ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪ್ರಕಾಶನಗರ, ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 21 ರಿಂದ 24ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಮೇ 21, ಮಂಗಳವಾರ : ಮಲ್ಲೇಶ್ವರದ ಸ್ತುತಿ ವಾಹಿನಿ ಸಂಘದ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ”ಲಕ್ಷ್ಮೀ ಶೋಭಾನೆ” ಧಾರ್ಮಿಕ ಪ್ರವಚನ. (ಸಂಜೆ 6 ರಿಂದ 8).
ಮೇ 22, ಬುಧವಾರ : ವಿಜಯನಗರದ ಶ್ರೀಕಾಂತ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ “ಲಕ್ಷ್ಮೀ ಶೋಭಾನೆ” ಧಾರ್ಮಿಕ ಪ್ರವಚನ. (ಸಂಜೆ 6 ರಿಂದ 8).
ಮೇ 23, ಗುರುವಾರ : “ಹರಿನಾಮ ಸಂಕೀರ್ತನೆ”. ಗಾಯನ : ಶ್ರೀಮತಿ ಭಾವನಾ ಮೂರ್ತಿ, ಕೀ-ಬೋರ್ಡ್ : ಶ್ರೀ ಟಿ. ಎಸ್. ರಮೇಶ್, ತಬಲಾ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ (ಸಂಜೆ 7 ರಿಂದ 8-30).
ಮೇ 24, ಶುಕ್ರವಾರ : ವಿದ್ಯಾರಣ್ಯಪುರದ ಶ್ರೀ ವಿಜಯ ವಿಠ್ಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯರಿಂದ “ಲಕ್ಷ್ಮೀ ಶೋಭಾನೆ” ಧಾರ್ಮಿಕ ಪ್ರವಚನ.
ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021.
ಈ ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟಿ ಟಿ ಡಿ ಮತ್ತು ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಅವರು ವಿನಂತಿಸಿದ್ದಾರೆ.