ಬಿಜಿಎಸ್ ಕಾವೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಪಿಎಚ್.ಡಿ ಪದವಿ

ಮಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾಮಠ ಕಾವೂರು ಇದರ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಡಿಸಿದ ‘ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ’ ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.

ವಿಶ್ವವಿದ್ಯಾಲಯ ಕಾಲೇಜಿನ ಸಂಸ್ಕೃತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಕುಮಾರ ಸುಬ್ರಹ್ಮಣ್ಯ ಭಟ್. ಎ ಇವರು ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿದ್ದಾರೆ. ಈ

ಮಹಾಪ್ರಬಂಧವು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜೀವಮಾನದ ಸಾಧನೆಯನ್ನು ಒಳಗೊಳ್ಳುವ ನೆಲೆಯಲ್ಲಿ ಶ್ರೀಮಠದ ಚಾರಿತ್ರಿಕ ವಿಚಾರವನ್ನು ಗುರುತಿಸುವ ಮೂಲಕ ನಾಥ ಪರಂಪರೆಯನ್ನು ಅವಲೋಕಿಸುತ್ತದೆ. ಮಹಾಸ್ವಾಮೀಜಿ ಅವರ ಕಾಲಮಾನದಲ್ಲಿನ ಶ್ರೀಮಠದ ಬೆಳವಣಿಗೆಯನ್ನು ಆಧ್ಯಾತ್ಮಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಂಸ್ಕೃತ ಭಾಷೆ, ಸಾಹಿತ್ಯದ ಬೆಳವಣಿಗೆಯ ಅಭಿವ್ಯಕ್ತಿಯನ್ನು ಚರ್ಚೆಗೆ ಒಳಗು ಮಾಡಿದ ಮಹತ್ವದ ಸಂಶೋಧನಾ ಗ್ರಂಥವಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles