ರಸ ಋಷಿಗಳಿರುವ ಬೀಡು
ಕವಿ ಪುಂಗವರ ಈ ನಾಡು
ದೈವ ಲೀಲೆಗಳ ನೆಲೆಬೀಡು
ನಮ್ಮ ಹೆಮ್ಮೆಯ ಕರುನಾಡು
ಜಗದಲಿ ಭಾರತ ದೇಶ ಚಂದ
ಭಾರತದಲಿ ಕರುನಾಡು ಅಂದ
ಕರುನಾಡಲಿ ಕರಿಮಣ್ಣು ಚಂದ
ಕರಿಮಣ್ಣಲಿ ಶ್ರೀ ಗಂಧ ಅಂದ
ಸಹನಾ ಮೂರ್ತಿಗಳ ತವರೂರು
ಶೌರ್ಯ ಪರಾಕ್ರಮದಿ ನಿಸ್ಸೀಮರು
ಶಾಂತಿ ತಾಳ್ಮೆಯಲಿ ಪ್ರಖ್ಯಾತರು
ಎದುರಾಳಿಗಳ ಸೆದೆ ಬಡೆಯುವರು
ಜಾತಿ ಭೇದವ ಮರೆತು ಹಾಡುವರು
ಮತ ಪಂಥ ತೊರೆದು ನರ್ತಿಸುವರು
ಕಣ್ಣ್ ಕಣ್ಣ್ ಬಿಟ್ಟು ನೋಡುವರಣ್ಣ
ರಾಜ್ಯೋತ್ಸವದ ಸವಿ ಸೊಬಗಣ್ಣ
ತಂಟೆ ತಕರಾರು ತಗೆದಿರಾದರೆ
ಕನ್ನಡ ಕಲಿಗಳು ಸುಮ್ಮನಿರುವರೆ
ಬೆನ್ನಟ್ಟಿ ಬೆಂಡಾಗಿಸದೇ ಬಿಡರು
ಕರಿಮಣ್ಣಿನ ವೀರ ಸುಪುತ್ರರು
೬೭ ರ ರಾಜ್ಯೋತ್ಸವ ಸಂಭ್ರಮವು
ಇಲ್ಲಿ ಜನಿಸಿ ಧನ್ಯರಾದೆವು ನಾವು
ಭುವನೇಶ್ವರಿಗೊಂದು ನಮನವು
ಆಶೀರ್ವದಿಸು ನೀ ಸದಾಕಾಲವು
*ರಚನೆ : ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ ಚನ್ನಮ್ಮನ ಕಿತ್ತೂರು