ಕೈವಾರದಲ್ಲಿ ತಾತಯ್ಯನವರ 187 ನೇ ಆರಾಧನಾ ಮಹೋತ್ಸವ

ಕೈವಾರ: ಮಾನವರಾಗಿ ಹುಟ್ಟಿದ ಮೇಲೆ ತನ್ನ ಆತ್ಮಶೋಧನೆಯನ್ನು ಮಾಡಿಕೊಳ್ಳಬೇಕು. ಇದಕ್ಕೆ ಒಬ್ಬ ಯೋಗೀಂದ್ರನಾದ ಗುರುವನ್ನು ಆಶ್ರಯಿಸಬೇಕು. ಸದ್ಗುರುವನ್ನು ಆಶ್ರಯಿಸದಿರುವುದೇ ಮಾನವನ ಕಷ್ಟಗಳಿಗೆ ಕಾರಣವಾಗಿದೆ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ರವರು ಅಭಿಪ್ರಾಯಪಟ್ಟರು.

ಕೈವಾರದ ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಕಾಲಜ್ಞಾನಿ ಶ್ರೀ ಯೋಗಿ ನಾರೇಯಣ ತಾತಯ್ಯನವರ ೧೮೭ ನೇ ಜೀವ ಸಮಾಧಿ ಪ್ರವೇಶದ ಆರಾಧನಾ ಮಹೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಗುರುಸಂದೇಶ ನೀಡಿದರು.

‘ಗುರು ಸ್ಮರಣೆಯನ್ನು ನಿರಂತರವಾಗಿ ಮಾಡುತ್ತಿದ್ದರೆ ನಮ್ಮೊಳಗೆ ಚಿಂತನೆ ಆರಂಭವಾಗುತ್ತದೆ. ಈ ಚಿಂತನೆಯಿ0ದ ಎಲ್ಲಾ ರೀತಿಯ ಕರ್ಮಗಳು ನಾಶವಾಗುತ್ತದೆ. ಮಾನವನಿಗೆ ಅಹಂಕಾರ ದೊಡ್ಡ ಶತ್ರು. ಈ ಅಹಂಕಾರವನ್ನು ಕಳೆದುಕೊಳ್ಳಬೇಕಾದರೆ ಮೊದಲು ಗುರುವಿಗೆ ದಾಸನಾಗಬೇಕು. ಗುರುವಿನ ಉಪದೇಶದ ಬೆಳಕಿನಲ್ಲಿ ಸಾಧನೆ ಮಾಡಬೇಕು. ದಾಸನಾಗಿ ಊರೂರು ಸುತ್ತಿ ಗುರುವಿನ ಉಪದೇಶವನ್ನು ಪಸರಿಸಬೇಕು. ಗ್ರಾಮಸ್ಥರಿಗೆ ನಾಮ ಸ್ಮರಣೆಯನ್ನು ತಲುಪಿಸಬೇಕು. ಆಗ ನಮ್ಮೊಳಗಿರುವ ಅಹಂಕಾರ ಕಡಿಮೆಯಾಗುತ್ತದೆ. ಈ ವಿಚಾರವನ್ನು ಆಗಾಗ ಸ್ವತ: ವಿಮರ್ಶೆ ಮಾಡಿಕೊಂಡು ಮನಸ್ಸು ಸ್ಥಿರವಾಗಿ ನಿಂತಿದೆಯೇ ಪರೀಕ್ಷಿಸಿಕೊಳ್ಳಬೇಕು ಎಂದರು.

ಕೈವಾರ ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಮಾನವ ಜನ್ಮದ ಶ್ರೇಷ್ಠತೆಯನ್ನು ಸಾರಿದ್ದಾರೆ. ಸಾಧಕನು ತನ್ನ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಅವಿದ್ಯೆಗಳನ್ನು ನಾಶಪಡಿಸಿಕೊಳ್ಳಬೇಕು. ಏಕಾಗ್ರತೆಯಿಂದ ತಾತಯ್ಯನವರು ಬೋಧಿಸಿರುವ ತಾರಕಮಂತ್ರವನ್ನು ಜಪಿಸಬೇಕು. ಆಗ ತನ್ನ ಪೂರ್ವಕರ್ಮಗಳನ್ನು ನಾಶವಾಗುತ್ತದೆ. ನಂತರ ಮನಸ್ಸು ಸ್ಥಿರವಾಗಿ, ಗುರುವಿನ ಅನುಗ್ರಹ ಸಿಗುತ್ತದೆ ಎಂದರು.

ಆರಾಧನಾ ಮಹೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಸದ್ಗುರು ಯೋಗಿ ನಾರೇಯಣ ತಾತಯ್ಯನವರಿಗೆ ಅಭಿಷೇಕ , ಅಷ್ಟಾವಧಾನ ಸೇವೆ, ಮಹಾಮಂಗಳಾರತಿಯನ್ನು ನೆರವೇರಿಸಲಾಯಿತು. ಅಭಿಷೇಕದ ನಂತರ ದೇವಾಲಯದಿಂದ ಅಲಂಕೃತ ಪಲ್ಲಕ್ಕಿಯಲ್ಲಿ ತಾತಯ್ಯನವರನ್ನು ಸಭಾಂಗಣಕ್ಕೆ ಭಜನೆಯ ಮೂಲಕ ಕರೆತರಲಾಯಿತು. ಸದ್ಗುರುಗಳಿಗೆ ಶೋಡಶೋಪಚಾರ ಪೂಜಾ ಕೈಂಕರ್ಯವನ್ನು ನೆರವೇರಿಸಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಧರ್ಮಾಧಿಕಾರಿಗಳು ಸದ್ಗುರು ತಾತಯ್ಯನವರ ೧೮೭ ನೇ ಜೀವ ಸಮಾಧಿ ಮಹೋತ್ಸವದ ಅಂಗವಾಗಿ 2020-2022 ನೇ ಸಾಲಿನ ಮಠದ ಅಭಿವೃದ್ದಿ ಮತ್ತು ವಾರ್ಷಿಕ ಕಾರ್ಯಕ್ರಮಗಳ ವರದಿಯನ್ನು ತಾತಯ್ಯನವರಿಗೆ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಸಾವಿರಾರು ಸಾಧು ಸತ್ಪುರುಷರಿಗೆ ಕಾಷಯ ವಸ್ತçವನ್ನು ವಿತರಿಸಲಾಯಿತು. ಇಡೀ ರಾತ್ರಿ ಆಖಂಡ ಸಂಕೀರ್ತನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಆರಾಧನಾ ಮಹೋತ್ಸವಕ್ಕೆ ಆಂಧ್ರ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಭಕ್ತರು ತಂಡೋಪತAಡವಾಗಿ ಭಾಗವಹಿಸಿದ್ದರು. ನಾದಸುಧಾರಸ ವೇದಿಕೆಯಲ್ಲಿ ಹಲವಾರು ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಯೋಗಿನಾರೇಯಣ ಮಠದ ಟ್ರಸ್ಟ್ ನ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ ಸತ್ಯನಾರಾಯಣ್, ಸದಸ್ಯರುಗಳಾದ ಬಾಲಕೃಷ್ಣ ಭಾಗವತರ್, ಡಾ||ಎಂ.ವಿ.ಶ್ರೀನಿವಾಸ್, ಕೆ.ನರಸಿಂಹಪ್ಪ, ಗಣೇಶ್ ಚಂದ್ರಪ್ಪ, ಕೆ.ಎಂ. ತ್ಯಾಗರಾಜ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ ಮುಂತಾದವರು ಭಾಗವಹಿಸಿದ್ದರು. ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಾರ್ಥಿಸಿ ಪ್ರಸ್ತಾವಿಕ ನುಡಿಗಳನ್ನು ನುಡಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles