ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ವೀರಾಂಜನೇಯಸ್ವಾಮಿ ದೇವಸ್ಥಾನ, ಸರಸ್ವತಿನಗರ, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ
ಫೆಬ್ರವರಿ 14 ರಿಂದ 17ರ ವರೆಗೆ ವಿವಿಧ ಧಾರ್ಮಿಕ / ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ
ಫೆ. 14, ಬುಧವಾರ, ಸಂಜೆ 6-00ಕ್ಕೆ : ಶ್ರೀ ಶ್ರೀಪಾದರಾಜ ಭಜನಾಹ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ ಪ್ರವಚನ. ವಿಷಯ : “ಶ್ರೀ ಹನುಮದ್ವಿಲಾಸ”.
ಫೆ. 15, ಗುರುವಾರ ಸಂಜೆ 6-00ಕ್ಕೆ : ಶ್ರೀ ಶ್ರೀಪಾದರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ ಪ್ರವಚನ. ವಿಷಯ : “ಶ್ರೀ ಹನುಮದ್ವಿಲಾಸ”.
ಫೆ. 16, ಶುಕ್ರವಾರ ಸಂಜೆ 6-00ಕ್ಕೆ : ಪವಿತ್ರ ಗಾನ ವೃಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಪ್ರಶಾಂತ ಭಾರ್ಗವಾಚಾರ್ಯರವರಿಂದ ಪ್ರವಚನ. ವಿಷಯ : “ಶ್ರೀ ಹನುಮದ್ವಿಲಾಸ”.
ಫೆ.17, ಶನಿವಾರ ಸಂಜೆ 6-30ಕ್ಕೆ : “ಹರಿನಾಮ ಸಂಕೀರ್ತನೆ”. ಗಾಯನ : ಶ್ರೀಮತಿ ಶೃತಿ ಕಾರಕೋಡ್ಲು,
ಪಿಟೀಲು : ಶ್ರೀ ಆಶ್ರಿತ್ ಕೃಷ್ಣ
ಮೃದಂಗ : ಶ್ರೀ ಅನಿರುದ್ಧ ವಾಸುದೇವ್
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ, ಗೋವಿಂದರಾಜನಗರ ಪೋಲೀಸ್ ಠಾಣೆಯ ಹತ್ತಿರ, ನಾಗರಬಾವಿ ಮುಖ್ಯರಸ್ತೆ, ಬೆಂಗಳೂರು-560072