ಸಂಗೀತ – ನೃತ್ಯ ಹಬ್ಬ

ಬೆಂಗಳೂರು: ನೃತ್ಯ ದಿಶಾ ಟ್ರಸ್ಟ್ (ರಿ) ಸಂಸ್ಥೆಯು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಫೆಬ್ರವರಿ 6 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಹಲಸೂರು ಪೇಟೆಯಲ್ಲಿರುವ ಶ್ರೀ ಸೀತಾರಾಮ ಮಂದಿರದ ಸಭಾಂಗಣದಲ್ಲಿ, ಕಲಾಭೂಷಿಣಿ ದರ್ಶಿನಿ ಮಂಜುನಾಥ್ ಅವರ ನೇತೃತ್ವದಲ್ಲಿ ಏರ್ಪಡಿಸಿರುವ “ಸಂಗೀತ-ನೃತ್ಯ ಹಬ್ಬ-2022” ರ ಕಾರ್ಯಕ್ರಮದಲ್ಲಿ, ವಿದುಷಿ ಶ್ರೀಮತಿ ಶಶಿಕಲಾ ಮತ್ತು ತಂಡದವರಿಂದ “ಸಂಗೀತ”, ದಿಶಿಕಾ, ಮೈತ್ರಿ, ಶಾಲಿನಿ, ದೀಪಾರಾಣಿ, ಪದ್ಮಪ್ರಿಯಾ ಅವರ ತಂಡಗಳಿಂದ ” ಭರತನಾಟ್ಯ”, “ಜಾನಪದ ನೃತ್ಯ”, “ದೇಶಭಕ್ತಿ ಗೀತೆ”,  ನೃತ್ಯಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ, ಸುಧೀಂದ್ರ ರಾವ್ (ಕಾರ್ಯಾಧ್ಯಕ್ಷರು, ಜರ್ನಲಿಸ್ಟ್ ಅಶೋಸಿಯೇಶನ್), ಲೀಲಾವತಿ ರುದ್ರಪ್ಪ (ಸಮಾಜ ಸೇವಕರು), ಕು.ಅಶ್ವಿನಿ (ಯೋಗ ಶಿಕ್ಷಕರು, ಶ್ರೀ ಪತಂಜಲಿ ಶಿಕ್ಷಣ ಸಮಿತಿ), ಶ್ರೀ ಎಸ್. ಎಸ್. ಶಂಕರ್ (ಪಿ.ಆರ್.ಓ. ಜಲಸಂಪನ್ಮೂಲ ಇಲಾಖೆ) ಇವರುಗಳು ಭಾಗವಹಿಸುತ್ತಾರೆಂದು ನೃತ್ಯ ದಿಶಾ ಟ್ರಸ್ಟಿನ ನಿರ್ದೇಶಕರಾದ ದರ್ಶಿನಿ ಮಂಜುನಾಥ್ ಅವರು ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles