ಮೈಸೂರು: ನಗರದ ಅಗ್ರಹಾರದಲ್ಲಿರುವ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಶ್ರೀ ಉತ್ತರಾದಿ ಮಠದಲ್ಲಿರುವ ( ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯಸಂಧ ತೀರ್ಥರ ಬೃಂದಾವನ ಸನ್ನಿಧಾನ ದಲ್ಲಿರುವ ) ಶ್ರೀ ರೋಗಮೋಚನ ಧನ್ವಂತ್ರಿ ಪ್ರತಿಷ್ಠಾಪನಾ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಜೂ. 3 ರಿಂದ 9ರವರೆಗೆ ಸಪ್ತ ರಾತ್ರೋತ್ಸವ ಹಮ್ಮಿಕೊಳ್ಳಲಾಗಿದೆ.
ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಜೂ. 3ರ ಬೆಳಗ್ಗೆ 9ಕ್ಕೆ ಶ್ರೀ ಧನ್ವಂತ್ರಿ ದೇವರಿಗೆ ಸಮಗ್ರ ಚತುರ್ವೇದ ಅಭಿಮಂತ್ರಿತ 108 ಕೆಜಿ ತುಪ್ಪದ ಅಭಿಷೇಕ ಮಾಡುವ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ 10. 30 ಕ್ಕೆ ಶ್ರೀಗಳಿಂದ ಸಂಸ್ಥಾನ ಪೂಜೆ, 12. 30 ಕ್ಕೆ ತೀರ್ಥ ಪ್ರಸಾದ ವಿನಿಯೋಗವಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಅಂಗವಾಗಿ ಪ್ರತಿನಿತ್ಯ ಸಂಜೆ 6. 30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ ಹಮ್ಮಿಕೊಳ್ಳಲಾಗಿದೆ. ಜೂ.5 ರ ಸಂಜೆ ಧಾರ್ಮಿಕ ಹರಟೆ ( ಪಂಡಿತರಾದ ಪವಮಾನಾಚಾರ್ಯ ಕಲ್ಲಾಪುರ – ಭೀಮಸೇನಾಚಾರ್ಯ ಕುಲಕರ್ಣಿ ಅವರಿಂದ ಈ ಕಾರ್ಯಕ್ರಮ ನಡೆಯಲಿದೆ.
ಜೂನ್ 6ರ ಸಂಜೆ ಬೆಂಗಳೂರಿನ ವಿದ್ವಾಂಸರಾದ ಸಮೀರಾಚಾರ್ಯ ಅವರಿಂದ ದಾಸವಾಣಿ ನಡೆಯಲಿದೆ .
7 ರ ಸಂಜೆ ವಿದ್ವಾಂಸರ ಸುಜಯೀಂದ್ರ ಕುಲಕರ್ಣಿ ಅವರಿಂದ ದಾಸ ಝೇಂಕಾರವಿದೆ.
8 ರ ಸಂಜೆ ವಿದುಷಿ ಶುಭಾ ಸಂತೋಷ್ ಅವರಿಂದ ದಾಸ ಪುಷ್ಪಾಂಜಲಿ ಹಮ್ಮಿಕೊಳ್ಳಲಾಗಿದೆ.
ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ಜೂ. 9 ರಂದು ಬೆಳಗ್ಗೆ 7 ಕ್ಕೆ ಮಠದಲ್ಲಿ ಶ್ರೀ ವಿಷ್ಣು ಸಹಸ್ರನಾಮ ಮಹಾಯಾಗ, 8 ಕ್ಕೆ ಶ್ರೀ ಧನ್ವಂತರಿ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ 10. 30 ಕ್ಕೆ ವಿವಿಧ ವಿದ್ವಾಂಸರಿಂದ ಪ್ರವಚನ, 12 ಕ್ಕೆ ದೇವರಿಗೆ ಪಲ್ಲಕ್ಕಿ ಉತ್ಸವ, 12. 30 ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿದೆ ಎಂದು ಶ್ರೀಮಠದ ವ್ಯವಸ್ಥಾಪಕರಾದ ವಿದ್ವಾನ್ ಅನಿರುದ್ಧಾಚಾರ್ಯ ಪಾಂಡುರಂಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.