ಶಿವಮೊಗ್ಗದಲ್ಲಿ ಶ್ರೀಯುತ ನಾಗರಾಜ್ ಅವರ ಸಾರಥ್ಯದಲ್ಲಿ 1985 ರಿಂದಲೂ ಚಾಲ್ತಿಯಲ್ಲಿರುವ ಪುರಂದರ ದಾಸರ ಆರಾಧನಾ ಮಹೋತ್ಸವದ ಪ್ರಯುಕ್ತ ನಡೆಸುವ ಪುರಂದರ ದಾಸರ ಪದಗಳ ಉಚಿತ ಗಾಯನ ಅಭಿಯಾನವು ಇದೀಗ ಆನ್ಲೈನ್ ರೂಪಕ್ಕೆ ಬಂದಿದೆ. ಈ ಅಭಿಯಾನವು ವಿಶೇಷವಾಗಿ ಮಹಿಳೆಯರಿಗೆಂದೇ ಮೀಸಲಾಗಿದ್ದು, 15 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರೂ ಈ ಅಭಿಯಾನದಲ್ಲಿ ಭಾಗವಹಿಸಬಹುದು. ತರಗತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಶಾಸ್ತ್ರೀಯ ಸಂಗೀತದ ಹಿನ್ನೆಲೆಯ ಅವಶ್ಯಕತೆ ಇಲ್ಲ ಎಂಬುದು ಈ ಅಭಿಯಾನದ ವಿಶೇಷ. ವೃತ್ತಿನಿರತ ಮತ್ತು ಗೃಹಿಣಿಯರೂ ಸಹ ಈ ಅಭಿಯಾನದಲ್ಲಿ ಭಾಗವಹಿಸಬಹುದಾಗಿದೆ. ಆಗಸ್ಟ್ ತಿಂಗಳ 7 ನೇ ತಾರೀಖಿನಿಂದ ಈ ಅಭಿಯಾನ ಪ್ರಾರಂಭವಾಗಲಿದ್ದು, ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳು ಇರಲಿವೆ. ಪ್ರತಿ ಭಾನುವಾರವೂ ಸಮಯಾನುಸಾರವಾಗಿ ಐದು ಪ್ರತ್ಯೇಕ ಆನ್ಲೈನ್ ತರಗತಿಗಳು ಇರಲಿವೆ. ಅಂತೆಯೇ ಅನುಕೂಲ ಇದ್ದವರು ಆಫ್ಲೈನ್ ತರಗತಿಗಳಲ್ಲೂ ಪಾಲ್ಗೊಳ್ಳಬಹುದು.
ವಿಶೇಷವಾಗಿ ಆಫ್ಲೈನ್ ತರಗತಿಗಳನ್ನು “ಧಾರ್ಮಿಕ ಪ್ರವಾಸ” ದ ರೀತಿಯಲ್ಲಿ ಇರಲಿದ್ದು, ಧಾರ್ಮಿಕ ಕ್ಷೇತ್ರಗಳು ಹಾಗೂ ಐತಿಹಾಸಿಕ ದೇಗುಲಗಳಲ್ಲಿ ನಡೆಸಲಾಗುವುದು. ಈ ಅಭಿಯಾನ ಉಚಿತವಾಗಿರಲಿದ್ದು ಆಫ್ಲೈನ್ ತರಗತಿಗಳಲ್ಲಿ ಭಾಗವಹಿಸುವವರು ಪ್ರಯಾಣದ ಭತ್ಯೆಯನ್ನು ತಾವೇ ಭರಿಸಬೇಕಾಗುತ್ತದೆ.
ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಗಾಯಕಿಯರಿಗೆ ಆನ್ಲೈನ್ ಅರ್ಜಿಯನ್ನು ಭರಿಸುವುದು ಕಡ್ಡಾಯ. ಆಗಸ್ಟ್ 1 ನೇ ತಾರೀಖಿನೊಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ಗಾಯಕಿಯರು ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿಯೇ ಅರ್ಜಿ ತುಂಬಿ ಸಲ್ಲಿಸಬಹುದು.