ಬೇಕಾಗುವ ಸಾಮಾಗ್ರಿಗಳು: ಅರಸಿನ ಎಲೆ 10, ಅಕ್ಕಿ-1ಕಪ್, ತೆಂಗಿನ ತುರಿ-1/2 ಕಪ್, ಬೆಲ್ಲ-1ಕಪ್, ಏಲಕ್ಕಿ-5 ಬೀಜ, ಸ್ವಲ್ಪ ಉಪ್ಪು.
ತಯಾರಿಸುವ ವಿಧಾನ: ನೆನೆಸಿಟ್ಟ ಅಕ್ಕಿಯೊಂದಿಗೆ ತೆಂಗಿನ ತುರಿ ಸೇರಿಸಿ ದೋಸೆ ಹಿಟ್ಟಿಗಿಂತ ಸ್ವಲ್ಪ ಹೆಚ್ಚು ದಪ್ಪವಾಗಿ ರುಬ್ಬಿಕೊಳ್ಳಿ. ತೆಂಗಿನ ತುರಿ, ಬೆಲ್ಲ, ಏಲಕ್ಕಿ ಸೇರಿಸಿ ಹೂರಣ ತಯಾರಿಸಿಟ್ಟುಕೊಳ್ಳಿ. ರುಬ್ಬಿಟ್ಟುಕೊಂಡಿದ್ದ ಅಕ್ಕಿ ಹಿಟ್ಟನ್ನು ತೆಳುವಾಗಿ ತೊಳೆದಿಟ್ಟ ಅರಸಿನ ಎಲೆ ಮೇಲೆ ಸವರಿ. ಹೂರಣವನ್ನು ಎಲೆ ಮೇಲೆ ಹಾಕಿ ಮಡಚಿ ಹಬೆಯಲ್ಲಿಬೇಯಿಸಿ. ತುಪ್ಪದೊಂದಿಗೆ ಸವಿಯಬಹುದು.