ಗುರು-ಶಿಷ್ಯೆಯರ ನೃತ್ಯ ಪ್ರದರ್ಶನ

ಬೆಂಗಳೂರು: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಡಿಸೆಂಬರ್ 29, ಗುರುವಾರ ಸಂಜೆ 7-30ಕ್ಕೆ ಗುರು-ಶಿಷ್ಯೆಯರಾದ ಶ್ರೀಮತಿ ಸಾಹಿತ್ಯ ವೆಂಕಟಸುಬ್ರಹ್ಮಣ್ಯಂ ಹಾಗೂ ಕು|| ಪ್ರತ್ಯುಷ ಎಸ್. ಗೌಡ ಇವರಿಂದ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ಶ್ರೀ ನಂದಕಿಶೋರ್ ಆಚಾರ್ ಅವರು ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041

Related Articles

ಪ್ರತಿಕ್ರಿಯೆ ನೀಡಿ

Latest Articles