ಬೆಂಗಳೂರು: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್. (ರಿ.) ವತಿಯಿಂದ ಅಕ್ಟೋಬರ್ 29 ಮತ್ತು 30 ಎರಡು ದಿನಗಳ ಕಾಲ ನಾಲ್ಕನೇ ಸಂಗೀತ ಸಮ್ಮೇಳನವನ್ನು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದು, ಅದರ ವಿವರಗಳು ಈ ರೀತಿ ಇವೆ :
ಅಕ್ಟೋಬರ್ 29, ಶನಿವಾರ ಸಂಜೆ 5 ಗಂಟೆಗೆ.
ಉದ್ಘಾಟನೆ: ಶ್ರೀ ಎಂ. ಅನಂತ್ (ಅಧ್ಯಕ್ಷರು, ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್) ಹಾಗೂ ಶ್ರೀ ಎಂ.ವಿ. ಸತ್ಯನಾರಾಯಣ (ಉಪಾಧ್ಯಕ್ಷರು, ಶ್ರೀ ತ್ಯಾಗರಾಜ ಗಾನ ಸಭಾ).
ಸಮ್ಮೇಳನದ ಅಧ್ಯಕ್ಷತೆ : ಡಾ|| ಹೆಚ್.ಎಸ್. ಅನುಸೂಯ ಕುಲಕರ್ಣಿ
ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆ : ಶ್ರೀ ಬಿ.ಕೆ. ರಘು.
ಜುಗಲ್ ಬಂಧಿ: ಸುಮಾ ಹೆಗ್ಡೆ (ಸಂತೂರ್), ವಿ|| ಜಾನ್ಹವಿ ಬಿ. ಸಿಂಗ್ (ಅಂಕ್ಲುಂಗ್) ಮತ್ತು ಸಂಗಡಿಗರು. 6-45ಕ್ಕೆ ಡಾ|| ಹೆಚ್. ಎಸ್. ಅನುಸೂಯ ಕುಲಕರ್ಣಿ ಮತ್ತು ಸಂಗಡಿಗರಿಂದ ಅಂಕ್ಲುಂಗ್).
ಅಕ್ಟೋಬರ್ 30, ಭಾನುವಾರ : ಬೆಳಗ್ಗೆ 10 ಗಂಟೆಗೆ
ಅಧ್ಯಯನ ಮತ್ತು ವಿಚಾರ ಗೋಷ್ಠಿ : ಡಾ|| ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ. ವಿಷಯ-‘ಪಲ್ಲವಿ’ : ಕಲಿಕೆಯ ಉಪಾಯಗಳು ಮತ್ತು ಪಲ್ಲವಿಯ ವೈವಿಧ್ಯಗಳು.
11-30 ಕ್ಕೆ ಸಂಗೀತ ಸಂಯೋಜನೆಯ ವಿಧಾನ ಹಾಗೂ ಅನುಭವಗಳು ಶಾಸ್ತ್ರೀಯ ಮತ್ತು ಸಮಕಾಲಿನ ಹಿನ್ನೆಲೆ ವಿಷಯವಾಗಿ ಕರ್ನಾಟಕ ಕಲಾಶ್ರೀ ವಿ|| ತಿರುಮಲೆ ಶ್ರೀನಿವಾಸ್.
ಸಂಜೆ 5:00 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಶ್ರೀ ಪಟ್ಟಾಭಿರಾಂ ಪಂಡಿತ್ (ಗಾಯನ), ವಿ|| ಬಿ ಕೆ ರಘು (ಪಿಟೀಲು), ವಿ|| ಕೆ ಯು ಜಯಚಂದ್ರ ರಾವ್ (ಮೃದಂಗ), ವಿ|| ಗಿರಿಧರ್ ಉಡುಪ ಯು ಎನ್ (ಘಟ).
ಪ್ರಶಸ್ತಿ ಪ್ರದಾನ: ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಂ ಅನಂತ್ ಅವರ ಅಧ್ಯಕ್ಷತೆಯಲ್ಲಿ, ಸಂಗೀತ ಸಮ್ಮೇಳನದ ಅಧ್ಯಕ್ಷರಾದ ಡಾ|| ಹೆಚ್. ಎಸ್. ಅನುಸೂಯ ಕುಲಕರ್ಣಿ ಅವರಿಗೆ “ಶೃತಿಲಯ ಭಾರತಿ” ಪ್ರಶಸ್ತಿ ಪ್ರದಾನ ಹಾಗೂ ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷರಾದ ವಿ|| ಬಿ. ಕೆ. ರಘು ಅವರಿಗೆ “ಸ್ವರಲಯ ಭಾರತಿ” ಪ್ರಶಸ್ತಿ ಪ್ರದಾನ. ಈ ಸಮಾರಂಭದಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು : ಡಾ|| ಟಿ. ಎಸ್. ಸತ್ಯವತಿ (ಸಂಗೀತ ಮತ್ತು ಸಂಸ್ಕೃತ ವಿದುಷಿ), ಎಲ್. ಎಸ್. ಶ್ಯಾಮಸುಂದರ ಶರ್ಮ. (ರಾಷ್ಟ್ರ ಪ್ರಶಸ್ತಿ ವಿಜೇತರು, ಅಧ್ಯಕ್ಷರು : ಸ್ಮಾರ್ಟ್ ಸ್ಕೂಲ್, ಮಾಚೋಹಳ್ಳಿ. ನಂತರ ಸಮಾರೋಪ ಸಮಾರಂಭ.