ಬೇಕಾಗುವ ಸಾಮಗ್ರಿ: ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ-1ಕಪ್, ತೆಂಗಿನ ಕಾಯಿ ತುರಿ-1ಕಪ್, ಹಸಿಮೆಣಸಿನಕಾಯಿ-2. ಕೊತ್ತಂಬರಿ ಸೊಪ್ಪು-4 ಎಳೆ, ಶುಂಠಿ- 1 ಸಣ್ಣ ತುಂಡು, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ ಬೇವಿನ ಸೊಪ್ಪು-10, ಕಡ್ಲೆಬೇಳೆ- 1ಚಮಚ, ಉದ್ದಿನ ಬೇಳೆ-1 ಚಮಚ, ಸಾಸಿವೆ-1ಚಮಚ, ಜೀರಿಗೆ 1/4 ಚಮಚ, ಒಣಮೆಣಸು-2, ಇಂಗು- ಚಿಟಿಕೆ, ತುಪ್ಪ-2ಚಮಚ.
ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು 2 ಕಪ್ ನೀರು ಹಾಕಿ ಕುಕ್ಕರಿನಲ್ಲಿಬೇಯಿಸಿಟ್ಟುಕೊಳ್ಳಿ. ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ಕ್ರಶ್ ಮಾಡಿಕೊಳ್ಳಿ. ಹಸಿಮೆಣಸು, ಕೊತ್ತಂಬರಿ ಸೊಪ್ಪು, ಶುಂಠಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಬಾಣಲೆಯಲ್ಲಿಎಣ್ಣೆ ಹಾಕಿ ಒಗ್ಗರಣೆ ತಯಾರಿಸಿ. ಅದಕ್ಕೆ ಕಾಯಿ ತುರಿ ಸೇರಿಸಿ ಸಣ್ಣ ರೀತಿಯಲ್ಲಿಬೇಯಿಸಿ. ಬೇಯಿಸಿಟ್ಟ ಅನ್ನವನ್ನು ಸೇರಿಸಿ, ಉಪ್ಪು ಹಾಕಿ 2-3 ನಿಮಿಷ ಚೆನ್ನಾಗಿ ಬಿಸಿ ಮಾಡಿ. ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲೆಸಿ. ಬಿಸಿಬಿಸಿಯಾಗಿರುವಾಗಲೇ ಸವಿಯಿರಿ.