ಮುತ್ತೈದೆ ಹೇಗಿರಬೇಕು?

ಹೆಣ್ಣು ಮನೆ ದೀಪ, ಮನೆಗೆ ಸಿರಿ ಹಾಗೂ ಶಾಂತಿ. ಸ್ತ್ರೀ ಎಂದರೆ ಆ ಮಹಾಲಕ್ಷ್ಮಿ, ಪಾರ್ವತಿ,ಸರಸ್ವತಿ,ಗಂಗೆ,ಯಮುನೆ ಎಂಬುವರು. ಅವಳು ಅತ್ಯಂತ ತ್ಯಾಗಮಯಿ. ಕರುಣಾನಿಧಿ, ಮಮತೆಯ ಮಹಾ‌ಮಾತೆ. ಅವಳು ಅನೇಕ ಜವಾಬ್ದಾರಿಗಳನ್ನು ಹೊತ್ತು ಈ ಧರೆಗೆ ಬಂದಿರುತ್ತಾಳೆ.(ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಕ್ಕನಾಗಿ, ಸೊಸೆಯಾಗಿ ಹಿಂದಿನ ತಲೆಯಾಗಿದ್ದ ಅಜ್ಜಿಯ ಹಿರಿಯಳಾಗಿ ಇತ್ಯಾದಿ…. ).

ಅವಳು ಯಾವ ಪೂಜೆ – ಪುನಸ್ಕಾರ ಇಲ್ಲದೆಯೂ ಭವ ಬಂಧನವನ್ನು ದಾಟಿಬಿಡಬಹುದು. ಆದರೆ ತನ್ನ ಮಕ್ಕಳಿಗೆ ಗಂಡನಿಗೆ ಹಾಗೂ ಸಂಸಾರದ ಉಳಿಸಿಕೊಳ್ಳುವ ಬಗ್ಗೆ ಹಾಗೂ ಸಂಸಾರವನ್ನುಳಿದು ಬೇರೆ ಯಾವ ವಿಚಾರಕ್ಕೂ ಹೋಗಲಾರಳು.

ಗಂಡ ಮಾಡಿದ ಪ್ರತೀ ಪುಣ್ಯದ ಕೆಲಸದಲ್ಲಿ ಅರ್ಧ ಪುಣ್ಯದ ಭಾಗ ಹೆಂಡತಿಗೆ ಸೇರುತ್ತದೆ. ಆದರೆ ಅವಳ ಪುಣ್ಯದಲ್ಲಿ ಅರ್ಧ ಗಂಡನಿಗೆ ಸೇರುವ ಬದಲು ಅವಳು ಮಾಡಿದ ಪಾಪಕರ್ಮದಲ್ಲಿ ಅದರ ಅರ್ಧಭಾಗ ಗಂಡನಿಗೆ ಸೇರುತ್ತದೆ ಎಂದು ಹೇಳುವರು.

ಒಮ್ಮೆ ಗುರುಬಂಧುವೊಬ್ಬರ ಮಗನ ಮದುವೆ ನಿಶ್ಚಿತಾರ್ಥದ ಪ್ರಯುಕ್ತ ಮುತ್ತೈದೆಯರಿಗೆ ಪೂಜೆ ಇಟ್ಟುಕೊಂಡಿದ್ದೇವೆ ಎನ್ನಲು, ಗುರುಗಳು ಅಲ್ಲಿದ್ದ ಸ್ತ್ರೀಯರನ್ನೆಲ್ಲ ಅರಿಸಿನ ಕುಂಕುಮವಿತ್ತು ಆಮಂತ್ರಿಸಲು ತಿಳಿಸಿದರು.

ಅದರಂತೆ ಮಾಡುತ್ತಿರುವಾಗ ಅಲ್ಲಿದ್ದ ಗುರುಬಂಧುಗಳನ್ನು ಗುರುಗಳು “ಮುತ್ತೈದೆ ಎಂದರೆ ಯಾರು?” ಎಂದು ಪ್ರಶ್ನಿಸಿದರು.

ಆಗ ಅವರೆಲ್ಲರೂ ‘ಕುಂಕುಮ ಇಟ್ಟವರು,ಮಾಂಗಲ್ಯದಿಂದ ಹೊಳಪು ಉಳ್ಳಾವಳು. ಕೈಗಳಾಲ್ಲಿ ಗಾಜಿನ ಬಳೆಗಳು ಸದ್ದು ಮಾಡುವಳು. ಕಾಲುಂಗುರ ಹಾಕಿದವರು, ಮೂಗುತಿ ಧರಿಸಿದವಳು ಹೀಗೆ ಹೇಳಿದಾಗ, ಗುರುಗಳು, “ಕೇವಲ ಕುಂಕುಮ ಇಟ್ಟವರು, ಕಾಲುಂಗುರ ಹಾಕಿದವರು ಮಾತ್ರವಲ್ಲ, ನಯ, ವಿನಯ, ಅನುಕಂಪ, ತ್ಯಾಗ, ಲಜ್ಜೆ ಇವೇ ಐದು ಮುತ್ತುಗಳು. ಆ ಗುಣವನ್ನು ಹೊಂದಿದಾಕೆ ಮುತ್ತೈದೆ. ಅಂಥವರ ಗರ್ಭದಲ್ಲಿ ಹಿರಣ್ಯಗರ್ಭ ಪ್ರಾಪ್ತವಾಗುತ್ತದೆ.

ಹೆಣ್ಣು ಚಂಚಲೆ. ಅವಳ ಚಂಚಲತೆಯನ್ನು ಕಡಿಮೆ ಮಾಡಲು ಋಷಿ- ಮುನಿಗಳು ತಿಲಕದಿಂದ (ಕುಂಕುಮ ಇಟ್ಟು ) ಅಗ್ನಿಬಂಧನ, ಮೂಗುತಿ ಹಾಕಿ ವಾಯುಬಂಧನ, ಕಿವಿ ಚುಚ್ಚಿ ಜಲ ತತ್ವದ ಬಂಧನ, ತಲೆಯಲ್ಲಿ ಬೈತಲೆ ತೆಗೆದು ಬಾಚಿ ಆಕಾಶ ತತ್ವ ಬಂಧನ, ಕಾಲುಂಗುರ ಅಥವಾ ಅರಿಸಿನ ಹಚ್ಚಿ ಭೂಬಂಧನದಿಂದ ಆಗುವ ಚಂಚಲ ಮನೋಭಾವವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ. ಅಷ್ಟೆ. ಕೇವಲ ಕುಂಕುಮ ಇಟ್ಟವರು, ಕಾಲುಂಗುರ ಹಾಕಿದವರು ಮಾತ್ರ ಮುತ್ತೈದೆಯೆಂದಲ್ಲ” ಎಂದು ವಿವರಿಸಿದರು.

‘ಸ್ತ್ರೀ’ ಎಂದರೆ ಭೂಮಿ. ಭೂಮಿಯಂತಹ ತ್ಯಾಗ, ಸಮಾಧಾನವನ್ನು ಸ್ತ್ರೀಯರು ಗಳಿಸಿಕೊಳ್ಳಬೇಕು. ನಯ, ವಿನಯ, ಅನುಕಂಪ, ತ್ಯಾಗ, ಲಜ್ಜೆ ಇವೇ ಐದು ಮುತ್ತುಗಳು. ಇವನ್ನು ಹೊಂದಿದಾಕೆ ಮುತೈದೆ.

ಸಂಗ್ರಹ: ಎಚ್ ಎಸ್ ರಂಗರಾಜನ್ ಅರ್ಚಕರು

Related Articles

ಪ್ರತಿಕ್ರಿಯೆ ನೀಡಿ

Latest Articles