ಧನುರ್ಮಾಸ ಸಂಗೀತೋತ್ಸವ

ಬೆಂಗಳೂರು: ನಗರದ ಬಳೇಪೇಟೆಯಲ್ಲಿರುವ ಪುರಾತನ ದೇವಸ್ಥಾನವಾದ ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಾಲ್ ದಾಸ್ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯು ಕಳೆದ 25 ವರ್ಷಗಳನ್ನು ಪೂರೈಸಿ, ಈಗ 26ನೇ “ಧನುರ್ಮಾಸ ಸಂಗೀತೋತ್ಸವ”ವು  ದಿನಾಂಕ 16-12-2022 ರಿಂದ 15-1-2023ರ ವರೆಗೆ ಏರ್ಪಡಿಸಿದ್ದು, ಒಂದು ತಿಂಗಳ ಕಾಲ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ 6-30ರ ವರೆಗೆ ಭಜನೆ, ನಂತರ 6-30 ರಿಂದ 7-30ರ ವರೆಗೆ ನಾಡಿನ ಹೆಸರಾಂತ ಕಲಾವಿದರುಗಳಿಂದ ಸಂಗೀತ ಸೇವೆ ಕಾರ್ಯಕ್ರಮ ಏರ್ಪಡಿಸಿದ್ದು, ಪ್ರಥಮ ದಿನದ ಕಾರ್ಯಕ್ರಮವಾಗಿ ಡಿಸೆಂಬರ್ 16ರಂದು ವಿ|| ಎಂ. ನಾಗರಾಜ್ (ರಾಜಪ್ಪ) ರಿಂದ ಗಾಯನ, ವಿ|| ಎಸ್ ಶಶಿಧರ್ ರಿಂದ ಪಿಟೀಲು, ವಿ|| ಫಣೀಂದ್ರ ಭಾಸ್ಕರ್ ರಿಂದ ಮೃದಂಗ, ವಿ|| ಶ್ರೀನಿವಾಸ್ ಅನಂತರಾಮಯ್ಯ ರಿಂದ ತಬಲಾ ವಾದ್ಯದೊಂದಿಗೆ ಪ್ರಾರಂಭವಾಗುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಂಡಲಿಯ ಮುಖ್ಯಸ್ಥರಾದ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ವಿನಂತಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles