ಬೀಜ ಮಂತ್ರಗಳನ್ನು ಹೇಗೆ ಪಠಿಸಬೇಕು ?

ಬೀಜ ಮಂತ್ರಗಳನ್ನು ಪಠಿಸುವುದು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಗ್ರಹ ಮತ್ತು ದೇವತೆಗೆ ತನ್ನದೇ ಆದ ಬೀಜ ಮಂತ್ರಗಳಿವೆ ಮತ್ತು ಬೀಜ ಮಂತ್ರದ ನಿರಂತರ ಪಠಣವು ಅನೇಕ ಶುಭ ಪ್ರಯೋಜನಗಳನ್ನು ತರುತ್ತದೆ ಮತ್ತು ಅನೇಕ ವಿದ್ವಾಂಸರು ಹೇಳುವಂತೆ ಬೀಜ ಮಂತ್ರಗಳನ್ನು ಪಠಿಸುವುದು ಸಂತೋಷಕರ ಜೀವನದ ಭಾಗವಾಗಿದೆ. ಅನೇಕ ಜನರು ಬೀಜ ಮಂತ್ರಗಳು ಚಿಕ್ಕದಾಗಿರುತ್ತದೆ ಆದ್ದರಿಂದ ಅವುಗಳು ಕಡಿಮೆ ಪರಿಣಾಮ ಬೀರುತ್ತದೆ ಎಂದು ನಂಬುತ್ತಾರೆ. ಆದರೆ ಸತ್ಯವೆಂದರೆ ಬೀಜ ಮಂತ್ರ ಚಿಕ್ಕದಾದರೂ ಅದಕ್ಕೆ ವಿಶೇಷ ಶಕ್ತಿ ಇದೆ ಮತ್ತು ಈ ಮಂತ್ರಗಳನ್ನು ಪ್ರಾಮಾಣಿಕ ಮತ್ತು ಶುದ್ಧ ಮನಸ್ಸಿನಿಂದ ಜಪಿಸಿದರೆ, ಆ ವ್ಯಕ್ತಿ ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾನೆ. ಬೀಜ ಮಂತ್ರವು ವ್ಯಕ್ತಿಗೆ ರಕ್ಷಣಾತ್ಮಕ ಗುರಾಣಿಯಾಗಿ ಮತ್ತು ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ನೀಡುತ್ತದೆ ಎಂದು ಧರ್ಮಗ್ರಂಥಗಳು ಹೇಳುತ್ತವೆ. ​

*ಓಂ

ಈ ಬೀಜ ಮಂತ್ರವು ಹಿಂದೂ ತ್ರಿಮೂರ್ತಿ ದೇವರುಗಳ ಅತೀಂದ್ರಿಯ ಹೆಸರು, ಮತ್ತು ಮೂರು ದೇವರುಗಳ ಒಕ್ಕೂಟವನ್ನು ಪ್ರತಿನಿಧಿಸುತ್ತದೆ. ಮೂರು ಶಬ್ದಗಳು ಮೂರು ವೇದಗಳನ್ನು (ಋಗ್ವೇದ, ಸಾಮವೇದ, ಯಜುರ್ವೇದ) ಪ್ರತಿನಿಧಿಸುತ್ತದೆ. ಇದು ನಮ್ಮಲ್ಲಿನ ಅತೀಂದ್ರಿಯ ಶಕ್ತಿಯನ್ನು ಜಾಗೃತಗೊಳಿಸುತ್ತದೆ.

*​ಕ್ರೀಂ

ಇದು ದೇವತೆ ಕಾಳಿಗೆ ಅರ್ಪಿತವಾದ ಬೀಜ ಮಂತ್ರ. ಕಾಳಿ ದೇವಿಯು ನಮಗೆ ಆರೋಗ್ಯ, ಶಕ್ತಿ, ಸರ್ವತೋಮುಖ ಯಶಸ್ಸನ್ನು ನೀಡುತ್ತಾಳೆ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆಯನ್ನು ನೀಡುತ್ತಾಳೆ. ಈ ಮಂತ್ರವು ಕಾಳಿ ಮಹಾವಿದ್ಯಾ ಸಾಧನೆಗೆ ಬಲವಾದ ನೆಲೆಯನ್ನು ಸೃಷ್ಟಿಸುತ್ತದೆ. ಈ ಮಂತ್ರ ದುಃಖವನ್ನು ಹೋಗಲಾಡಿಸುವವಳು.

*​ಶ್ರೀಂ

ಮಹಾಲಕ್ಷ್ಮೀ ದೇವಿಗೆ ಸಂಬಂಧಿಸಿದ ಬೀಜ ಮಂತ್ರ ಇದಾಗಿದೆ. ಸಂಪತ್ತು, ವಸ್ತು ಲಾಭಗಳು, ವ್ಯವಹಾರ ಅಥವಾ ವೃತ್ತಿಯಲ್ಲಿ ಯಶಸ್ಸು, ಕಾಯಿಲೆಗಳು ಮತ್ತು ಚಿಂತೆಗಳನ್ನು ಹೋಗಲಾಡಿಸುವುದು, ರಕ್ಷಣೆ, ಸುಂದರ ಹೆಂಡತಿಯನ್ನು ಪಡೆಯುವುದು, ಸಂತೋಷದ ದಾಂಪತ್ಯ ಜೀವನ ಮತ್ತು ಸರ್ವತೋಮುಖ ಯಶಸ್ಸಿಗೆ ಇದನ್ನು ಪಠಿಸಲಾಗುತ್ತದೆ. ಮತ್ತು ದುಃಖವನ್ನು ಹೋಗಲಾಡಿಸಲಾಗುತ್ತದೆ.

