ಜ.22 ರಂದು ದಾಸ ಸಾಹಿತ್ಯ ಸಮ್ಮೇಳನ


ಬೆಂಗಳೂರು: ಹರಿದಾಸ ಕೀರ್ತನ ಬಳಗದ ವತಿಯಿಂದ ಸೇಡಂನ ದಾಸಧೇನು ಟ್ರಸ್ಟ್ ಸಹಯೋಗದಲ್ಲಿ ಇದೇ ಜ.22 ರಂದು ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಶ್ರೀಕೃಷ್ಣರಾಜ ಪರಿಷ್ಮನಂದಿರದಲ್ಲಿ 2ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೋಜಿಸಿದೆ. ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ರವರು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅಂದು ಬೆಳಗ್ಗೆ 10 ಸಮ್ಮೇಳನವನ್ನು ಬೇಲಿಮಠದ ಪೂಜ್ಯ ಶ್ರೀ ಶಿವರುದ್ರ ಮಹಾಸ್ವಾಮಿಗಳು ಉದ್ಘಾಟಿಸುವರು. ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ.ಪ್ರಧಾನ ಕರ‍್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಮತ್ತು ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯ ಕರ‍್ಯದರ್ಶಿ , ರಂಗವಿಠಲ ಮಾಸಪತ್ರಿಕೆ ಸಂಪಾದಕ ವಿದ್ವಾನ್ ಹೆಚ್.ಬಿ.ಲಕ್ಷ್ಮೀನಾರಾಯಣಾಚಾರ‍್ಯರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸೇಡಂನ ದಾಸಧೇನು ಟ್ರಸ್ಟ್ನ ಅಧ್ಯಕ್ಷ ಡಾ.ವಾಸುದೇವ ಅಗ್ನಿಹೋತ್ರಿ ಆಶಯ ನುಡಿಗಳನ್ನಾಡುವರು. ಇದೇ ಸಂದರ್ಭದಲ್ಲಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿರವರ ‘ವಿಷ್ಣುಸಹಸ್ರನಾಮದ ಅಪೂರ್ವ ಅರ್ಥಗಳು’ ಮತ್ತು ಡಾ.ಹೆಚ್.ಎ.ಸತ್ಯವತಿರವರ ‘ದಾಸ ದೀಪ್ತಿ’ ಕೃತಿ ಲೋಕಾರ್ಪಣೆಗೊಳ್ಳಲಿದೆ.

ಸೇಡಂನ ಸಂಶೋಧಕರಾದ ಡಾ.ಎಂ.ಜಿ.ದೇಶಪಾAಡೆ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕದ ಹರಿದಾಸ ಸಂಸ್ಕೃತಿ ಕುರಿತು ಕಲಬುರ್ಗಿಯ ಕನ್ನಡ ಪ್ರಾಧ್ಯಾಪಕ ಡಾ.ಸುರೇಶ್ ಎಲ್.ಜಾಧವ್ ಹಾಗೂ ಹರಿದಾಸ ಸಾಹಿತ್ಯ ಪರಿಷ್ಕರಣೆಯ ಸಾಧ್ಯತೆಗಳು ಮತ್ತು ಆದ್ಯತೆಗಳು ಬಗ್ಗೆ ರಾಯಚೂರಿನ ಲೇಖಕಿ ಡಾ.ರಮಾ ಕಲ್ಲೂರ್‌ಕರ್ ಪ್ರಬಂಧ ಮಂಡಿಸುವರು.

ಯೋಗ ಯೂನಿರ್ವಸಿಟಿ ಆಫ್ ದಿ ಅಮೇರಿಕಾಸ್‌ನ ಉಪಕುಲಪತಿ ಡಾ.ಯೋಗಿ ದೇವರಾಜು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಲೇಖಕ ಡಾ.ಬ.ಲ.ಸುರೇಶ್ ಅಧ್ಯಕ್ಷತೆಯಲ್ಲಿ ಪಾರ್ಥಸಾರಥಿ ವಿಠಲದಾಸರ ಬದುಕು ಕುರಿತು ಚೆನ್ನೈನ ಸಂಸ್ಕೃತ ಪ್ರಾಧ್ಯಾಪಕ ಡಾ.ಕೆ.ಎಸ್.ಸುಮನ್ ಆಚರ‍್ಯ ಹಾಗು ಪಾರ್ಥಸಾರಥಿ ವಿಠಲದಾಸರ ಬರಹದ ಬಗ್ಗೆ ಕೆ.ಜಿ.ಎಫ್‌ನ ಉಪನ್ಯಾಸಕ ಡಾ.ಡಿ .ಶ್ರೀನಿವಾಸ ಪ್ರಸಾದ್ ಮಾತನಾಡುವರು.

ಸಂಜೆ 4.30 ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ತುಮಕೂರಿನ ಸಾಹಿತಿ ಡಾ.ಕವಿತಾಕೃಷ್ಣ ಸಮಾರೋಪ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಾನಕಲಾ ಪರಿಷತ್ ಅಧ್ಯಕ್ಷ ಸಂಗೀತ ಸಾಮ್ರಾಟ್ ಆರ್.ಕೆ.ಪದ್ಮನಾಭ, ದಾಸ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ನಾ.ಗೀತಾಚರ‍್ಯ ಹಾಗು ದಾಸ ಧೇನು ಟ್ರಸ್ಟ್ನ ಪೋಷಕರಾದ ಡಾ.ಸುಧೀಂದ್ರ ಕುಲಕರ್ಣಿ ಭಾಗವಹಿಸುವರು.

Related Articles

ಪ್ರತಿಕ್ರಿಯೆ ನೀಡಿ

Latest Articles