, 6-30 ಕ್ಕೆ ವಿಶೇಷ ಸೇವೆಯ ಸಂಕಲ್ಪ ಹಾಗೂ ರಥೋತ್ಸವ ಕನಕಾಭಿಷೇಕ, ಸೇವೆಗಳು ನೆರವೇರಲಿವೆ.

ಪ್ರತಿ ಗುರುವಾರ ದಂದು ಮಾತ್ರ ಸಂಜೆ 6 ಗಂಟೆಗೆ ದೀಪೋತ್ಸವ 6-15 ಕ್ಕೆ ಪಲ್ಲಕ್ಕಿ ಉತ್ಸವ , ರಥೋತ್ಸವ, ಸ್ವಸ್ತಿ ವಾಚನ, ಮಹಾ ಮಗಳಾರತಿ, ತದನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಎಂದು ಕಿಶೋರಾಚಾರ್ಯರು ತಿಳಿಸಿದರು.

“ಧನುರ್ಮಾಸದ ವಿಶೇಷ ಪೂಜಾ” ಸೇವೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಹೆಚ್ಚಿನ ಸೇವೆಯ ಮಾಹಿತಿಗಾಗಿ- 08022443962- 9945429129- 944913399- 8660349906 ಸಂಪರ್ಕಿಸಬಹುದು.

Related Articles

ಪ್ರತಿಕ್ರಿಯೆ ನೀಡಿ

Latest Articles