ಬೆಂಗಳೂರು: ಮಲ್ಲೇಶ್ವರಂ ಸಂಪಿಗೆ ರಸ್ತೆಯ ಎಂಟನೇ ಅಡ್ಡರಸ್ತೆಯಲ್ಲಿರುವ ಶ್ರೀ ಮಹೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ 111ನೇ ನವರಾತ್ರಿ ಉತ್ಸವವನ್ನು ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ನಡೆಯಲಿದೆ.
ಪ್ರತಿದಿನ ಅಮ್ಮನವರಿಗೆ ವಿವಿಧ ಅಲಂಕಾರಗಳು ಹಾಗೂ ಸಂಜೆ 6-00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿವರಗಳು ಈ ರೀತಿ ಇವೆ:
ಸೆಪ್ಟೆಂಬರ್ 26 : ಅರಿಶಿಣ ಕುಂಕುಮ ಅಲಂಕಾರ, ಸಂಜೆ–ಶ್ರೀ ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ “ದಾಸವಾಣಿ”.
ಸೆ. 27 : ಡ್ರೈ ಫ್ರೂಟ್ಸ್ ಅಲಂಕಾರ, ಸಂಜೆ–ಲಲಿತ ಕಲಾಸಂಘ ಇವರಿಂದ “ಸಂಗೀತ ಮತ್ತು ನೃತ್ಯ” ಹಾಗೂ ಶ್ರೀ ಗಜಾನನ ಮಿತ್ರ ಮಂಡಳಿ ಇವರಿಂದ “ಭಜನೆ”.
ಸೆ. 28 : ಕಾಬುಲ್ ಕಡ್ಲೆ ಅಲಂಕಾರ, ಸಂಜೆ-ಕು|| ಭೂಮಿಕಾ ಎಸ್. ಕುಂದಗೋಡು, ಕು|| ಎಸ್. ದೀಪಿಕಾ ಕುಂದಗೋಡು, ಕು|| ಅನ್ವಿತಾ ಸಾವಿತ್ರಿ, ಕು|| ಅನುಷಾ ಸಾವಿತ್ರಿ ಇವರಿಂದ “ದಾಸವಾಣಿ- ಭಕ್ತಿ ಗೀತೆಗಳ ಗಾಯನ” ಶ್ರೀ ರಾಜೇಂದ್ರ ಬೆಂಡೆ (ಕೀ-ಬೋರ್ಡ್), ಶ್ರೀ ಸುದರ್ಶನ್ (ತಬಲಾ).
ಸೆ. 29 : ಮುತ್ತಿನ ಅಲಂಕಾರ, ಸಂಜೆ–ಶ್ರೀಮತಿ ಸಂಗೀತ ಕಟ್ಟಿ ಮತ್ತು ಸಂಗಡಿಗರಿಂದ “ಭಕ್ತಿ ಗೀತೆ ಸೌರಭ”.
ಸೆ.30: ಮಹಾಲಕ್ಷ್ಮಿ ಅಲಂಕಾರ ಸಂಜೆ–ಶ್ರೀಮತಿ ಸುಧಾ ಹರಿಪ್ರಕಾಶ್ ಮತ್ತು ತಂಡದವರಿಂದ “ಭಜನೆ” ನಂತರ ವಿದ್ವಾನ್ ಶ್ರೀ ಶ್ರೀಧರ್ ಸಾಗರ್ ಮತ್ತು ತಂಡದಿಂದ “ಸಾಕ್ಸೋಫೋನ್ ವಾದನ”.
ಅಕ್ಟೋಬರ್ 1: ದಾಳಿಂಬೆ ಅಲಂಕಾರ, ಸಂಜೆ– ನಾಟ್ಯ ಭಾರತಿ ಟ್ರಸ್ಟ್ ನ ಶ್ರೀಮತಿ ಶ್ರೀ ರಂಜಿತಾ ನಾಗೇಶ್ ಶಿಷ್ಯ ವೃಂದದವರಿಂದ “ಭರತನಾಟ್ಯ”.
ಅ.2 : ಸರಸ್ವತಿ ಅಲಂಕಾರ, ಸಂಜೆ–ಕು|| ಸ್ಪಂದನ ಮತ್ತು ತಂಡದವರಿಂದ “ದೇವರನಾಮ”.
ಅ. 3 : ದುರ್ಗಾದೇವಿ ಅಲಂಕಾರ, ಸಂಜೆ– ಶೃಂಗಾರ ಲಹರಿ ತಂಡದವರಿಂದ “ದೇವರನಾಮ” ನಂತರ ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ವಿಜೇತೆ ಕು|| ದಿಯಾ ಉದಯ್ ಇವರಿಂದ “ಭರತನಾಟ್ಯ”.
ಅ. 4 : ಮಲ್ಲಿಗೆ ಮೊಗ್ಗು ಅಲಂಕಾರ, ಸಂಜೆ– ವಿದುಷಿ ಶ್ರೀಮತಿ ರಾಧಿಕಾ ವೆಂಕಟರಮಣ ಇವರಿಂದ “ಶಾಸ್ತ್ರೀಯ ಸಂಗೀತ”.
ಅ. 5 : ಬೆಳಗ್ಗೆ 9:00 ಗಂಟೆಗೆ ಶ್ರೀ ಮಹೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವವು ಮಲ್ಲೇಶ್ವರದ ಮುಖ್ಯಬೀದಿಗಳಲ್ಲಿ ಮೆರವಣಿಗೆ, ನಂತರ ದೇವಾಲಯದ ಧರ್ಮಾಧಿಕಾರಿಗಳಿಂದ ಸಾಂಕೇತಿಕವಾಗಿ ಬನ್ನಿಮಂಟಪ ಪೂಜೆ ಜರುಗಲಿದೆ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ.
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ, ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.