*​ಹ್ರೌಂ

ಇದು ಶಿವನೊಂದಿಗೆ ಸಂಬಂಧವನ್ನು ಹೊಂದಿದ ಬೀಜ ಮಂತ್ರ. ಶಿವನು ಅಪಘಾತ, ಆಕಸ್ಮಿಕ ಮರಣ, ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸುತ್ತಾನೆ, ಒಬ್ಬ ವ್ಯಕ್ತಿಯು ಶಿವನ ಮಂತ್ರಗಳ ಜೊತೆಗೆ ಭಕ್ತಿಯಿಂದ ಬೀಜ ಮಂತ್ರವನ್ನು ಪಠಿಸಿದರೆ ಅಮರತ್ವ, ಮೋಕ್ಷ ಮತ್ತು ಸರ್ವತೋಮುಖ ಯಶಸ್ಸನ್ನು ಪಡೆಯುತ್ತಾನೆ.

*​ಹ್ರೀ0 ಎನ್ನುವ ಬೀಜ ಮಂತ್ರವು ಭುವನೇಶ್ವರಿ ಮತ್ತು ಮಹಾಮಾಯೆಯನ್ನು ಒಲಿಸಿಕೊಳ್ಳಲು ಬಳಸಬಹುದಾದ ಬೀಜ ಮಂತ್ರವಾಗಿದೆ. ಈ ಬೀಜ ಮಂತ್ರವನ್ನು ಪಠಿಸುವುದರಿಂದ ಭುವನೇಶ್ವರಿ ದೇವಿಯು ನಮ್ಮೆಲ್ಲರ ದುಃಖವನ್ನು ಕೊನೆಗೊಳಿಸುತ್ತಾಳೆ. ಮತ್ತು ನಮ್ಮೊಳಗಿನ ನಾಯಕತ್ವ ಗುಣವನ್ನು ಇದು ಹೆಚ್ಚಿಸುತ್ತದೆ ಮತ್ತು ಈ ಗುಣವನ್ನು ನಮ್ಮಲ್ಲಿ ತುಂಬುತ್ತದೆ.

*ಐಂ

ಐಂ ಎನ್ನುವ ಈ ಬೀಜ ಮಂತ್ರವು ದೇವಿ ಸರಸ್ವತಿಯೊಂದಿಗೆ ಸಂಬಂಧವನ್ನು ಹೊಂದಿದ ಬೀಜ ಮಂತ್ರವಾಗಿದೆ. ಈ ಮಂತ್ರವನ್ನು ಸರಸ್ವತಿ ದೇವಿಯ ಆಹ್ವಾನಕ್ಕೆ ಬಳಸಲಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ವಿದ್ಯಾ, ವಾಕ್‌ ಚಾತುರ್ಯ, ಬುದ್ಧಿವಂತಿಕೆ, ಯಶಸ್ಸು ಮತ್ತು ಜ್ಞಾನ ಪ್ರಾಪ್ತವಾಗುತ್ತದೆ. ನೀವು ಎಷ್ಟು ಹೆಚ್ಚು ಜಪಿಸುತ್ತೀರೋ ಅಷ್ಟು ಬುದ್ಧಿವಂತರಾಗುತ್ತೀರಿ. ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮನ್ನು ಸಹ ಶಾಂತಗೊಳಿಸುತ್ತದೆ.

*​ಗಂ

ಗಂ ಎನ್ನುವ ಬೀಜ ಮಂತ್ರವನ್ನು ಭಗವಾನ್‌ ಗಣಪತಿಯನ್ನು ಆಹ್ವಾನಿಸಲು ಪಠಿಸಲಾಗುತ್ತದೆ. ಈ ಬೀಜ ಮಂತ್ರವನ್ನು ಪಠಿಸುವುದರಿಂದ ನಮ್ಮೆಲ್ಲಾ ಕಾರ್ಯಗಳಲ್ಲಿನ ವಿಘ್ನಗಳು ದೂರಾಗುತ್ತದೆ. ಮತ್ತು ಗಣೇಶನನ್ನು ಬುದ್ಧಿವಂತಿಕೆಯ ದೇವನೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಮಂತ್ರದ ಪಠಣವು ನಮ್ಮಲ್ಲಿ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ.

