ವಯ್ಯಾಲಿಕಾವಲ್ ಎಕ್ಸ್ ಟೆನ್ ಷನ್ ಅಸೋಸಿಯೇಷನ್ ವತಿಯಿಂದ ವಯ್ಯಾಲಿಕಾವಲ್ 9ನೇ ಮುಖ್ಯರಸ್ತೆ, 14ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಮ ದೇವಸ್ಥಾನದಲ್ಲಿ ಸಂಸ್ಥೆಯ 56ನೇ ವಾರ್ಷಿಕೋತ್ಸವದ ಸಂಗೀತೋತ್ಸವವನ್ನು ಏಪ್ರಿಲ್ 2 ರಿಂದ ಏಪ್ರಿಲ್ 16ರ ವರೆಗೆ ಏರ್ಪಡಿಸಿದ್ದು, ಕಾರ್ಯಕ್ರಮಗಳ ವಿವರಗಳು ಈ ರೀತಿ ಇವೆ
ಧಾರ್ಮಿಕ ಕಾರ್ಯಕ್ರಮಗಳು:
ಏಪ್ರಿಲ್ 2-ಪಂಚಾಂಗ ಶ್ರವಣ, ಏಪ್ರಿಲ್ 9-ಸೀತಾ ಕಲ್ಯಾಣ, ಏಪ್ರಿಲ್ 10- ಪ್ರಾಕಾರೋತ್ಸವ, ಏಪ್ರಿಲ್ 11- ಹನುಮಂತೋತ್ಸವ, ಏಪ್ರಿಲ್ 12- ಶ್ರೀ ರಾಮ ಪಟ್ಟಾಭಿಷೇಕ.
ಸಂಗೀತಕಾರ್ಯಕ್ರಮಗಳು:
ಏಪ್ರಿಲ್ 2, ವಿ|| ಹೆಚ್. ಎನ್. ಮೀರ, ಏಪ್ರಿಲ್ 3-ವಿ|| ಶ್ರೀರಂಗಂ ವೆಂಕಟ್ ನಾಗರಾಜನ್, ಏಪ್ರಿಲ್ 4-ವಿ| ಎನ್ ಎಸ್ ಅಭಿಷೇಕ್, ಏಪ್ರಿಲ್ 5-ವಿ|| ನಿರಂಜನ್ ದಿನ್ ದೋಡಿ, ಏಪ್ರಿಲ್ 6-ವಿ|| ಸುಮಾ ಸುಧೀಂದ್ರ (ವೀಣೆ), ಏಪ್ರಿಲ್ 7-ವಿ|| ಶ್ರೇಯ ಕೊಳತಾಯ, ಏಪ್ರಿಲ್ 8-ವಿ|| ಸುನೀಲ್ ಗಾರ್ಗೇಯನ್ (ಚೆನ್ನೈ), ಏಪ್ರಿಲ್ 9-ವಿ|| ಅಪೇಕ್ಷ ಅಪ್ಪಾಲ, ಏಪ್ರಿಲ್ 10- ಸಂಕೀರ್ತನ ಭಜನಾ ಮಂಡಳಿ (ಭಜನೆ), ಏಪ್ರಿಲ್ 11- ವಿ|| ಅಪ್ರಮೇಯ ಜಿ. ವಶಿಷ್ಠ, ಏಪ್ರಿಲ್ 12-ಶ್ರೀಮತಿ ವಿಂಧ್ಯಾ ಅಡಿಗ (ದಾಸವಾಣಿ), ಏಪ್ರಿಲ್ 13- ವಿ|| ಮಾಧುರಿ ಕೌಶಿಕ್, ಎಪ್ರಿಲ್ 14- ವಿ|| ಎಂ. ಎಸ್. ನರಸಿಂಹ ಮೂರ್ತಿ ಮತ್ತು ವಿ|| ಗುಂಡೂರಾವ್ ಇವರಿಂದ “ಹಾಾಸ್ಯೋಲ್ಲಾಸ”, ಏಪ್ರಿಲ್ 15- ವಿ|| ಸಮುುದ್ಯತ (ಸುಗಮ ಸಂಗೀತ) ಮತ್ತು ಏಪ್ರಿಲ್ 16- ಶಾಸ್ತ್ರೀಯ ವೈವಿಧ್ಯ ನೃತ್ಯ.
ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಭಾಗವಹಿಸಿ, ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಡಾ|| ಭಾಷ್ಯಂ ಚಕ್ರವರ್ತಿ ಅವರು ವಿನಂತಿಸಿದ್ದಾರೆ.