ಸ್ತ್ರೀ ಸಹೃದಯಿ

ಮನೆಯ ಬೆಳಕಲ್ಲ ಅವಳು ಜಗದ ಬೆಳಕು
ತೊಟ್ಟಿಲಲಿ ತೂಗಿದಳು ತ್ರೀ ಮೂರ್ತಿಗಳನ್ನು
ದೇವಾನು ದೇವತೆಗಳು ಶಿರಬಾಗಿದರು
ಅವಳಿಗೆ ಸರಿ ಸಮನಾರಿಲ್ಲವೆಂದರು||

ಎಲ್ಲಕ್ಕಿಂತ ಶ್ರೇಷ್ಠಳು  ತಾಯಿ ಜಗದಿ
ಕಷ್ಟಗಳ ಬಚ್ಚಿಡುವಳು  ಮನದಿ
ಸಂಸಾರವನು ಸರಿದೂಗಿಸುವ ಸುಮತಿ
ಸಂತಸವನು ಸುರಿಯುವ ಸಹೃದಯಿ||

ಆಕಾಶದೆತ್ತರಕೆ ಹರಡಿಹುದು ಕೀರ್ತಿ
ಇತಿಹಾಸದ ಪುಟಗಳಲಿ ಅವಳದೇ ಛಾತಿ
ಸೋಲೆಂಬುದಿಲ್ಲ ಇವಳ ಕಾಯಕದಲಿ
ಪ್ರೀತಿಗೆ ಕೊನೆ ಇಲ್ಲ ಇವಳ ಮಡಿಲಲಿ||
 
ಮಗಳಾಗಿ ಅಕ್ಕರೆಯ ಸಿಹಿ ತರುವಳು
ಸಹೋದರಿಯಾಗಿ ಸವಿ ಪ್ರೀತಿ ಎರೆವಳು
ಸಂಗಾತಿಯಾಗಿ ಬಾಳಿಗೊಲವ ತರುವಳು
ತಾಯಿಯಾಗಿ ಸರ್ವಸ್ವವನ್ನೂ ಧಾರೆ ಎರೆವಳು||

ಅವಳು ಸೇವೆ ಮಾಡದ ಕ್ಷೇತ್ರಗಳಿಲ್ಲ
ಹೇಳುತ್ತ ಹೋದರೆ ಸಮಯ ಸರಿಯುವುದೆಲ್ಲ
ಅದೆಂತಹ ಶಕ್ತಿ ಅಡಗಿಹುದು ಅವಳಲಿ
ಸಕಲರು ಸೋತಿಹರು ಅವಳ ಪ್ರೇಮದಲಿ||

ಸ್ತ್ರೀ ಎಂದರೆ ಭೋಗದ ವಸ್ತುವಲ್ಲ
ಭಾಗ್ಯತರುವ ದೇವತೆ ತಿಳಿಯಿರೆಲ್ಲ
ಇಷ್ಟಾದರೂ ನಿಲ್ಲುತಿಲ್ಲ ಅತ್ಯಾಚಾರ ಗಳ ಪ್ರಕರಣ
ಯಾವಾಗ ಬರುವುದು ಮತಿಗೇಡಿಗಳಿಗೆ ಒಳ್ಳೆತನ||

ಸಹೋದರರೇ ಮರೆಯದಿರಿ ನೀವು
ನಿಮ್ಮ ಹೆತ್ತ ತಾಯಿಯೂ ಹೆಣ್ಣೆಂಬುದನು
ಪೆಣ್ಣ ಪೂಜಿಸುವ ನಾಡು ನಮ್ಮದು
ಅವಳ ರಕ್ಷಣೆಯ ಹೊಣೆ ನಿಮ್ಮದೆಂದೆಂದು||