*​ಫ್ರೌಂ

ಭಗವಾನ್‌ ಹನುಮಂತನನ್ನು ಆಹ್ವಾನಿಸಲು, ಆತನ ಆಶೀರ್ವಾದವನ್ನು ಪಡೆದುಕೊಳ್ಳಲು ಫ್ರೌಂ ಎನ್ನುವ ಬೀಜ ಮಂತ್ರವನ್ನು ಪಠಿಸಲಾಗುತ್ತದೆ. ಹನುಮಾನ್‌ ಬೀಜ ಮಂತ್ರವನ್ನು ಪಠಿಸುವುದರಿಂದ ನಕಾರಾತ್ಮಕ ಶಕ್ತಿಯು ದೂರಾಗುತ್ತದೆ. ದೆವ್ವ – ಭೂತಗಳ ಭಯ ನಮ್ಮನ್ನು ಮುಟ್ಟುವುದಿಲ್ಲ. ಹನುಮಂತನು ಶಕ್ತಿ ಮತ್ತು ಧೈರ್ಯದ ಸಂಕೇತ.

*​ಧಂ

ಧನಾಧಿಪತಿ ಕುಬೇರನ ಆಶೀರ್ವಾದವನ್ನು ಪಡೆದುಕೊಳ್ಳಲು ನಾವು ಈ ಬೀಜ ಮಂತ್ರವನ್ನು ಪಠಿಸಲಾಗುತ್ತದೆ ಮತ್ತು ಇದು ನಿಮಗೆ ಅದೃಷ್ಟ ಮತ್ತು ಸಂಪತ್ತನ್ನು ನೀಡುತ್ತದೆ. ಹಣದ ಲಾಭವನ್ನು ಪಡೆದುಕೊಳ್ಳಲು ಕೂಡ ನಾವು ಈ ಬೀಜ ಮಂತ್ರವನ್ನು ಪಠಿಸಬಹುದು.

*​ದಂ

ದಂ ಎನ್ನುವ ಬೀಜ ಮಂತ್ರವನ್ನು ಭಗವಾನ್‌ ವಿಷ್ಣುವನ್ನು ಆಹ್ವಾನಿಸಲು ಪಠಿಸಲಾಗುತ್ತದೆ. ವಿವಾಹದಲ್ಲಿನ ಸಮಸ್ಯೆಗಳನ್ನು ಮುಕ್ತಿಗೊಳಿಸಲು ಭಗವಾನ್‌ ವಿಷ್ಣುವನ್ನು ಪೂಜಿಸಲಾಗುತ್ತದೆ. ಶೀಘ್ರ ವಿವಾಹಕ್ಕಾಗಿ ಕೂಡ ನಾವು ವಿಷ್ಣುವನ್ನು ಪಠಿಸಬಹುದು.

*​ಭ್ರಂ

ಇದು ಭಗವಾನ್ ಭೈರವನ ಬೀಜ ಮಂತ್ರ. ಇದನ್ನು ಸಾಮಾನ್ಯವಾಗಿ ಗೆಲುವು, ಉತ್ತಮ ಆರೋಗ್ಯ, ಸಂಪತ್ತಿನ ಭೌತಿಕ ಲಾಭ ಮತ್ತು ಮುಂತಾದವುಗಳಿಗಾಗಿ ಪಠಿಸಲಾಗುತ್ತದೆ. ನೀವು ನ್ಯಾಯಾಲಯದ ಪ್ರಕರಣವನ್ನು ಎದುರಿಸುತ್ತಿದ್ದರೆ, ಈ ಮಂತ್ರವನ್ನು ಪಠಿಸಿ ಮತ್ತು ನೀವು ಒಂದೆರೆಡು ದಿನಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ.

*ದುಂ

ದುಂ ಇದು ದೇವಿ ದುರ್ಗೆಯ ಬೀಜ ಮಂತ್ರ. ಇದನ್ನು ಜಪಿಸುವುದರಿಂದ ದುಷ್ಟ ಶಕ್ತಿಗಳ ವಿರುದ್ಧ ಜಯ ಹೊಂದಲು, ಶತ್ರುಗಳ ಬಾಧೆಯನ್ನು ತಪ್ಪಿಸಲು, ಭಯ ನಿವಾರಣೆ ಪಡೆಯಬಹುದು.‌ ‌ ‌ ‌ ‌ *ಸೂಚನೆ* :- ಸದ್ಗುರುಗಳಿಂದ ಉಪದೇಶ ಪಡೆದು, ಸೂಕ್ತವಾದ ಸಮಯದಿಂದ ಜಪಿಸಲು ಪ್ರಾರಂಭ ಮಾಡಿ. ನಿಸ್ಸಂದೇಹವಾಗಿ ಶುಭ ಫಲಗಳು ದೊರೆಯುತ್ತವೆ.

ಸಂಗ್ರಹ : ಎಚ್ ಎಸ್ ರಂಗರಾಜನ್
ಪ್ರಧಾನ ಅರ್ಚಕರು
ಶ್ರೀ ಚನ್ನರಾಯ ಸ್ವಾಮಿ ದೇಗುಲ ಹುಸ್ಕೂರು ಬೆಂಗಳೂರು

Related Articles

ಪ್ರತಿಕ್ರಿಯೆ ನೀಡಿ

Latest Articles