ಬೇಕಾಗುವ ಸಾಮಗ್ರಿಗಳು: ನವಣೆ-1/4ಕಪ್, ಬೆಲ್ಲ-1/4ಕಪ್, ತುರಿದ ಕೊಬ್ಬರಿ-1/4ಕಪ್, ಹಾಲು- 2ಕಪ್, ಏಲಕ್ಕಿ ಪುಡಿ-1/4ಚಮಚ, ನೀರು-1/2ಕಪ್, ತುಪ್ಪ-1ಚಮಚ, ಗೋಡಂಬಿ-8, ಒಣದ್ರಾಕ್ಷಿ-10.
ಮಾಡುವ ವಿಧಾನ: ನವಣೆ ಅಕ್ಕಿಯನ್ನು ಬಾಣಲೆಯಲ್ಲಿಹುರಿದುಕೊಂಡು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.ತಣ್ಣಗಾದ ನಂತರ 3/4ಕಪ್ ನೀರು ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿ. ಕೊಬ್ಬರಿಯನ್ನು ಸ್ವಲ್ಪ ನೀರು ಹಾಕಿ ರುಬ್ಬಿಕೊಂಡು ಅದನ್ನು ಬೇಯಿಸಿದ ನವಣೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬೆಲ್ಲವನ್ನು ಬಿಸಿ ಮಾಡಿ ಕರಗಿಸಿ ಅದನ್ನು ನವಣೆ ಮಿಶ್ರಣಕ್ಕೆ ಸೇರಿಸಿ. ನಿರಂತರ ಕದಡುತ್ತಾ 5 ನಿಮಿಷ ಬೇಯಿಸಿ. ಅದಕ್ಕೆ 2 ಚಮಚ ತುಪ್ಪ ಸೇರಿಸಿ. ಗೋಡಂಬಿ ದ್ರಾಕ್ಷಿಯನ್ನು ತುಪ್ಪದಲ್ಲಿಹುರಿದು ಪಾಯಸಕ್ಕೆ ಸೇರಿಸಿ ಸವಿಯಿರಿ.