ತಿರುಪತಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನದಲ್ಲಿ ವಿಶೇಷ ದರ್ಶನ ಹಾಗೂ ಸೇವೆಗಳನ್ನು ರದ್ದುಗೊಳಿಸಲಾಗಿದೆ. ಜನವರಿ 2 ರಿಂದ 11 ರವರೆಗೆ ವಿಶೇಷ ದರ್ಶನ ಹಾಗೂ ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.
ಕಳೆದ 2 ವರ್ಷಗಳಿಂದ ಏಕಾದಶಿ ಸಮಯದಲ್ಲಿ 10 ದಿನಗಳವರೆಗೆ ವೈಕುಂಠ ದ್ವಾರ ತೆರೆಯಲಾಗಿತ್ತು. ಮುಂಜಾನೆ 5 ಗಂಟೆಗೆ ದೇವರ ದರ್ಶನ ಆರಂಭವಾಗಲಿದ್ದು ಪ್ರತಿ ದಿನ 80,000 ಭಕ್ತಾದಿಗಳಿಗೆ ದರ್ಶನ ಕಲ್ಪಿಸಲಾಗುತ್ತದೆ. ಜ.2ರ ಏಕಾದಶಿಯಂದು ಮುಂಜಾನೆ 9 ರಿಂದ 11 ಗಂಟೆವರೆಗೆ ಸ್ವರ್ಣ ರಥ ಮೆರವಣಿಗೆ ನಡೆಯಲಿದೆ.