ಮೇ 10 – ಅಕ್ಷ ಯ ತೃತೀಯ
ಮೇ 12 – ಭಾಷ್ಯಕರ ಸತ್ತುಮೋರ, ರಾಮಾನುಜ ಜಯಂತಿ, ಶಂಕರ ಜಯಂತಿ
ಮೇ 17 ರಿಂದ 19 ರ ತನಕ – ಪದ್ಮಾವತಿ ಪರಿಣಯೋತ್ಸವಂ
ಮೇ 22 – ನೃಸಿಂಹ ಜಯಂತಿ, ತರಿಗೊಂಡ ವೆಂಗಮಾಂಬ ಜಯಂತಿ
ಮೇ 23 – ಅನ್ನಮಾಚಾರ್ಯ ಜಯಂತಿ, ಕೂರ್ಮ ಜಯಂತಿ
ಮೇ 22 ರಿಂದ 24 ರವರೆಗೆ ತಿರುಚಾನೂರು ಪದ್ಮಾವತಿ ಅಮ್ಮವಾರಿ ವಸಂತೋತ್ಸವ
ತಿರುಚಾನೂರು ಶ್ರೀ ಪದ್ಮಾವತಿ ಅಮ್ಮವಾರಿ ದೇವಸ್ಥಾನ (ತಿರುಚನೂರು ಪದ್ಮಾವತಿ ದೇವಸ್ಥಾನ)ದ ವಸಂತೋತ್ಸವ ಮೇ 22 ರಿಂದ 24 ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಮೇ 21 ರಂದು ಸಂಜೆ 6 ಗಂಟೆಗೆ ಅಂಕುರಾರ್ಪಣೆ ನಡೆಯಲಿದೆ. ಭಕ್ತರು ತಲಾ 150 ರೂಪಾಯಿ ಪಾವತಿಸಿ ವಸಂತೋತ್ಸವದಲ್ಲಿ ಭಾಗವಹಿಸಬಹುದು. ಈ ಮಹೋತ್ಸವದ ಅಂಗವಾಗಿ ಮೇ 23ರಂದು ಬೆಳಗ್ಗೆ 7.45ಕ್ಕೆ ಚಿನ್ನದ ರಥೋತ್ಸವ ನಡೆಯಲಿದೆ.
ಮೇ 14 ರಂದು ಕೋಯಿಲ್ ಆಳ್ವಾರ್ ತಿರುಮಂಜನಂ
ಶ್ರೀ ಪದ್ಮಾವತಿ ದೇವಿಯ ವಾರ್ಷಿಕ ವಸಂತೋತ್ಸವದ ನಿಮಿತ್ತ ಮೇ 14 ರಂದು ದೇವಸ್ಥಾನದಲ್ಲಿಕೋಯಿಲ್ ಆಳ್ವಾರ್ತಿರುಮಂಜನವನ್ನು ಆಯೋಜಿಸಲಾಗಿದೆ. ಬೆಳಗ್ಗೆ ದೇವಿಯನ್ನು ಎಬ್ಬಿಸಿದ ನಂತರ 6 ರಿಂದ 9ರವರೆಗೆ ಕೊಯಿಲ್ ಆಳ್ವಾರ್ತಿರುಮಂಜನ ನಡೆಯಲಿದೆ.
ಬೆಳಗ್ಗೆ 9 ಗಂಟೆಯಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಬ್ಬಗಳ ಕಾರಣ ಮೇ 14, ಮೇ 21 ರಿಂದ 24 ರ ತನಕ ಕಲ್ಯಾಣೋತ್ಸವ, ಸಹಸ್ರದೀಪಾಲಂಕರಸೇವೆ, ಮೇ 23 ರಂದು ತಿರುಪ್ಪವಾಡ ಸೇವೆ ಮತ್ತು ಮೇ 24 ರಂದು ಲಕ್ಷ್ಮೀ ಪೂಜೆ ಆರ್ಜಿತಸೇವೆಯನ್ನು ಟಿಟಿಡಿ ರದ್ದುಗೊಳಿಸಿದೆ.