ಬೆಂಗಳೂರು: ‘ಶ್ರೀ ರಾಯರ 401ನೇ ಪಟ್ಟಾಭಿಷೇಕೋತ್ಸವ” ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಜಯನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ108 ಶ್ರೀ ಶ್ರೀ ಸುಭುದೇಂದ್ರ ತೀರ್ಥ ಶ್ರೀ ಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ಗುರು ರಾಯರ ಬೃಂದಾವನಕ್ಕೆ ಸಹಸ್ರ ಕಳಶ ಕ್ಷೀರಾಭಿಷೇಕವನ್ನು ಆಚಾರ್ಯ ಶ್ರೀ ಕೃಷ್ಣಗುಂಡಾಚಾರ್ಯರು ನೆರವೇರಿಸಿದರು.
ನಂತರ ಪಟ್ಟಾಭಿಷೇಕದ ಅಂಗವಾಗಿ ಸ್ವರ್ಣ ಸಿಂಹಾಸನದಲ್ಲಿ ರಾಯರ ಪಾದುಕೆಗಳನ್ನು ಇರಿಸಿ ರಜತ ದೀಪಗಳಪ್ರಜ್ವಲನ “ಪುಷ್ಪವೃಷ್ಟಿ”ಯೊಂದಿಗೆ ಶ್ರೀ ಗುರು ರಾಯರ ಪಟ್ಟಾಭಿಷೇಕ ಮಹೋತ್ಸವವು ವಿಶೇಷವಾಗಿ ಶ್ರೀಸೂಕ್ತ ಹೋಮ ಉತ್ಸವಗಳ ಮಹಾಮಂಗಳಾರತಿ ಅನ್ನಸಂತರ್ಪಣೆಯೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಆರ್ ಕೆ ವಾದೀಂದ್ರಾಚಾರ್ಯ, ನಂದ ಕಿಶೋರ್ ಆಚಾರ್ಯ, ಕೃಷ್ಣಾಚಾರ್ಯ , ರಾಮಚಂದ್ರಾಚಾರ್ಯ, ಶ್ರೀಪಾದ ಆಚಾರ್ಯ, ಪ್ರಮೋದ್ ಆಚಾರ್ಯ ಇತರೆ ಸಿಬ್ಬಂದಿಗಳ ಹಾಗೂ ಭಕ್ತರು ಭಾಗವಹಿಸಿ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು.