ಬೆಂಗಳೂರು: ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ 108 ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ರಾಜಾ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಮಾ. 9 ರಂದು ಶ್ರೀ ರಾಯರ 427 ನೇ ಜನ್ಮ ದಿನೋತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಿಶೋರ್ ಆಚಾರ್ಯರು ತಿಳಿಸಿದರು.
ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವದ ಅಂಗವಾಗಿ ಬೆಳಗ್ಗೆ 7-30 ಕ್ಕೆ ಗುರು ರಾಯರ ಬೃಂದಾವನಕ್ಕೆ ಅರ್ಚಕರಿಂದ ಫಲಪಂಚಾಮೃತ ಅಭಿಷೇಕವು ಶ್ರೀ ರಾಘವೇಂದ್ರ ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ ನೆರವೇರಲಿದೆ ವ್ಯವಸ್ಥಾಪಕರಾದ ಆರ್.ಕೆ ವಾದೀಂದ್ರಾಚಾರ್ಯರು ಎಂದು ತಿಳಿಸಿದರು.
ಬೆಳಗ್ಗೆ8ಕ್ಕೆ ಶ್ರೀ ಧನ್ವಂತರಿ ಹೋಮ ಹಾಗೂ ಬೆಳಗ್ಗೆ 10ಕ್ಕೆ ಉತ್ಸವಗಳು ನೆರವೇರುವುದು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಬೆಳಗ್ಗೆ11ಗಂಟೆಗೆ “ಲಕ್ಷ ಪುಷ್ಪಾರ್ಚನೆ”, ಲಕ್ಷಾವರ್ತಿ ಪಾರಾಯಣ ಸಂಘದ ವೇಣುಗೋಪಾಲಾಚಾರ್ಯರ ವೃಂದದವರಿಂದ ಶ್ರೀ ವೆಂಕಟೇಶ ಸ್ತೋತ್ರ, ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ, ಶ್ರೀಹರಿವಾಯು ಸ್ತುತಿಸ್ತೋತ್ರ ಹಾಗೂ ಶ್ರೀ ಗುರು ರಾಘವೇಂದ್ರ ಸ್ತೋತ್ರ ಅಷ್ಟೋತ್ತರದೊಂದಿಗೆ ಅರ್ಚಕರಿಂದ “ಲಕ್ಷ ಪುಷ್ಪಾರ್ಚನೆ”ಯೂ ನೆರವೇರಲಿದೆ. ನಂತರ ಅನ್ನ ಸಂತರ್ಪಣೆ.
ಸಂಜೆ 5 ಕ್ಕೆ ಶ್ರೀಹರಿ ಭಜನೆ, ಪ್ರವಚನ, ದೀಪೋತ್ಸವ , ಮಂಗಳಾರತಿ ಹಾಗೂ ಸಂಜೆ 7-15 ಕ್ಕೆ ವಿದುಷಿ – ಅಪರ್ಣ ಆನಂದ್ ವೃಂದದವರು “ದಾಸವಾಣಿ” ಕಾರ್ಯಕ್ರಮ ಸುಧೀಂದ್ರ ದೇಸಾಯಿಯವರ ಹಾಗೂ ಎನ್ .ವಿ ಶ್ರೀ ಲಕ್ಷ್ಮೀನಾರಾಯಣರವರ ಸಹಕಾರದೊಂದಿಗೆ ನೆರವೇರಲಿದೆ. ಈ ಸಂದರ್ಭದಲ್ಲಿ ಭಕ್ತಾದಿಗಳು ರಾಯರ ಸನ್ನಿಧಿಗೆ ಆಗಮಿಸಿ ಶ್ರೀ ಗುರು ರಾಯರ ದರ್ಶನ ಪಡೆದು ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದರು.
ಹೆಚ್ಚಿನ ಮಾಹಿತಿಗೆ 9449133929 .