ಮಕ್ಕಳಲ್ಲಿಸಂಸ್ಕಾರದ ದೀಪ ಹಚ್ಚಲು ವಿನೂತನ ಪ್ರಯೋಗ

ನಮ್ಮ ಸಂಸ್ಕೃತಿ, ಸಂಸ್ಕಾರ -ಮೌಲ್ಯಗಳು ಕಳೆದುಹೋಗಿವೆ ಎಂದು ಆಗಾಗ್ಗೆ ವಿಷಾದ ವ್ಯಕ್ತಪಡಿಸುತ್ತಿರುತ್ತೇವೆ. ಸಂಸ್ಕಾರ, ಸಂಸ್ಕೃತಿ, ಮೌಲ್ಯಗಳನ್ನು ಬೆಳೆಸುವ ಕಾರ್ಯವಾಗಬೇಕು ಎಂದು ಮಾತಿನ ಮೂಲಕ ಹೇಳಿದರೆ ಸಾಕೇ? ಅದನ್ನು ಯಾರು ಆರಂಭಿಸಬೇಕು, ಹೇಗೆ? ಎಲ್ಲಿಂದ ಮಾಡಬೇಕು ಎಂದು ಹೇಳಿಕೊಡುವವರು ವಿರಳ.
ಮನೆಯೇ ಮೊದಲ ಪಾಠಶಾಲೆ. ನಿಜ. ಅದರ ಜತೆಗೆ ಶಾಲೆಗೆ ಹೊರಟ ಮಗುವಿಗೆ ತನ್ನ ತಂದೆ ತಾಯಿ, ಗುರು-ಹಿರಿಯರನ್ನು ಗೌರವಿಸಬೇಕು, ಪ್ರೀತಿ, ಅನುಕಂಪ, ಆತ್ಮವಿಶ್ವಾಸದ ಬಗ್ಗೆ ನಿತ್ಯವೂ ಹೇಳಿಕೊಟ್ಟರೆ ಮಕ್ಕಳಲ್ಲಿಸಂಸ್ಕಾರದ ದೀಪ ಹಚ್ಚಿದಂತೆ. ಈ ನಿಟ್ಟಿನಲ್ಲಿವಿಶಿಷ್ಟವಾದ ‘ದಿನಚರಿ ಪುಸ್ತಕ’ (ಶಾಲಾ ಡೈರಿ)ವನ್ನು ಶಾಲೆಯೊಂದು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ನೀಡಿದೆ. ಈ ಮೂಲಕ ಮಕ್ಕಳಲ್ಲಿಸಂಸ್ಕೃತಿ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಶಾಲೆಯೊಂದು ಸದ್ದಿಲ್ಲದೇ ಮಾಡುತ್ತಿದೆ. ಮಕ್ಕಳಲ್ಲಿಸಂಸ್ಕಾರ, ಮೌಲ್ಯವನ್ನು ಹೇಳಿಕೊಡಬೇಕು ಎಂದು ಹೇಳುವುದಷ್ಟೇ ಅಲ್ಲದೇ, ಪಠ್ಯದ ಜತೆಗೆ, ನಮ್ಮ ಸಂಸ್ಕಾರವನ್ನು, ಸಂಸ್ಕೃತಿಯನ್ನು ತಿಳಿ ಹೇಳುವುದರ ಮೂಲಕ ಮಕ್ಕಳಲ್ಲಿಅರಿವು ಮೂಡಿಸುತ್ತಿದ್ದಾರೆ.


ಇದು ವಿಭಿನ್ನ ಪ್ರಯೋಗ
ಅಧ್ಯಾತ್ಮ ಚಿಂತಕ ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕರು ಆಗಿರುವ ಶ್ರೀ ಶ್ರೀ ರವಿಶಂಕರ್‌ ಗುರೂಜಿ ನೇತೃತ್ವದ ಎಲ್ಲಾಎಸ್‌ಎಸ್‌ಆರ್‌ವಿಎಂ ಶಾಲೆಯಲ್ಲಿಮಕ್ಕಳಿಗಾಗಿ ಇಂತಹ ಒಂದು ವಿಶಿಷ್ಟ ರೀತಿಯ ಡೈರಿಯನ್ನು ಸಿದ್ಧಪಡಿಸಿದೆ. ಆಧ್ಯಾತ್ಮಿಕ, ಯೋಗ, ಧ್ಯಾನದಂತಹ ಸನಾತನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿಮಹತ್ತರ ಪಾತ್ರ ವಹಿಸುತ್ತಿರುವ ಆರ್ಟ್‌ ಆಫ್‌ ಲಿವಿಂಗ್‌ ಎಲ್ಲಾಶಾಲೆಗಳಲ್ಲಿಮಕ್ಕಳಿಗಾಗಿ ಈ ವಿನೂತನ ಪ್ರಯೋಗವನ್ನು ಮಾಡಿದೆ. ಡೈರಿ ಮಾತ್ರವಲ್ಲದೇ 3ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಗ್ಗೆ ಪ್ರಾರ್ಥನೆ ಜತೆಗೆ ಪ್ರಾಣಾಯಾಮದಂತಹ ಕ್ರಿಯೆಗಳನ್ನು ಹೇಳಿಕೊಡಲಾಗುತ್ತಿದೆ. ಇದು ಮಕ್ಕಳ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಪೂರಕವಾಗಿದೆ.

ಡೈರಿಯಲ್ಲಿಏನಿದೆ?
ಡೈರಿಯಲ್ಲಿವಿದ್ಯಾರ್ಥಿ/ವಿದ್ಯಾರ್ಥಿನಿಯರ ಮಾಹಿತಿ, ತಂದೆ, ತಾಯಿಯ ಮಾಹಿತಿಯನ್ನು ಬರೆಯಬೇಕಿರುತ್ತದೆ. ಅಲ್ಲಿತಂದೆ-ತಾಯಿಯನ್ನು ಪಿತೃದೇವೋಭವ, ಮಾತೃದೇವೋಭವ ಎಂದೇ ಸಂಬೋಧಿಸಲಾಗಿದೆ. ಅದರ ಜತೆಗೆ ಬೆಳಗ್ಗಿನ ಪ್ರಾರ್ಥನೆ, ಊಟ ಮಾಡುವಾಗ ಹೇಳುವ ಶ್ಲೋಕದ ವಿವರ, ಪ್ರತೀ ಪುಟದಲ್ಲಿಯೂ ಸುಭಾಷಿತ, ಹಿತನುಡಿಗಳ ಉಲ್ಲೇಖವಿದೆ. ಅವುಗಳ ಮೇಲೆ ಮಕ್ಕಳು ನಿತ್ಯವೂ ಕಣ್ಣಾಡಿಸುವಂತೆ ಬರೆಯಲಾಗಿದೆ. ಸೂಧಿರ್ತಿದಾಯಕ ಹಿತನುಡಿಗಳು, ತಂದೆ- ತಾಯಿಯೇ ದೇವರು ಎನ್ನುವ ಭಾವವನ್ನು ಬೆಳೆಸುವಲ್ಲಿಇಂತಹ ಪದಗಳು ಸೂಧಿರ್ತಿಯಾಗಬಲ್ಲವು. ಅಲ್ಲದೇ ನಮ್ಮ ಧಾರ್ಮಿಕತೆಯಲ್ಲಿಪಂಚಾಂಗಕ್ಕೆ ವಿಶೇಷ ಮಹತ್ವ್ವವಿದೆ. ತಮ್ಮ ಹುಟ್ಟಿದ ದಿನದ ತಿಥಿ, ವಾರ, ನಕ್ಷತ್ರದ ಕುರಿತಾದ ಮಾಹಿತಿಗಳು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಶಾಲಾ ಡೈರಿಯಲ್ಲಿಮಕ್ಕಳು ಹುಟ್ಟಿದ ದಿನಾಂಕ ಎಂಬ ಪದಕ್ಕೆ ಬದಲಾಗಿ ಹುಟ್ಟಿದ ದಿನವನ್ನು ತಿಥಿ, ವಾರ, ನಕ್ಷತ್ರಗಳನ್ನಾಗಿ ವಿಂಗಡಿಸಿ ಉಲ್ಲೇಖಿಸಿದ್ದಾರೆ.
ಅರಿವು ಇರಬೇಕು:

ಎಳವೆಯಲ್ಲಿಯೇ ಮಕ್ಕಳ ಮನಸ್ಸಿನಲ್ಲಿಒಳ್ಳೆಯ ವಿಚಾರಗಳನ್ನು ತಿಳಿಸಿಕೊಟ್ಟರೆ ಅದು ಹೆಚ್ಚು ಮಕ್ಕಳ ಮನಸ್ಸಿಗೆ ಪರಿಣಾಮ ಬೀರುತ್ತದೆ. ಪಠ್ಯದ ಜ್ಞಾನವಷ್ಟೆ ಬದುಕಿಗೆ ಸಾಕಾಗುವುದಿಲ್ಲ. ಅಕ್ಷರ ಜ್ಞಾನವಿಲ್ಲದಿದ್ದರೂ ಸಂಸ್ಕಾರ ಒಂದಿದ್ದರೆ ಸಾರ್ಥಕ ಬದುಕು ನಡೆಸಬಹುದು. ಶಿಕ್ಷಣದ ಹಂತದಲ್ಲಿಯೇ ಮಕ್ಕಳಿಗೆ ಜ್ಞಾನದ ಜತೆಗೆ ಬದುಕಿನ ಅರಿವನ್ನು ಮೂಡಿಸುವುದು ಬಹಳ ಅಗತ್ಯ. ಸುಂದರ ನಾಳೆಗಳಿಗಾಗಿ ನಮ್ಮ ಮೌಲ್ಯ, ಸಂಸ್ಕೃತಿ- ಸಂಸ್ಕಾರವನ್ನು ಕಲಿಸಿಕೊಡುವ ಇಂತಹ ಪ್ರಯತ್ನ ಶ್ಲಾಘನೀಯ.


ಮಕ್ಕಳ ಡೈರಿಯನ್ನು ಪಂಚಾಂಗವನ್ನಾಗಿ ಮಾಡಿರುವುದರ ಹಿಂದೆ ನಮ್ಮ ಗುರೂಜಿಯವರ ಚಿಂತನೆ ಇದೆ. ಎಳೆಯ ಮಕ್ಕಳಲ್ಲಿಯೇ ವಿದ್ಯಾಭ್ಯಾಸದ ಜತೆಗೆ ಸನಾತನ ಸಂಸ್ಕೃತಿಯ ಅರಿವು ಮೂಡಿಸುವ ಪ್ರಯತ್ನವಿದು.

– ಡಾ. ರೇಷ್ಮಾ, ಪ್ರಾಂಶುಪಾಲರು, ಎಸ್‌ಎಸ್‌ಆರ್‌ವಿಎಂ, ಗುಂಜೂರು

Related Articles

ಪ್ರತಿಕ್ರಿಯೆ ನೀಡಿ

Latest Articles