ಕಾರ್ತಿಕ ಮಾಸದಲ್ಲಿ ಶಿವನನ್ನೇಕೇ ಪೂಜಿಸಬೇಕು..? ಕಾರ್ತಿಕ ಮಾಸದಲ್ಲಿ ಶಿವ ಪೂಜೆ ಮಾಡುವುದು ಹೇಗೆ..? ಕಾರ್ತಿಕ ಮಾಸದ ಶಿವ ಪೂಜೆ ಪ್ರಯೋಜನ ಹೀಗಿದೆ..! ಪೌರಾಣಿಕ ನಂಬಿಕೆಗಳ ಪ್ರಕಾರ, ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸುವುದರಿಂದ ಆತನು ನಮಗೆ ಅಪಾರ ಶಕ್ತಿಯನ್ನು ನೀಡುವುದಲ್ಲದೆ, ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂದು ಹೇಳಲಾಗಿದೆ. ಅದರಲ್ಲೂ ಕಾರ್ತಿಕ ಮಾಸದಲ್ಲಿ ಸೋಮವಾರದ ಉಪವಾಸಕ್ಕೆ ವಿಶೇಷ ಮಹತ್ವವಿದೆ. ಇದು ಶಿವನನ್ನು ಆಚರಿಸಲು ಒಂದು ಮಂಗಳಕರ ಸಂದರ್ಭ ಎಂದು ನಂಬಲಾಗಿದೆ.
ಕಾರ್ತಿಕ ಮಾಸದ ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸುವುದರಿಂದ ದೈಹಿಕ ಕಾಯಿಲೆಗಳು, ಕೌಟುಂಬಿಕ ಕಲಹಗಳು, ಹಣದ ಒತ್ತಡಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಇದಲ್ಲದೇ ಅವಿವಾಹಿತ ಕನ್ಯೆಯರು ಶಿವನನ್ನು ಕಾರ್ತಿಕ ಮಾಸದಲ್ಲಿ ಪೂಜಿಸುವುದರಿಂದ ಶಿವನಂತಹ ವರ ಸಿಗುತ್ತಾನೆ ಮತ್ತು ವಿವಾಹದಲ್ಲಿ ಎದುರಾಗಬಹುದಾದ ಅಡ್ಡಿ – ಆತಂಕಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ.
ಕಾರ್ತಿಕ ಸೋಮವಾರದಂದು ಮುಂಜಾನೆ ಸ್ನಾನ ಮಾಡಿದ ನಂತರ, ಯಾವುದೇ ಶಿವ ದೇವಾಲಯಕ್ಕೆ ಹೋಗಿ ಮತ್ತು ಅಲ್ಲಿ ಶಿವಲಿಂಗವನ್ನು ಹಾಲಿನಿಂದ ಅಭಿಷೇಕ ಮಾಡಿ. ಇದರ ನಂತರ ಶ್ರೀಗಂಧ, ಅಕ್ಕಿ, ಹಲಸು, ವೀಳ್ಯದೆಲೆ, ಬಿಲ್ವಪತ್ರೆ ಮತ್ತು ಧಾತುರವನ್ನು ಅರ್ಪಿಸಿ. ನಂತರ ಭಗವಾನ್ ಶಿವನಿಗೆ ಆರತಿಯನ್ನು ಮಾಡಿ ಮತ್ತು ”ಓಂ ನಮಃ ಶಿವಾಯ” ಎನ್ನುವ ಶಿವ ಮಂತ್ರವನ್ನು ಪಠಿಸಿ.
ಶಿವ ಪೂಜೆಯಲ್ಲಿ ಈ ತಪ್ಪನ್ನು ಮಾಡದಿರಿ
ಶಿವನನ್ನು ಪೂಜಿಸುವಾಗ ತಾಜಾ ಹಾಲನ್ನು ಮಾತ್ರ ಬಳಸಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರ ಹೊರತಾಗಿ, ಶಿವನಿಗೆ ಕುಂಕುಮವನ್ನು ಅರ್ಪಿಸಬೇಡಿ. ಅಲ್ಲದೇ, ಸುಳ್ಳು ಹೇಳುವುದನ್ನು ತಪ್ಪಿಸಿ. ಇವುಗಳಲ್ಲಿ ಯಾವುದಾದರೂ ಒಂದು ತಪ್ಪನ್ನು ಮಾಡಿದರೂ ಆ ಪೂಜೆಯ ಫಲ ಸಿಗುವುದಿಲ್ಲ.
ಶಿವನಿಗೆ ಪ್ರಾರ್ಥನೆ ಸಲ್ಲಿಸಿ ಕಾರ್ತಿಕ ಸೋಮವಾರ ಮುಂಜಾನೆ ಸ್ನಾನದ ನಂತರ ಶಿವನಿಗೆ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ. ನೀವು ಶಿವ ದೇವಾಲಯಕ್ಕೆ ಭೇಟಿ ನೀಡಬಹುದು ಅಥವಾ ಮನೆಯಲ್ಲಿ ಶಿವನಿಗೆ ಪ್ರಾರ್ಥನೆಗಳನ್ನು ಮಾಡಬಹುದು. ಉಪವಾಸ ವ್ರತವನ್ನು ಸೋಮವಾರದ ಸೂರ್ಯೋದಯದಿಂದ ಮರುದಿನ ಬೆಳಿಗ್ಗೆ ಸೂರ್ಯೋದಯದವರೆಗೆ ಮಾಡಬೇಕಾಗುತ್ತದೆ.
ಇವುಗಳನ್ನು ವ್ರತದಲ್ಲಿ ಸೇವಿಸಬಹುದು ಕಾರ್ತಿಕ ಸೋಮವಾರದಂದು ವ್ರತವನ್ನು ಆಚರಿಸುವವರು ಸಾಬುದಾನವನ್ನು, ಹಣ್ಣುಗಳನ್ನು ಮತ್ತು ಹಣ್ಣಿನ ರಸವನ್ನು ಇತ್ಯಾದಿಗಳನ್ನು ಸೇವಿಸಬಹುದು. ಶಿವನಿಗೆ ಸಂಜೆ ಪೂಜೆಯನ್ನು ಸಲ್ಲಿಸಬೇಕು ಅಂದರೆ ಪ್ರದೋಷ ಕಾಲವಾದ ಸೂರ್ಯಾಸ್ತದ ಒಂದು ಗಂಟೆಯ ಮೊದಲು ಪೂಜೆಯನ್ನು ಮಾಡಬೇಕು. ಮರುದಿನ ಬೆಳಿಗ್ಗೆ ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಉಪವಾಸವನ್ನು ಮುಗಿಸಬೇಕು.
ಈ ಕಾರಣಗಳಿಗೇ ವರ್ಷದ ಎಲ್ಲಾ ತಿಂಗಳಿಗಿಂತ ಕಾರ್ತಿಕ ಮಾಸ ಅತ್ಯಂತ ಮಂಗಳಕರವೆನ್ನುವುದು* ಕಾರ್ತಿಕ ಮಾಸವು ಹಿಂದೂಗಳಲ್ಲಿ ಅತ್ಯಂತ ಮಂಗಳಕರವಾದ ತಿಂಗಳು. ಕಾರ್ತಿಕ ಮಾಸದಲ್ಲಿ ಹಲವಾರು ಪ್ರಮುಖ ಹಬ್ಬಗಳು ಬರಲಿವೆ. ಶಿವ ಹಾಗೂ ವಿಷ್ಣುವಿನ ಆರಾಧನೆಗಾಗಿ ಉತ್ತಮವಾದ ಈ ತಿಂಗಳನ್ನು ಪುರುಷೋತ್ತಮ ಮಾಸ ಎಂದೂ ಕರೆಯುತ್ತಾರೆ ಏಕೆಂದರೆ ಈ ಪವಿತ್ರ ಮಾಸದಲ್ಲಿ ಶಿವ ಮತ್ತುವಿಷ್ಣು ಜೊತೆಯಾಗಿ ಇರುತ್ತಾರೆ ಎಂದು ನಂಬಲಾಗಿದೆ. ಈ ಮಾಸದಲ್ಲಿ ದೀಪಾರಾಧನೆ, ಉಪವಾಸ, ರುದ್ರಾಭಿಷೇಕ, ಬಿಲ್ವಪೂಜೆ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಹೆಚ್ಚಿನ ಪ್ರಯೋಜನಗಳು ಪ್ರಾಪ್ತವಾಗುತ್ತದೆ, ನಮ್ಮನ್ನು ಎಲ್ಲಾ ಪಾಪಗಳಿಂದ ಮುಕ್ತಗೊಳಿಸುತ್ತದೆ ಎಂಬ ನಂಬಿಕೆಯಿದೆ. ಇಂತಹ ಪವಿತ್ರ ತಿಂಗಳಿನ ಕುರಿತ ಇನ್ನಷ್ಟು ಮಾಹಿತಿ ನಿಮಗಾಗಿ ಇಲ್ಲಿದೆ.
ದೀಪೋತ್ಸವ :
ಹೆಚ್ಚಿನ ದೇವಾಲಯಗಳ ದೀಪೋತ್ಸವವು ಈ ಸಮಯದಲ್ಲೇ ನಡೆಯುವುದು ಗಮನಿಸಿರಬಹುದು. ಜೊತೆಗೆ ದೀಪಾವಳಿಯೂ ಇದೇ ಸಮಯದಲ್ಲಿ ಬರುವುದು ಇದೇ ಕಾರಣಕ್ಕೆ. ಕಾರ್ತಿಕ ದೀಪೋತ್ಸವವು ದೀಪಗಳ ಬೆಳಕನ್ನು ಸೂಚಿಸುತ್ತದೆ. ದೀಪ ನಮ್ಮ ದೇಹವನ್ನು ಸಂಕೇತಿಸಿದರೆ, ಬೆಳಕು ನಮ್ಮ ಆತ್ಮವನ್ನು ಸಂಕೇತಿಸುತ್ತದೆ. ನಾವು ದೀಪವನ್ನು ಹಚ್ಚಿದಾಗ, ನಮ್ಮ ಮನಸ್ಸು ಶುದ್ಧವಾಗಿ, ಕತ್ತಲೆ, ಅಜ್ಞಾನ, ಕೋಪ, ದುರಾಸೆ, ಅಸೂಯೆ, ದ್ವೇಷ, ಕಹಿ ಮತ್ತು ಅಸಮಾಧಾನದ ರೂಪದಲ್ಲಿ ಸಂಗ್ರಹವಾದ ಎಲ್ಲಾ ನಕಾರಾತ್ಮಕತೆಯಿಂದ ಮುಕ್ತಗೊಳ್ಳುತ್ತೇವೆ ಎಂಬ ನಂಬಿಕೆಯಿದೆ. ಇದು ಆಂತರಿಕ ಆಧ್ಯಾತ್ಮಿಕ ಬೆಳವಣಿಗೆಗೆ ಮತ್ತು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಇದು ಮುಂದೆ ನೋಡಲು ಉತ್ತಮ ಅವಕಾಶವನ್ನು ನೀಡುತ್ತದೆ. ನಿಜವಾದ ಸಂತೋಷವನ್ನು ಅನುಭವಿಸಲು ಮನಸ್ಸು, ದೇಹ ಮತ್ತು ಆತ್ಮದ ಶುದ್ಧತೆಯನ್ನು ಅಭ್ಯಾಸ ಮಾಡುವುದು ಮತ್ತು ನಮ್ಮ ಪ್ರಜ್ಞೆಯ ಮಟ್ಟವನ್ನು ಹೆಚ್ಚಿಸುವುದು ಅತ್ಯಂತ ಮುಖ್ಯವಾಗಿದೆ.
ನೆಲ್ಲಿಕಾಯಿ ಮರವನ್ನು ಪೂಜಿಸುವುದು:
ನೆಲ್ಲಿಕಾಯಿ ಮರವನ್ನು ಪವಿತ್ರ ಕಾರ್ತಿಕ ಮಾಸದಲ್ಲಿ ಪೂಜಿಸಲಾಗುತ್ತದೆ. ಕಲ್ಪವೃಕ್ಷ ಮತ್ತು ಅಮೃತಫಲ ಎಂದೂ ಕರೆಯಲ್ಪಡುವ ಈ ಮರವು ಶಿವ ಪುರಾಣದಲ್ಲಿ ಉಲ್ಲೇಖವನ್ನು ಹೊಂದಿದೆ. *ಕಾರ್ತಿಕ ಪೌರ್ಣಮಿ:* ಕಾರ್ತಿಕ ಪೌರ್ಣಿಮೆಯಂದು ಶಿವ ಭೂಮಿಗೆ ಇಳಿದು ಇಡೀ ವಿಶ್ವದೊಂದಿಗೆ ಒಂದಾಗುತ್ತಾನೆ ಎಂದು ನಂಬಲಾಗಿದೆ. ಈ ದಿನ 365 ಬತ್ತಿಯೊಂದಿಗೆ ತುಪ್ಪದ ದೀಪಗಳನ್ನು ಹಚ್ಚುವುದು ವರ್ಷದ ಪ್ರತಿ ದಿನ ದೀಪ ಹಚ್ಚುವುದಕ್ಕೆ ಸಮಾನವಾಗಿರುತ್ತದೆ. ಕಾರ್ತಿಕ ಪೌರ್ಣಮಿಯಂದು ಉಪವಾಸ ಮತ್ತು ಸಾತ್ವಿಕ ಆಹಾರವನ್ನು ಸೇವಿಸುವುದು ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುತ್ತದೆ. ಈ ದಿನ ಬ್ರಾಹ್ಮಣರಿಗೆ ನೈವೇದ್ಯವನ್ನು ಅಕ್ಕಿ, ಬೆಲ್ಲ, ಹಣ್ಣುಗಳು ಮತ್ತು ಹಾಲಿನ ರೂಪದಲ್ಲಿ ನೀಡಬೇಕು.
ಶಿವಮಂತ್ರ ಪಠಣೆ:
ಓಂ ನಮಃ ಶಿವಾಯಃ ಮಂತ್ರ ಪಠಣವು ನಮ್ಮ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ದೇವಾಲಯ ಅಥವಾ ಮನೆಯಲ್ಲಿಯೇ ಕೂತು ಈ ಮಂತ್ರವನ್ನು ಪಠಿಸಿ.
ಹಬ್ಬಗಳ ಪರ್ವ:
ಈ ಶುಭಮಾಸದಲ್ಲಿ ದೀಪಾವಳಿ, ಏಕಾದಶಿ, ಗೋಪೂಜೆ, ತುಳಸಿ ವಿವಾಹ ಸೇರಿದಂತೆ ನಾನಾ ಹಬ್ಬಗಳು ಬರಲಿವೆ. ಇವುಗಳನ್ನು ಭಕ್ತಿಯಿಂದ ಆಚರಿಸಿದರೆ, ಶಿವನ ಆಶೀರ್ವಾದ ದೊರೆಯಲಿದೆ.