ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಹನುಮದ್ ವ್ರತದ ಪ್ರಯುಕ್ತ (ಡಿಸೆಂಬರ್ 16, ಗುರುವಾರ) ಏರ್ಪಡಿಸಿದ್ದ “ಹರಿನಾಮ ಸಂಕೀರ್ತನೆ” ಕಾರ್ಯಕ್ರಮದಲ್ಲಿ ವಿಂಧ್ಯಾ ಅಡಿಗ ಅವರು: ಶ್ರೀ ವ್ಯಾಸರಾಯರ “ಗಜಮುಖನೆ ಸಿದ್ಧಿದಾಯಕನೆ”, ಶ್ರೀದ ವಿಠಲದಾಸರ “ರಾಯ ಬಾರೋ ರಾಘವೇಂದ್ರ ಬಾರೋ”, ಜಗನ್ನಾಥದಾಸರ “ನಮಿಸಿ ಬೇಡುವೆ ವರಗಳ ನಿನ್ನ”, “ಯಾಕೆ ಮೂಕನಾದ್ಯೋ”, ವಿಜಯದಾಸರ “ಕೈಲಾಸ ವಾಸ ಗೌರೀಶ ಈಶ”, ಶ್ಯಾಮಸುಂದರ ದಾಸರ “ಪಾವನ ಚರಿತ ಸಂಜೀವನ ಗಿರಿಧರ”, ಪುರಂದರದಾಸರ “ವೀರ ಹನುಮ ಬಹು ಪರಾಕ್ರಮ”, ಅನಂತಾದ್ರೀಶರ “ಬಾರೇ ಭಾಗ್ಯದ ವಿಧಿಯೇ”, ಮಹಿಪತಿದಾಸರ “ರಾಮ ಬಂದನೇನೆ”, ಪುರಂದರದಾಸರ “ಎಂದೆಂದೂ ನಿನ್ನ ಪಾದವೇ ಗತಿ”, “ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ”, “ನಂಬಿದೆ ನಿನ್ನ ಪಾದವ ವೆಂಕಟರಮಣ”, “ನಂದತನಯ ಗೋವಿಂದನ ಮಿಠಾಯಿ”, “ದೃಷ್ಟಿ ನಿನ್ನ ಪಾದದಲ್ಲಿ ನೆಡೋ ಹಾಗೆ”, “ಸ್ಮರಣೆಯೊಂದೇ ಸಾಲದೇ”, ಕೇಶವ ಮಾಧವ ಗೋವಿಂದ ವಿಠಲೆಂಬ” ಹಾಗೂ ಗೋಪಾಲದಾಸರ “ಏಕೆ ಮಮತೆ ಕೊಟ್ಟು ಸಲಹುವಿ ರಂಗ” ಎಂಬ ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರಿಗೆ ವಾದ್ಯ ಸಹಕಾರದಲ್ಲಿ, ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯), ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ) ಸಾಥ್ ನೀಡಿದರು. ನಂತರ ಶ್ರೀ ಮಠದ ಪ್ರಧಾನ ಅರ್ಚಕರಾದ ಶ್ರೀ ನರಸಿಂಹಾಚಾರ್ ಅವರು ಎಲ್ಲಾ ಕಲಾವಿದರಿಗೂ ಪ್ರಸಾದ ಮತ್ತು ಮಂತ್ರಾಕ್ಷತೆ ನೀಡಿ, ಗುರುರಾಯರ ನಿಮ್ಮ ಮೇಲೆ ಸದಾ ಇರಲಿ ಹಾರೈಸಿದರು.
ವರದಿ: ದೇಸಾಯಿ ಸುಧೀಂದ್ರ