ಹೊಳೆಹೊನ್ನೂರು ಆಂಜನೇಯ ಸ್ವಾಮಿ ಪುನರ್ ಪ್ರತಿಷ್ಠಾಪನೆ

ಹೊಳೆಹೊನ್ನೂರು: ಮುಕ್ಕೋಟಿ ದೇವರನ್ನು ಪೂಜಿಸುವಂತಹ ಹಿಂದೂ ಧರ್ಮದಲ್ಲಿ ಆಂಜನೇಯ ದೇವರನ್ನು ತುಂಬಾ ವಿಶೇಷವಾಗಿ ಪೂಜಿಸಲಾಗುತ್ತದೆ. ಅದರಲ್ಲೂ ಬ್ರಹ್ಮಚಾರಿಯಾಗಿರುವ  ಆಂಜನೇಯಸ್ವಾಮಿಯನ್ನು  ಹೆಚ್ಚಾಗಿ ಅವಿವಾಹಿತ ಮಹಿಳೆಯರು ಮತ್ತು ಪುರುಷರು ಪೂಜಿಸುವರು. ಹನುಮಂತ ದೇವರು ಬೇಡಿದ ವರವನ್ನು ನೀಡುವವನು   ಎನ್ನುವ ಅಚಲ  ನಂಬಿಕೆ ಭಕ್ತರಲ್ಲಿದೆ.
ವಿಜಯನಗರ ಸಾಮ್ರಾಜ್ಯವನ್ನೂ ಆಳಿದ ಯತಿ ಶ್ರೀ ವ್ಯಾಸರಾಜರು ಲೋಕ ಕಲ್ಯಾಣಾರ್ಥ ಭಾರತದಾದ್ಯಂತ 734 ಸ್ಥಳಗಳಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪಿಸಿದ್ದರು.  ಶ್ರೀ ವ್ಯಾಸರಾಜರು ಪ್ರತಿಷ್ಠಾಪಿಸಿದ್ದ  ಶ್ರೀ ಆಂಜನೇಯಸ್ವಾಮಿ ದೇವಸ್ಥಾನ. ಮಲೆನಾಡಿನ  ಶಿವಮೊಗ್ಗದಿ೦ದ ( ಸಿಹಿಮೊಗ್ಗೆ) 19 ಕಿ.ಮಿ. ಪರಿಕ್ರಮಿಸಿದರೆ ತು೦ಗ –  ಭದ್ರ  ನದಿಯ  ಸ೦ಗಮ  ಕ್ಷೇತ್ರ  ಕೂಡಲಿ .ಅಲ್ಲಿ೦ದ  ಕೇವಲ ಕಿ.ಮಿ. ಸಾಗಿದರೆ ಶ್ರೀ  ಕ್ಷೇತ್ರ  ಶ್ರೀ  ವ್ಯಾಸರಾಜ  ಪ್ರತಿಷ್ಠಿತ  ಹೊಳೆಹೊನ್ನೂರು  ಶ್ರೀ  ಮುಖ್ಯ  ಪ್ರಾಣ  ದೇವರ ಸನ್ನಿಧಾನವಿದೆ.

   ಮೇ  18 ಮತ್ತು  19 ರಂದು  ಪುನರ್  ಪ್ರತಿಷ್ಠಾಪನಾ  ಮಹೋತ್ಸವ ವಿಜೃಂಭಣೆಯಿಂದ ಈ ದೇಗುಲದಲ್ಲಿ    ನೆರವೇರಿತು.

ಈ ಪುರಾತನ ದೇವಾಲಯವು ಕೆಲವೊಂದು ಭಾಗವು ಶಿಥಿಲವಾದ ಕಾರಣ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಹಾಗೂ ದಾನಿಗಳ ಸಹಕಾರದಿಂದ ೨೦೨೦ ನೇ ಇಸವಿಯಲ್ಲಿ ಜೀರ್ಣೋದ್ಧಾರ ಕಾರ್ಯ ಆರಂಭ ಮಾಡಿ ಎಲ್ಲರ ಸಹಕಾರದಿಂದ ರಾಜ ಗೋಪುರವು ನಿರ್ಮಾಣ  ಮಾಡಿ  ಉತಾರಾಧಿ ಮಠಾಧೀಶ್ವರರಾದ  ಶ್ರೀ ಶ್ರೀ 1008 ಸತ್ಯಾತ್ಮ ತೀರ್ಥ   ಶ್ರೀ  ಪಾದಂ ಗಳವರವರು  ರಾಜಗೋಪುರದ ಲೋಕಾರ್ಪಣೆಗೊಳಿಸಿದರು.

ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ

Related Articles

ಪ್ರತಿಕ್ರಿಯೆ ನೀಡಿ

Latest Articles