ಬೆಂಗಳೂರು: ಮಲ್ಲೇಶ್ವರದ ಈಜುಕೊಳದ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಧ್ವನವಮಿ ಪ್ರಯುಕ್ತ ಜನವರಿ 22 ರಿಂದ 30ರ ವರೆಗೆ ಒಂಭತ್ತು ದಿನಗಳ ಕಾಲ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಕಾರ್ಯಕ್ರಮದ ಎಲ್ಲಾ ದಿನಗಳಲ್ಲೂ ಬೆಳಗ್ಗೆ ವಿವಿಧ ಹೋಮಗಳು ಜರುಗಲಿದ್ದು, ಸಂಜೆಯ ಕಾರ್ಯಕ್ರಮಗಳಲ್ಲಿ ಪ್ರತಿದಿನ ಸಂಜೆ 6-30ಕ್ಕೆ ನಾಡಿನ ಹೆಸರಾಂತ ಪಂಡಿತರುಗಳಿಂದ ಪ್ರವಚನಗಳನ್ನು ಏರ್ಪಡಿಸಿದೆ. ಜನವರಿ 22 –ಶ್ರೀ ಮರುತಾಚಾರ್ ರವರಿಂದ “ವೇದಗಳಲ್ಲಿ ಆಚಾರ್ಯರ ಮಹಿಮೆ”, ಜನವರಿ 23-ಶ್ರೀ ವೇಣುಗೋಪಾಲಾಚಾರ್ ಗುಡಿ ರವರಿಂದ “ಶ್ರೀಹರಿವಾಯುಸ್ತುತಿ”, ಜನವರಿ 24 -ಶ್ರೀ ಶ್ರೀನಿಧಿ ಆಚಾರ್ ಉತ್ತನೂರು ರವರಿಂದ “ದ್ವೈತ ಸಿದ್ಧಾಂತದ ಪ್ರಮೇಯಗಳು”, ಜನವರಿ 25- ಶ್ರೀ ಅಂಬರೀಶ ಆಚಾರ್ ರವರಿಂದ “ಮಧ್ವಾಚಾರ್ಯರ ದೃಷ್ಟಿಯಲ್ಲಿ ಭೀಷ್ಮರು”, ಜನವರಿ 26 – ಡಾ|| ವಿನಾಯಕಾಚಾರ್ ರವರಿಂದ “ಕೃಷ್ಣಾಮೃತ ಮಹಾರ್ಣವ”, ಜನವರಿ 27-ಶ್ರೀ ಬ್ರಹ್ಮಣ್ಯಾಚಾರ್ ರವರಿಂದ “ಶ್ರೀ ಮಧ್ವವಿಜಯ-5ನೇ ಸರ್ಗ”, ಜನವರಿ 28-ಶ್ರೀ ಡಂಬಳ ಜಯಸಿಂಹಾಚಾರ್ ರವರಿಂದ “ಆಧುನಿಕ ಪ್ರಪಂಚಕ್ಕೆ ಆಚಾರ್ಯರ ಕೊಡುಗೆ” ಜನವರಿ 29-ಶ್ರೀ ಕಲ್ಯಾ ಶ್ರೀಕಾಂತಾಚಾರ್ ರವರಿಂದ “ಬಳಿಕ್ತಾ ಸೂಕ್ತ” ಹಾಗೂ ಜನವರಿ 30-ಶ್ರೀ ಆಯನೂರು ಮಧುಸೂದನಾಚಾರ್ ರವರಿಂದ “ಆಧುನಿಕ ಯುವಕರಿಗೆ ಮಧ್ವಾಚಾರ್ಯರ ಸಂದೇಶ” ವಿಷಯಗಳನ್ನು ಕುರಿತು ಪ್ರವಚನಗಳನ್ನು ಏರ್ಪಡಿಸಿದೆ ಎಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ಅವರು ತಿಳಿಸಿದ್ದಾರೆ.