ರಂಭಾಪುರಿ ಪೀಠ (ಬಾಳೆಹೊನ್ನೂರು):
ಸಹಬಾಳ್ವೆ ಸಾಮರಸ್ಯಕ್ಕೆ ಹಬ್ಬಗಳು ಸಹಕಾರಿಯಗಿವೆ. ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿಯಿ0ದಲೇ ಪ್ರಾರಂಭಗೊಳ್ಳುತ್ತದೆ. ಸಂಕ್ರಾಂತಿ ಹಬ್ಬ ನಾಡಿನ ಜನತೆಗೆ ಸಂತಸ ನೆಮ್ಮದಿ ಉಂಟು ಮಾಡಲೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಶುಭ ಹಾರೈಸಿದರು.
ಅವರು ಶ್ರೀ ರಂಭಾಪುರಿ ಪೀಠದಲ್ಲಿ ಮಕರ ಸಂಕ್ರಾಂತಿಯ0ದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.
ಮಕರ ರಾಶಿಯನ್ನು ಸೂರ್ಯ ಪ್ರವೇಶಿಸುವ ದಿನವನ್ನು ಸಂಕ್ರಮಣವೆನ್ನುತ್ತಾರೆ. ಫಸಲು ಕೊಯ್ಲು ಸಂಕ್ರಾಂತಿಯಿ0ದ ಪ್ರಾರಂಭವಾಗುವುದರಿ0ದ ಇದನ್ನು ಸುಗ್ಗಿಯ ಹಬ್ಬವೆಂದು ಕರೆಯುತ್ತಾರೆ. ಸಂಕ್ರಾ0ತಿ ನಂತರ ಹಗಲು ಅವಧಿ ಹೆಚ್ಚಾಗಿ ರಾತ್ರಿ ಅವಧಿ ಕಡಿಮೆಯಾಗುವುದೊಂದು ವೈಶಿಷ್ಟ್ಯ. ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿ ತಮ್ಮ ಆತ್ಮೀಯರಿಗೆ ಎಳ್ಳು ಬೆಲ್ಲ ಕೊಟ್ಟು ಸಂತೋಷಪಡುತ್ತಾರೆ. ಸಂಕ್ರಾಂತಿ ಜಗದ ಪರಿವರ್ತನೆ ಹಾಗೂ ದೈವಿ ಶಕ್ತಿಯ ಬೆಳಕಿನ ಹಬ್ಬವಾಗಿದೆ. ಕಷ್ಟ ನಷ್ಟಗಳು ದೂರವಾಗಿ ಜೀವನದಲ್ಲಿ ಸಂತಸ ಮೂಡಿ ಬರಲಿ. ಆರೋಗ್ಯ, ಭಾಗ್ಯ, ಐಶ್ವರ್ಯ ನೆಮ್ಮದಿ ತುಂಬಿದ ಬದುಕು ನಿಮ್ಮದಾಗಲೆಂದು ತಮ್ಮ ಸಂಕ್ರಾಂತಿ ಸಂದೇಶದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.
ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಕುಲಪತಿ ವಿರೂಪಾಕ್ಷ ದೇವರು ಗಂವ್ಹಾರ, ಲೆಕ್ಕಾಧಿಕಾರಿ ಡಿ.ಸಂಕಪ್ಪ ಇನ್ನೂ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
ವರದಿ:
ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು