ಬೆಂಗಾಲಿ ರಸಗುಲ್ಲ


ರಸಗುಲ್ಲಅನ್ನುತ್ತಿದ್ದ ಹಾಗೆ ಬಾಯಲ್ಲಿನೀರು ಬರುತ್ತದೆ. ಒಡೆದ ಹಾಲನ್ನು ಹಾಗೆ ಚೆಲ್ಲುವ ಬದಲು ಸ್ವಾದಭರಿತ ರಸಗುಲ್ಲಮಾಡಿ ಬಾಯಿ ಸಿಹಿ ಮಾಡಿಕೊಳ್ಳಬಹುದು.
ಬೇಕಾಗುವ ಸಾಮಗ್ರಿ: ಹಾಲುಧಿ 1ಲೀ., ನಿಂಬೆಹಣ್ಣಿನ ರಸ-2ಚಮಚ, ಸಣ್ಣ ರವೆ- ಅರ್ಧ ಚಮಚ, ಸಕ್ಕರೆ-ಅರ್ಧ ಕೆ.ಜಿ.
ಮಾಡುವ ವಿಧಾನ: ಹಾಲನ್ನು ಕಾಯಿಸಿಕೊಳ್ಳಬೇಕು. ಕಾದಿರುವ ಹಾಲಿಗೆ ನಿಂಬೆರಸ ಹಿಂಡಿ ಅರ್ಧ ನಿಮಿಷ ಕುದಿಸಿ ಕೆಳಗಿಳಿಸಬೇಕು. (ಒಡೆದ ಹಾಲಿದ್ದರೆ ಹಾಗೇ ತಯಾರಿಸಬಹುದು) ತೆಳು ಬಟ್ಟೆಯಲ್ಲಿಒಡೆದ ಹಾಲನ್ನು ಶೋಧಿಸಿ ಗಟ್ಟಿ ಭಾಗವನ್ನು ಬಟ್ಟೆಯಲ್ಲಿಯೇ ಸುತ್ತಿ 2 ಗಂಟೆ ನಂತರ ಗಂಟು ಬಿಚ್ಚಿ ಒಂದು ತಟ್ಟೆಯಲ್ಲಿಈ ಮಿಶ್ರಣವನ್ನು 10 ನಿಮಿಷ ಚೆನ್ನಾಗಿ ನಾದಬೇಕು. ಉಂಡೆಗಳನ್ನು ಮಾಡಲು ಸುಲಭವಾಗಲೆಂದು ಸ್ವಲ್ಪ ಸಣ್ಣ ರವೆ ಬೆರೆಸಬಹುದು. ಈ ಮಿಶ್ರಣದಿಂದ ಸಣ್ಣಸಣ್ಣ ಉಂಡೆಗಳನ್ನು ಮಾಡಿಕೊಂಡು ಒಂದು ತಟ್ಟೆಯಲ್ಲಿಡಬೇಕು. ಈಗ ಸಕ್ಕರೆ ನೀರನ್ನು ಒಲೆಯ ಮೇಲಿಟ್ಟು ಕುದಿದ ನಂತರ ಅದರಲ್ಲಿಕಾಲು ಭಾಗವನ್ನು ಇನ್ನೊಂದು ಪಾತ್ರೆಗೆ ಹಾಕಿ. ಒಲೆಯ ಮೇಲೆ ಇರುವ ಪಾಕಕ್ಕೆ ಉಂಡೆ ಮಾಡಿದ ಮಿಶ್ರಣ ಹಾಕಿ. ಸ್ವಲ್ಪ ದೊಡ್ಡ ಉರಿಯಲ್ಲಿಕುದಿಸಿ. ಆದರೆ ತಳ ಸೀಯದಂತೆ ನೋಡಿಕೊಳ್ಳಿ. ತೆಗೆದಿಟ್ಟುಕೊಂಡಿರುವ ಪಾಕವನ್ನು ಆಗಾಗ್ಗೆ ಉಂಡೆಗಳ ಮೇಲೆ ಚುಮುಕಿಸುತ್ತಿರಬೇಕು. ಉಂಡೆ ಸಕ್ಕರೆ ಪಾಕದಲ್ಲೇ ಅರ್ಧ ಗಂಟೆ ಬೇಯಬೇಕು. ಬೆಂದ ನಂತರ ಉಂಡೆಗಳು ಉಬ್ಬುತ್ತದೆ. ನಂತರ ಪಾಕದ ಸಮೇತ ಹಾಗೇ ಇಳಿಸಿ. ಈಗ ರುಚಿಭರಿತ ರಸಗುಲ್ಲತಿನ್ನಲು ರೆಡಿ. ಇದನ್ನು ಒಂದು ದಿನದ ನಂತರ ಬಿಟ್ಟು ತಿಂದರೆ ಸ್ವಾದ ಇನ್ನೂ ಜಾಸ್ತಿ.

Related Articles

ಪ್ರತಿಕ್ರಿಯೆ ನೀಡಿ

Latest Articles