ಮಹಾತ್ಮರ ನುಡಿಗಳು ಬದುಕಿಗೆ ದಾರಿದೀಪ: ಮುಕ್ತಾನಂದ ಸ್ವಾಮೀಜಿ

ಮುನವಳ್ಳಿ: ಮಹಾತ್ಮರ ನುಡಿಗಳು ಜೀವನದಲ್ಲಿ ಸನ್ಮಾರ್ಗವನ್ನು ತೋರಿ ನಮ್ಮನ್ನು ಮುಕ್ತರನ್ನಾಗಿ ಮಾಡುತ್ತವೆ. ಮಹಾತ್ಮರ ಸೇವೆಯನ್ನು ಮಾಡುತ್ತ ಅವರ ಕಾರುಣ್ಯವನ್ನು ಪಡೆದುಕೊಳ್ಳಬೇಕು ಎಂದು ಶಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು.

ಪಟ್ಟಣದ ಶ್ರೀ ಸೋಮಶೇಖರ ಮಠದ ಹಿಂದಿನ ಪೂಜ್ಯರಾದ ಲಿಂ. ಬಸವಲಿಂಗ ಮಹಾಸ್ವಾಮಿಗಳ 66ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜರುಗುತ್ತಿರುವ 4 ನೇ ದಿನದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅವರಾದಿಯ ಶ್ರೀ ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಗಣರಾಜ್ಯೋತ್ಸವ ಈ ಶುಭ ಸಂದರ್ಭದಲ್ಲಿ ನಮ್ಮ ಸಂವಿಧಾನ ರಚನೆಗೆ ಮೂಲ ಪರಿಕಲ್ಪನೆ ಇರುವುದು ಅನುಭವ ಮಂಟಪದ ಕಾರಣೀಕರ್ತರಾದ ಶಿವಶರಣರು. ಈಗಿನ ಲೋಕಸಭೆಯ ಪರಿಕಲ್ಪನೆಯನ್ನು ಆಗಿನ ಶಿವಶರಣರು ನಮಗೆಲ್ಲ ನೀಡಿದ್ದರು ಎಂದರು.

ಗುಳೇದಗುಡ್ಡದ ಶ್ರೀ ಒಪ್ಪತ್ತೇಶ್ವರ ಮಠದ ಶ್ರೀ ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿಗಳು ಮಾತನಾಡುತ್ತ ಗಿಡಮರಗಳನ್ನು ನಾವು ಬೆಳೆಸುವುದರಿಂದ ಸಾಕಷ್ಟು ಆಮ್ಲಜನಕ, ಹಣ್ಣು ಹಂಪಲುಗಳು, ನೆರಳು ಸಿಗುತ್ತವೆ. ವೃಕ್ಷಗಳನ್ನು ಬೆಳೆಸಿ ಅವುಗಳ ಮೂಲಕ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡ ಸಾಲುಮರದ ತಿಮ್ಮಕ್ಕ ಮೊದಲಾದವರು ನಮಗೆ ಆದರ್ಶ ಪ್ರಾಯವಾಗಿದ್ದಾರೆ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳನ್ನು ಭಕ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗುರುವಂದನೆ ಸಲ್ಲಿಸಿದರು.

ವೀರೇಶ ಬ್ಯಾಹಟ್ಟಿ, ಉಮೇಶ ಬಡಿಗೇರ, ಮಹಾದೇವ ಅಂಗಡಿ, ಅಶೋಕ ಬಡಿಗೇರ, ರವಿಕುಮಾರ ಅಣ್ಣಿಗೇರಿ ಇವರನ್ನು ಸನ್ಮಾನಿಸಲಾಯಿತು. ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರದ ಯೋಗಪಟುಗಳಿಂದ ಯೋಗ ಪ್ರದರ್ಶನ, ದೇಶಭಕ್ತಿ ಗೀತೆ ನೃತ್ಯ ಪ್ರದರ್ಶನ, ಜರುಗಿತು.

ಬಿ.ಬಿ.ಹುಲಿಗೊಪ್ಪ ಸ್ವಾಗತಿಸಿದರು. ಗಂಗಾಧರ ಗೊರಾಬಾಳ ನಿರೂಪಿಸಿದರು. ಮಂಜುನಾಥ ಭಂಡಾರಿ ವಂದಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles