ಬೆಂಗಳೂರಿಗೆ ಒಂದು ಇತಿಹಾಸವಿದೆ; ಪರಂಪರೆಯಿದೆ; ‘ಐಡೆಂಟಿಟಿ’ ಇದೆ; ಸಂಸ್ಕೃತಿಯಿದೆ. ಇವೆಲ್ಲವುಗಳ ಮೂಲಕ ಸಮಗ್ರವಾಗಿ ನೋಡಿದಾಗ ನಮಗೆ ಸಿಗುವ ಬೆಂಗಳೂರಿನ ಪರಿಚಯ ವಿಸ್ಮಯಕರವಾದದ್ದು.
ಹಳೆಯ ಬೆಂಗಳೂರಿನ ಅಚ್ಚರಿದಾಯಕ ಕುರುಹುಗಳು ಕೆಲವು ಇಂದಿಗೂ ಉಳಿದಿವೆ; ಅವುಗಳನ್ನು ಕುರಿತು ಮಾಹಿತಿ ನೀಡಬಲ್ಲವರು ಕಡಮೆ. ಹೊಟ್ಟೆಪಾಡಿಗಾಗಿ ಬಂದು ಬೆಂಗಳೂರಿನಲ್ಲಿ ನೆಲೆನಿಂತವರಿಗೆ ಅವುಗಳ ಪರಿಚಯವಿಲ್ಲವಷ್ಟೇ ಅಲ್ಲ, ಅಂಥವು ಇರಬಹುದೆಂಬ ಕಲ್ಪನೆಯೂ ಇಲ್ಲ.
ಈ ಎಲ್ಲ ಕಾರಣಗಳಿಗಾಗಿ ಮಹತ್ತ್ವದ್ದೆನಿಸುತ್ತದೆ, #ಬೆಂಗಳೂರು_ಒಂದು_ಅವಲೋಕನ ಕೃತಿ. ಇದು ಬೆಂಗಳೂರಿನ ಇತಿಹಾಸವನ್ನು, ಸಾಂಸ್ಕೃತಿಕ ಪರಂಪರೆಯನ್ನು ಹೇಳುವುದರ ಜೊತೆಗೇ ಈಗಲೂ ಉಳಿದಿರುವ ಐತಿಹಾಸಿಕ ಸಾಂಸ್ಕೃತಿಕ ಸಂಗತಿಗಳನ್ನು ಕುರಿತ ವಿವರಗಳನ್ನೂ ಅವುಗಳನ್ನು ನೋಡಲು ಅವಶ್ಯ ಮಾರ್ಗದರ್ಶನವನ್ನೂ ನೀಡುತ್ತದೆ.
ಈ ಕೃತಿಯಲ್ಲಿ ತೆರೆದುಕೊಳ್ಳುವ ಬೆಂಗಳೂರು ಅತ್ಯಪೂರ್ವವಾದದ್ದು; ಪ್ರತಿಯೊಬ್ಬರೂ ನೋಡಲೇಬೇಕಾದದ್ದು!
ನಿಮ್ಮ ಪ್ರತಿಯನ್ನು ಖರೀದಿಸಲು WhatsApp ಮಾಡಿ: 074836 81708