ಬೆಂಗಳೂರು: ಪ್ರಕಾಶನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ನೂತನ ಕಟ್ಟಡ ಈಗ ಸೇವಾ ಕಾರ್ಯಕ್ರಮಗಳಿಗೆ ಸಿದ್ಧವಾಗಿದ್ದು, ಇದರ ಅಂಗವಾಗಿ ಜೂನ್ 22 ಮತ್ತು 23 ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಜೂನ್ 22ರಂದು ಬೆಳಗ್ಗೆ 6-30ಕ್ಕೆ ಪುನಃ ಪೂಜಾದಿಗಳು, ಪೂರ್ಣಾಹುತಿ, ಪ್ರತಿಷ್ಠಾಪನಾ ವಿಧಾನಗಳು ನಂತರ ಫಲ-ಪಂಚಾಮೃತ ಅಭಿಷೇಕ, ಅರ್ಚನೆ, ಸರ್ವಮೂಲ ಪಾರಾಯಣ, ಶ್ರೀಗಳವರಿಂದ ಸಂಸ್ಥಾನ ಪೂಜೆ.
ಸಂಜೆ 6.30 ರಿಂದ ಸಭಾ ಕಾರ್ಯಕ್ರಮಗಳು
ಮುಖ್ಯ ಅತಿಥಿಗಳು : ಡಾ|| ಅಶ್ವತ್ಥನಾರಾಯಣ (ಉನ್ನತ ಶಿಕ್ಷಣ ಸಚಿವರು), ಶ್ರೀಶಾನಂದ (ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ). ಪಂಡಿತರಿಂದ ಉಪನ್ಯಾಸ, ಶ್ರೀಗಳವರಿಂದ ಆಶೀರ್ವಚನ, ದಾನಿಗಳಿಗೆ ಸೇವಾಕರ್ತರುಗಳಿಗೆ ಮತ್ತು ಭಕ್ತ ವೃಂದದವರಿಗೆ ಫಲ ಮಂತ್ರಾಕ್ಷತೆ. ಸಂಜೆ 6-30ಕ್ಕೆ ಸಭಾ ಕಾರ್ಯಕ್ರಮಗಳು: ಪಂಡಿತರಿಂದ ಉಪನ್ಯಾಸ, ಮುಖ್ಯ ಅತಿಥಿಗಳಿಂದ ಭಾಷಣ, ವಿದ್ಯಾರ್ಥಿ ನಿಧಿ ಹಾಗೂ ಆರೋಗ್ಯ ನಿಧಿ ವಿತರಣೆ, ದಾನಿಗಳಿಗೆ ನೆನಪಿನ ಕಾಣಿಕೆ, ಶ್ರೀಗಳವರಿಂದ ಅನುಗ್ರಹ ಸಂದೇಶ ಮಂತ್ರ ಫಲಮಂತ್ರಾಕ್ಷತೆ.
*ಜೂನ್23 : ಬೆಳಗಿನ ಕಾರ್ಯಕ್ರಮಗಳು : ಶ್ರೀ ವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರಿಂದ ಸಂಸ್ಥಾನ ಪೂಜೆ ನಂತರ ಶ್ರೀಗುರುರಾಜರಿಗೆ ಕನಕಾಭಿಷೇಕ.
ಸಂಜೆ 6:30 ರಿಂದ ದರ್ಬಾರ್ ನಂತರ ಪರಮಪೂಜ್ಯ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮಗಳು : ರಾಜಾಶೀರ್ವಾದ ಫಲ ಮಂತ್ರಾಕ್ಷತೆ ನಂತರ ತೊಟ್ಟಿಲು ಪೂಜೆ.
ಮುಖ್ಯ ಅತಿಥಿಗಳು : ಸುರೇಶ್ ಕುಮಾರ್ (ಶಾಸಕರು ರಾಜಾಜಿನಗರ ವಿಧಾನಸಭಾ ಕ್ಷೇತ್ರ), ಪದ್ಮಾವತಿ (ಮಾಜಿ ಮಹಾಪೌರರು, ಬೆಂಗಳೂರು ನಗರ).
ಧಾರ್ಮಿಕ ಕಾರ್ಯಕ್ರಮಗಳು : ಪಂಡಿತರಿಂದ ಉಪನ್ಯಾಸ, ಶ್ರೀಗಳವರಿಂದ ಆಶೀರ್ವಚನ, ದಾನಿಗಳಿಗೆ ಸೇವಾಕರ್ತರಿಗೆ ಮತ್ತು ಭಕ್ತ ವೃಂದದವರಿಗೆ ಮಂತ್ರಾಕ್ಷತೆ.
ಸಂಜೆಯ ಸಭಾ ಕಾರ್ಯಕ್ರಮಗಳು : ಪಂಡಿತರಿಂದ ಉಪನ್ಯಾಸ ಮುಖ್ಯ ಅತಿಥಿಗಳ ಭಾಷಣ ವಿದ್ಯಾರ್ಥಿನಿಧಿ ಹಾಗೂ ಆರೋಗ್ಯನಿಧಿ ವಿತರಣೆ, ದಾನಿಗಳಿಗೆ ನೆನಪಿನ ಕಾಣಿಕೆ, ಶ್ರೀಗಳವರಿಂದ ಅನುಗ್ರಹ ಸಂದೇಶ ಫಲಮಂತ್ರಾಕ್ಷತೆ ವಿತರಣೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠದ ಪದಾಧಿಕಾರಿಗಳು ವಿನಂತಿಸಿದ್ದಾರೆ.