ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಮಲ್ಲೇಶ್ವರದ 8ನೇ ಅಡ್ಡರಸ್ತೆಯಲ್ಲಿರುವ ಶ್ರೀ ಮಾಧ್ವ ಸಂಘದಲ್ಲಿ ಜನವರಿ 28ರಂದು ಏರ್ಪಡಿಸಿದ್ದ ದಾಸರ ಪದಗಳ ಗಾಯನ ಕಾರ್ಯಕ್ರಮದಲ್ಲಿ ಕು|| ರಚನಾ ಶರ್ಮಾ ಅವರು, “ಗಜಮುಖ ವಂದಿಸುವೆ” ಎಂಬ ವಾದಿರಾಜರ ಕೃತಿಯೊಂದಿಗೆ ಆರಂಭಿಸಿ, “ಎದ್ದು ಬರುತಾರೆ ನೋಡೆ” (ಜಗನ್ನಾಥದಾಸರು), “ಭೋಯತಿ ವರದೇಂದ್ರ” (ಅನಂತಾಧ್ರೀಶ), “ರುದ್ರ ವೀರಭದ್ರ” (ವಿಜಯದಾಸರು), “ಎಣೆ ಯಾರೋ ನಿನಗೆ ಹನುಮಂತರಾಯ” (ವಾದಿರಾಜರು), “ಕವಳಾ ತಾಯಿ ಕವಳಾ” (ವಿದ್ಯಾಪ್ರಸನ್ನ ತೀರ್ಥರು), “ಮಧುರವು ಮಧುರ” (ವಿದ್ಯಾಪ್ರಸನ್ನ ತೀರ್ಥರು), “ವಿಠಲಾ ಸಲಹೋ ಸ್ವಾಮಿ” (ಪುರಂದರದಾಸರು), “ಹರಿ ನೀನೇ ಗತಿಯೆಂದು” (ಪುರಂದರದಾಸರು), ಇನ್ನೂ ಮುಂತಾದ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದುಕೊಟ್ಟರು. ಇವರಿಗೆ ವಾದ್ಯ ಸಹಕಾರದಲ್ಲಿ, ವಿದ್ವಾನ್ ಗೋವಿಂದಸ್ವಾಮಿ (ಪಿಟೀಲು), ವಿದ್ವಾನ್ ಶ್ರೀನಿವಾಸ್ ಅನಂತರಾಮಯ್ಯ (ಮೃದಂಗ)ದಲ್ಲಿ ಸಾಥ್ ನೀಡಿದರು.