ಬೇಕಾಗುವ ಸಾಮಗ್ರಿಗಳು: ಅವಲಕ್ಕಿ-1ಕಪ್, ಸಕ್ಕರೆ -1 ಕಪ್, ನೀರು- 2ಕಪ್, ಏಲಕ್ಕಿ ಪುಡಿ-1/4 ಚಮಚ, ಗೋಡಂಬಿ- 5, ಹಳದಿ ಬಣ್ಣ- ಚಿಟಿಕೆಯಷ್ಟು, ತುಪ್ಪ- 3ಚಮಚ.
ಮಾಡುವ ವಿಧಾನ: ತುಪ್ಪವನ್ನು ಬಿಸಿ ಮಾಡಿಕೊಂಡು ಅವಲಕ್ಕಿಯನ್ನು ರೋಸ್ಟ್ ಮಾಡಿಟ್ಟುಕೊಳ್ಳಿ. ಹೆಚ್ಚು ಹೊತ್ತು ರೋಸ್ಟ್ ಮಾಡಬಾರದು. ಮಿಕ್ಚರ್ಗೆ ಬಳಸುವಷ್ಟು ಹದವಾಗಿರಲಿ. ಅವಲಕ್ಕಿಯನ್ನು ಮಿಕ್ಸರ್ನಲ್ಲಿಒಂದೆರಡು ಸೆಕೆಂಡ್ ಗ್ರೈಂಡ್ ಮಾಡಿಕೊಳ್ಳಿ. ಬಾಣಲೆಯಲ್ಲಿಒಂದು ಚಮಚ ತುಪ್ಪ ಹಾಕಿ ಅದಕ್ಕೆ ತುಂಡರಿಸಿದ ಗೋಡಂಬಿ, ಒಣದ್ರಾಕ್ಷಿ ಹಾಕಿ ಫ್ರೈ ಮಾಡಿಟ್ಟುಕೊಳ್ಳಿ. ನಂತರ ಅವಲಕ್ಕಿ ಪುಡಿಯನ್ನು ರೋಸ್ಟ್ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಗೆ ನೀರು ಹಾಕಿ ಕುದಿಸಿ. ನೀರು ಕುದಿಯುತ್ತಿರುವಾಗ ಅದಕ್ಕೆ ಅವಲಕ್ಕಿ ಪುಡಿಯನ್ನು ಸೇರಿಸಿ ಕದಡುತ್ತಿರಿ. ಅವಲಕ್ಕಿ ಬೆಂದ ತಕ್ಷಣ ಅದಕ್ಕೆ ಸಕ್ಕರೆ ಸೇರಿಸಿ. ನಂತರ ಗೋಡಂಬಿ, ದ್ರಾಕ್ಷಿ ಸೇರಿಸಿ. ಮಧ್ಯಮ ಉರಿಯಲ್ಲಿಟ್ಟುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಒಂದೆರಡು ಚಮಚ ತುಪ್ಪ ಸೇರಿಸಿ. ಬಾಣಲೆಯಿಂದ ಬಿಟ್ಟುಕೊಳ್ಳುವಾಗ ಉರಿಯನ್ನು ಆಫ್ ಮಾಡಿ.