ಬೆಂಗಳೂರಿನ ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಫೆಬ್ರವರಿ 17 ಗುರುವಾರ ಸಂಜೆ ಏರ್ಪಡಿಸಿದ್ದ “ದಾಸರ ಪದಗಳ ಗಾಯನ” ಕಾರ್ಯಕ್ರಮದಲ್ಲಿ ಕು|| ಅದಿತಿ ಪ್ರಹ್ಲಾದ್ ಅವರು, “ಶರಣು ಮೂಷಕವಾಹನ”, “ನಮಿಸಿ ಬೇಡುವೆ ವರಗಳ ನಿನ್ನ”, “ಎದ್ದು ಬರುತಾರೆ ನೋಡೆ”, “ಶ್ರೀ ರಾಘವೇಂದ್ರ ಫಾರೋ”, “ವೀರ ಹನುಮ ಬಹು ಪರಾಕ್ರಮ”, “ಪವಮಾನ ಜಗದ ಪ್ರಾಣ”, “ಗುರುವಿನ ಗುಲಾಮನಾಗುವ ತನಕ”, “ಮಾನವ ಜನ್ಮ ದೊಡ್ಡದು”, “ಕೃಷ್ಣ ನೀ ಬೇಗನೆ ಬಾರೋ”, “ತಾರಕ್ಕ ಬಿಂದಿಗೆ ನಾ ನೀರಿಗೆ ಹೋಗುವೆ”, “ಏಕೆ ಕಡೆಗಣ್ಣಿಂದ ನೋಡುವೆ” ಇನ್ನೂ ಮುಂತಾದ ಹಲವಾರು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿದರು. ಇವರಿಗೆ ಪಕ್ಕವಾದ್ಯದಲ್ಲಿ, ವಿದ್ವಾನ್ ಶ್ರೀ ಬಿ. ಎಸ್. ಮಧುಸೂದನ್ (ಪಿಟೀಲು), ವಿದ್ವಾನ್ ಶ್ರೀ ಪ್ರವೀಣ್ (ಮೃದಂಗ) ಅವರು ಸಾಥ್ ನೀಡಿದರು. ಶ್ರೀ ಮಠದ ಪ್ರಧಾನ ಅರ್ಚಕರಾದ ಶ್ರೀ ನಂದಕಿಶೋರಾಚಾರ್ ಅವರು ಕಲಾವಿದರಿಗೆ ಶಾಲು ಹೊದಿಸಿ, ಗುರುಗಳ ಪ್ರಸಾದ ನೀಡಿದರು.