<!-- wp:paragraph -->
<p>ಮನೆಯ ಬೆಳಕಲ್ಲ ಅವಳು ಜಗದ ಬೆಳಕು
ತೊಟ್ಟಿಲಲಿ ತೂಗಿದಳು ತ್ರೀ ಮೂರ್ತಿಗಳನ್ನು
ದೇವಾನು ದೇವತೆಗಳು ಶಿರಬಾಗಿದರು
ಅವಳಿಗೆ ಸರಿ ಸಮನಾರಿಲ್ಲವೆಂದರು||

ಎಲ್ಲಕ್ಕಿಂತ ಶ್ರೇಷ್ಠಳು ತಾಯಿ ಜಗದಿ
ಕಷ್ಟಗಳ ಬಚ್ಚಿಡುವಳು  ಮನದಿ
ಸಂಸಾರವನು ಸರಿದೂಗಿಸುವ ಸುಮತಿ
ಸಂತಸವನು ಸುರಿಯುವ ಸಹೃದಯಿ||

ಆಕಾಶದೆತ್ತರಕೆ ಹರಡಿಹುದು ಕೀರ್ತಿ
ಇತಿಹಾಸದ ಪುಟಗಳಲಿ ಅವಳದೇ ಛಾತಿ
ಸೋಲೆಂಬುದಿಲ್ಲ ಇವಳ ಕಾಯಕದಲಿ
ಪ್ರೀತಿಗೆ ಕೊನೆ ಇಲ್ಲ ಇವಳ ಮಡಿಲಲಿ||
 
ಮಗಳಾಗಿ ಅಕ್ಕರೆಯ ಸಿಹಿ ತರುವಳು
ಸಹೋದರಿಯಾಗಿ ಸವಿ ಪ್ರೀತಿ ಎರೆವಳು
ಸಂಗಾತಿಯಾಗಿ ಬಾಳಿಗೊಲವ ತರುವಳು
ತಾಯಿಯಾಗಿ ಸರ್ವಸ್ವವನ್ನೂ ಧಾರೆ ಎರೆವಳು||

ಅವಳು ಸೇವೆ ಮಾಡದ ಕ್ಷೇತ್ರಗಳಿಲ್ಲ
ಹೇಳುತ್ತ ಹೋದರೆ ಸಮಯ ಸರಿಯುವುದೆಲ್ಲ
ಅದೆಂತಹ ಶಕ್ತಿ ಅಡಗಿಹುದು ಅವಳಲಿ
ಸಕಲರು ಸೋತಿಹರು ಅವಳ ಪ್ರೇಮದಲಿ||

ಸ್ತ್ರೀ ಎಂದರೆ ಭೋಗದ ವಸ್ತುವಲ್ಲ
ಭಾಗ್ಯತರುವ ದೇವತೆ ತಿಳಿಯಿರೆಲ್ಲ
ಇಷ್ಟಾದರೂ ನಿಲ್ಲುತಿಲ್ಲ ಅತ್ಯಾಚಾರ ಗಳ ಪ್ರಕರಣ
ಯಾವಾಗ ಬರುವುದು ಮತಿಗೇಡಿಗಳಿಗೆ ಒಳ್ಳೆತನ||

ಸಹೋದರರೇ ಮರೆಯದಿರಿ ನೀವು
ನಿಮ್ಮ ಹೆತ್ತ ತಾಯಿಯೂ ಹೆಣ್ಣೆಂಬುದನು
ಪೆಣ್ಣ ಪೂಜಿಸುವ ನಾಡು ನಮ್ಮದು
ಅವಳ ರಕ್ಷಣೆಯ ಹೊಣೆ ನಿಮ್ಮದೆಂದೆಂದು||

* ಶ್ರೀಮತಿ ಜ್ಯೋತಿ ಕೋಟಗಿ, 
ಶಿಕ್ಷಕಿ, 
ಸ ಮಾ ಪ್ರಾ ಶಾಲೆ ತಲ್ಲೂರ, 
ತಾ ಸವದತ್ತಿ, 
ಜಿ ಬೆಳಗಾವಿ.

Related Articles

ಪ್ರತಿಕ್ರಿಯೆ ನೀಡಿ

Latest Articles