ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥರಿಗೆ ಟಿಟಿಡಿ ಗೌರವ


ತಿರುಮಲ: ವಿಶ್ವದ ಎಲ್ಲ ಭಾಗದ ಜನರು ಶ್ರೀನಿವಾಸ ದೇವರ ದರ್ಶನಕ್ಕೆ ಮುಗಿಬೀಳುತ್ತಾರೆ. ಇದಕ್ಕೆ ದೇಶ- ಕಾಲಗಳ ಭೇದವೇ ಇಲ್ಲ. ಹಾಗಾಗಿ ಶ್ರೀನಿವಾಸ ದೇವರು ದರ್ಶನ ಮಹಿತ ಎಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು. ತಿರುಮಲ ತಿರುಪತಿ ದೇವಸ್ಥಾನಗಳ ಸಮಿತಿ ವಿಶೇಷ ಗೌರವಾದರಗಳೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ನಂತರ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ಭಗವಂತ ಇಲ್ಲಿ ದರ್ಶನದಿಂದ ಪೂಜಿತನಾಗಿದ್ದಾನೆ. ಹಾಗಾಗಿ ಆತನನ್ನುಸು ದರ್ಶನ’ ಎನ್ನುತ್ತಾರೆ ಎಂದು ವ್ಯಾಖ್ಯಾನಿಸಿದರು.


ದೇವರಲ್ಲಿ ಪ್ರಾರ್ಥನೆ
ಲೋಕವನ್ನು ಬಹುವಾಗಿ ಕಾಡಿದ ಕರೊನಾ ಮತ್ತು ಈಗ ಅದರ ರೂಪಾಂತರಿ ವೈರಸ್‌ಗಳು ನಾಶವಾಗಲಿ, ಲೋಕದ ಜನರು ಆರೋಗ್ಯ ಮತ್ತು ನೆಮ್ಮದಿಯಿಂದ ಜೀವಿಸುವಂತಾಗಲಿ, ಮುಕ್ತವಾಗಿ ತಿರುಪತಿ- ತಿರುಮಲದ ದರ್ಶನಕ್ಕೆ ಎಲ್ಲ ಭಕ್ತರು ಬರುವಂತಾಗಲಿ ಎಂದು ಶ್ರೀ ಶ್ರೀನಿವಾಸನಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಶ್ರೀ ವಿದ್ಯೇಶತೀರ್ಥರು ಹೇಳಿದರು.
ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಈಗ ಮಿತಿ ಇದೆ. ಇದು ಮೊದಲಿನಂತೆ ಅಪರಿಮಿತ ಆಗಬೇಕು. ಭಕ್ತರ ಭಕುತಿಗೆ ಗೌರವಿಸುವ ಕಾಲ ಮತ್ತೆ ಬರಬೇಕು. ಲೋಕದ ಎಲ್ಲೆಡೆ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಿಸಬೇಕು. ಸಾತ್ವಿಕರ ಸಂಗಮದಲ್ಲಿ ಹೋಮ, ಹವನ, ಪೂಜೆ ಇತ್ಯಾದಿಗಳು ವಿಜೃಂಭಿಸಬೇಕು. ಇದರಿಂದ ಲೋಕಕ್ಕೆ ಶಾಂತಿ ಲಭಿಸಬೇಕು. ಜ್ಞಾನ, ಭಕ್ತಿ, ವೈರಾಗ್ಯಭಾವ ಎಲ್ಲರಲ್ಲಿ ಮೂಡಬೇಕು ಎಂದು ಸ್ವಾಮೀಜಿ ಆಶಿಸಿದರು.


ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ, ಟಿಟಿಡಿ ಬೋರ್ಡ್ ಸದಸ್ಯ ಡಿ.ಪಿ. ಅನಂತ, ಸ್ವಾಮೀಜಿಯವರ ಆಪ್ತ ಸಹಾಯಕರಾದ ಜಯರಾಂ ಇತರರು ಹಾಜರಿದ್ದರು.
ಇದಕ್ಕೂ ಮೊದಲು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರು ತಿರುಪತಿಯಲ್ಲಿ ಮಂಗಳವಾದ್ಯ, ಛತ್ರಿ ಚಾಮರ ಸಹಿತ ವಿಶೇಷ ಗೌರವದೊಂದಿಗೆ ಶ್ರೀ ಪದ್ಮಾವತಿ ಅಮ್ಮನವರ ದರ್ಶನ ಪಡೆದು ಧನ್ಯತೆ ಮೆರೆದರು.

ತಿರುಮಲದಲ್ಲಿ ಟಿಟಿಡಿ ವಿಶೇಷ ಗೌರವಾದರದೊಂದಿಗೆ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರು ಶ್ರೀನಿವಾಸನ ದರ್ಶನ ಪಡೆದರು. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ, ಟಿಟಿಡಿ ಬೋರ್ಡ್ ಸದಸ್ಯ ಡಿ.ಪಿ. ಅನಂತ ಇತರರು ಹಾಜರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles