ಮಳೆಗಾಲ ಮನೆಯೊಳಗೆ ಹೀಗಿರಲಿ

ಮಳೆಗಾಲ ಶುರುವಾಗಿದೆ. ಬಿಸಿಲು ಬೀಳುವುದೇ ಅಪರೂಪ. ಆಗಾಗ್ಗೆ ಸುರಿಸುವ ಮಳೆಯಿಂದ ಥಂಡಿ ಥಂಡಿ ವಾತಾವರಣ, ಮೋಡ ಮುಸುಕಿನಿಂದಾಗಿ ಕತ್ತಲ ಅನುಭವ ಇರುವುದರಿಂದ ಮನೆಯೊಳಗೇ ಹೆಚ್ಚು ಹೊತ್ತು ಬೆಚ್ಚಗೆ ಇರಬೇಕು ಎನ್ನಿಸುವುದು ಸಹಜ. ಮಳೆಗಾಲದಲ್ಲಿಮನೆಯೊಳಗಿನ ವಾತಾವರಣವನ್ನು ಹಿತವಾಗಿಸಿಕೊಳ್ಳುವುದು ಅಗತ್ಯ.

ಬಿಡದೇ ಸುರಿಯುವ ಮಳೆಯಿಂದ ಕೆಲವೊಮ್ಮೆ ಮನಸ್ಸಿಗೂ ಬೋರ್‌ ಅನ್ನಿಸುವುದುಂಟು. ಅದಕ್ಕೆ ಮನೆಯೊಳಗೆ ಮನಸ್ಸಿಗೆ ಮುದ ನೀಡುವ ಹೋಮ್‌ ಡೆಕೋರ್‌ ಮಾಡಿ. ಬ್ರೈಟ್‌ ಕಲರ್‌ ಸೋಫಾ, ಹೂದಾನಿಗಳು, ಗೋಡೆಗಳಿಗೆ ಹೊಸದಾಗಿ ಪೇಂಟಿಂಗ್‌ ಮಾಡಿಸುವುದರ ಮೂಲಕ ಮನೆ-ಮನಕ್ಕೂ ಹೊಸತನವನ್ನು ತಂದುಕೊಳ್ಳಬಹುದು.
ಹಾಗಿರುವಾಗ ಮನೆಯ ಅಂದದ ಜತೆಗೆ ಹೊರಾಂಗಣದ ಬಗ್ಗೆಯೂ ತುಸು ಗಮನ ಹರಿಸಬೇಕಾದುದು ಬಹಳ ಅಗತ್ಯ. ಅಗಲವಾದ ತೆರೆದ ಅಂಗಳ ಇದ್ದರೆ, ಮನೆಯ ಮುಂದೆ ಮುಖ್ಯದ್ವಾರವನ್ನು ಸುಂದರವಾಗಿ ಕಾಣುವಂತೆ ಮಾಡುವುದು ಸುಲಭ. ಮನೆಯ ಮುಖ್ಯದ್ವಾರವನ್ನು ವಿವಿಧ ವಿನ್ಯಾಸದ ಮೂಲಕ ಅಲಂಕರಿಸಿದರೆ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಹೀಗೆ ಅಲಂಕರಿಸಿಕೊಳ್ಳುವಾಗ ಲೇಟೆಸ್ಟ್‌ ಟ್ರೆಂಡ್‌ನ್ನು ಆಯ್ಕೆ ಮಾಡಿಕೊಳ್ಳಿ.
ಪ್ರವೇಶದ್ವಾರ ಅಂದಾಕ್ಷಣ ಮನೆಯ ಮುಂಬಾಗಿಲು ಮಾತ್ರವಲ್ಲ, ಮನೆಯ ಹೊರಗಿಂದ ಮನೆಯ ಒಳಗೆ ಬರುವಲ್ಲಿಯವರೆಗೆ ಆಕರ್ಷಕವಾಗಿ, ಕ್ರಿಯಾತ್ಮಕವಾಗಿ ರಚಿಸಿದರೆ ಒಳ್ಳೆಯದು. ಒಂದು ವೇಳೆ ನೀವು ಸಣ್ಣ ಮನೆ ಅಥವಾ ಅಪಾರ್ಟ್‌ಮೆಂಟ್‌ನಲ್ಲಿರುವಿರಾದರೆ; ಸ್ವಲ್ಪವೇ ಜಾಗ ಆಗಿದ್ದರೆ ಗೋಡೆಗಳತ್ತ ಗಮನ ಹರಿಸಿ. ವಾಲ್‌ಫ್ರೇಂಗಳನ್ನು ಬಳಸಿಕೊಳ್ಳಿ. ವಿವಿಧ ಬಣ್ಣದ ಪೆಯಿಂಟಿಂಗ್‌ನ್ನು ಬಳಸಬಹುದು. ಗೋಡೆಗಳಿಗೆ ಕೆಳಗಿನಿಂದ ಬಳ್ಳಿಗಳನ್ನು ಹಬ್ಬಿಸಬಹುದು.


ವಿಶಾಲವಾದ ಜಾಗದಲ್ಲಿವಿವಿಧ ವಿನ್ಯಾಸಗಳಿಂದ ಅಥವಾ ಸಾಂಪ್ರದಾಯಿಕ ಕಲೆಗಳುಳ್ಳ ಆರ್ಟ್‌ಗಳನ್ನು ಬಳಸಬಹುದು. ಹೊರಭಾಗದಲ್ಲಿಸಾಂಪ್ರದಾಯಿಕ ಬೆಂಚುಗಳನ್ನು ಹಾಕಬಹುದು. ಗಾಢ ಬಣ್ಣ ಮತ್ತು ಬೆಳಕಿನ ಮಿಶ್ರಣದಿಂದ ಆಧುನಿಕ ಲುಕ್‌ ನೀಡಿ. ಒಂದು ಥೀಮ್‌ ಇಟ್ಟುಕೊಂಡು ಮನೆಯ ಮುಂದೆ ವಿನ್ಯಾಸಗಳನ್ನು ರಚಿಸಬಹುದು. ಎಲ್ಲವೂ ಸರಿಯಾಗಿ ಒಂದಕ್ಕೊಂದು ಹೊಂದಿಕೆಯಾಗುತ್ತಿದೆ ಎಂಬುದು ನೆನಪಿರಲಿ. ಬಣ್ಣ, ಆಕಾರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸವನ್ನು ರಚಿಸಿ.

ಒಳಾಂಗಣದಲ್ಲಿರಲಿ ಹಸಿರು ಸಿರಿ
ಹೂ, ಹಸಿರು ಗಿಡಗಳ ಹೂಕುಂಡಗಳು ಪ್ರವೇಶದ್ವಾರದಲ್ಲಿಸುಂದರ, ಹಿತವಾದ ವಾತಾವರಣವನ್ನು ನಿರ್ಮಿಸುತ್ತದೆ. ಬಾಗಿಲಿನ ಎರಡೂ ಬದಿ ಬಿದಿರು, ಅಡಿಕೆ ಗಿಡಗಳು, ಸ್ಪೈಡರ್‌ ಹುಲ್ಲು, ಜರ್ಬೆರಾ, ಲಿಲ್ಲಿಗಿಡದ ಹೂಕುಂಡವನ್ನಿಡಬಹುದು. ಗಿಡಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಪೊದೆಗಳಾಗಿ ಬೆಳೆಯುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಿ. ಕುಂಡಗಳನ್ನು ಅವುಗಳ ಎತ್ತರದ ಆಕಾರದಲ್ಲಿಯೇ ಜೋಡಿಸಿಡಿ. ಪ್ರವೇಶದ್ವಾರದ ಎರಡೂ ಬದಿ ಕನ್ನಡಿಗಳನ್ನಿಡಿ. ಒಂದರ ಪ್ರತಿಬಿಂಬ ಇನ್ನೊಂದರ ಮೇಲೆ ಬೀಳುವಂತಿರಲಿ.

ಬೆಳಕು ಬರುವಂತೆ ನೋಡಿಕೊಳ್ಳಿ
ಬೆಳಕು ಅಲ್ಲಿನ ವಾತಾವರಣವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಡುತ್ತದೆ. ಮೆಟ್ಟಿಲುಗಳಲ್ಲಿಸಣ್ಣ ವಿದ್ಯುತ್‌ಬಲ್ಬ್ಗಳನ್ನು ಜೋಡಿಸಿ. ಬಾಗಿಲಿನ ಎರಡೂ ಬದಿಯಲ್ಲಿಮೇಲ್ಮುಖವಾಗಿ ಅಥವಾ ಕೆಳಮುಖವಾಗಿ ಬೆಳಕು ಬೀಳುವಂತೆ ಮಾಡಿ. ಆದರೆ ಓವರ್‌ ಆಗಿ ಮಾಡದಿರಿ.

ವಾಸ್ತು ಪ್ರಕಾರ
ನಂಬಿಕೆಯ ಪ್ರಕಾರ ಪ್ರವೇಶದ್ವಾರದ ಬಗ್ಗೆ ಬೇರೆ ರೀತಿಯ ಸಂಪ್ರದಾಯ ಇರುತ್ತವೆ. ಮನೆಯ ಮುಂದೆ ಖಾಲಿ ಜಾಗ ಇರಬೇಕು, ಯಾವುದೇ ಅಡೆತಡೆಗಳು ಇರಬಾರದು. ಮನೆಯ ಪ್ರವೇಶದ್ವಾರದಲ್ಲಿಸಕಾರಾತ್ಮಕ ಶಕ್ತಿಗಳು ಒಳಬರುವುದರಿಂದ ಚೆಲ್ಲಾಪಿಲ್ಲಿಯಾಗಿ ವಸ್ತುಗಳನ್ನು ಇಡಬಾರದು ಎಂದೆಲ್ಲಾನಂಬುತ್ತಾರೆ. ಮನೆಯ ಮುಂದಿನ ಬಾಗಿಲಿನಲ್ಲಿಚಪ್ಪಲಿ, ಬ್ರಶ್‌, ತುಂಡಾದ ವಸ್ತುಗಳನ್ನು ಇಡಬಾರದು. ಮುಂಬಾಗಿಲಿಂದ ಒಳಬಂದ ತಕ್ಷಣ ಕಣ್ಣಿಗೆ ಕಾಣುವ ಹಾಗೆ ರಸಭರಿತ ಸಸ್ಯಗಳು, ಒಂದು ಬಟ್ಟಲು ನೀರು ಅಥವಾ ಅಕ್ವೇರಿಯಂನ್ನು ಜೋಡಿಸಿಟ್ಟರೆ ಒಳ್ಳೆಯದು. ಇವು ಮನೆಯ ಅಂದವನ್ನು ಹೆಚ್ಚಿಸುತ್ತವೆ.


ಹೀಗೆ ಮಾಡಿ ನೋಡಿ

  • ಮನೆಯ ಮುಂಭಾಗದಲ್ಲಿಮಳೆಗೆ ನೆನೆದು ಬರುವಾಗ ಒದ್ದೆಯಾದ ಕೊಡೆ, ರೇನ್‌ಕೋಟ್‌, ಶೂಸ್‌, ಚಪ್ಪಲಿಗಳನ್ನಿಡಲು ಮೊದಲೇ ವ್ಯವಸ್ಥೆ ಮಾಡಿಕೊಳ್ಳಿ. ಕೈಕಾಲು ತೊಳೆದುಕೊಳ್ಳಲು ನೀರು ಇರಲಿ.
  • ತೇವಾಂಶಕ್ಕೆ ಹೆಚ್ಚು ಫಂಗಸ್‌, ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುವುದರಿಂದ ಮನೆಯ ಮೂಲೆಗಳಲ್ಲಿಕಹಿಬೇವಿನ ಎಲೆ, ಕರ್ಪೂರ, ಲವಂಗವನ್ನು ಮಲಗುವ ಕೊಠಡಿಯಲ್ಲಿ, ಹಾಲ್‌ನಲ್ಲಿಒಂದು ಬೌಲ್‌ನಲ್ಲಿಹಾಕಿಟ್ಟುಕೊಳ್ಳಬಹುದು.
  • ಬಿಡದೇ ಸುರಿಯುವ ಮಳೆಯಿಂದ ಕೆಲವೊಮ್ಮೆ ಮನಸ್ಸಿಗೂ ಬೋರ್‌ ಅನ್ನಿಸುವುದುಂಟು. ಅದಕ್ಕೆ ಮನೆಯೊಳಗೆ ಮನಸ್ಸಿಗೆ ಮುದ ನೀಡುವ ಹೋಮ್‌ ಡೆಕೋರ್‌ ಮಾಡಿ. ಬ್ರೈಟ್‌ ಕಲರ್‌ ಸೋಫಾ, ಹೂದಾನಿಗಳು, ಗೋಡೆಗಳಿಗೆ ಹೊಸದಾಗಿ ಪೇಂಟಿಂಗ್‌ ಮಾಡಿಸಬಹುದು.
  • ಒಳಾಂಗಣ ಗಿಡಗಳನ್ನು ಬೆಳೆಸುವುದಕ್ಕೆ ಪರ್ಫೆಕ್ಟ್ ಸೀಸನ್‌. ರಾತ್ರಿ ಹೊತ್ತು ಅವುಗಳನ್ನು ಮಳೆಯ ನೀರು ಬೀಳುವಂತೆ ಹೊರಗಿಡಿ. ಗಿಡಗಳು ಬೇಗನೇ ಚಿಗುರೊಡೆಯುತ್ತವೆ.
  • ಕಿಟಕಿಗಳಿಗೆ ಬಳಸುವ ಕರ್ಟನ್‌ ಪಾರದರ್ಶಕವಾಗಿರಲಿ. ಸ್ವಲ್ಪವಾದರೂ ಬೆಳಕು ಒಳಗೆ ಬರುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles